Yash Toxic: ಹಾಲಿವುಡ್ ಅಂಗಳದಲ್ಲೂ ಕನ್ನಡಿಗರ ಟಾಕ್ಸಿಕ್ ಕಂಡು ಸಂಚಲನ ಶುರು
ಜನವರಿ 8 ಇನ್ನೇನು ಬರಲಿದ್ದು, ಈ ದಿನ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿ ಬಳಗದ ಪಾಲಿಗೆ ಎಂದೂ ಮರೆಯಲು ಆಗದ ಕ್ಷಣ. 39 ವರ್ಷದ ಯಶ್ ಅವರು ಇದೇ ಜನವರಿ 8 ಗುರುವಾರ 40ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹೀಗಾಗಿಯೇ ಕೋಟಿ, ಕೋಟಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡು ಕಾಯುತ್ತಾ ಕುಳಿತಿದ್ದಾರೆ. ಆದರೆ ಅಸಲಿ ಮ್ಯಾಟರ್ ಬೇರೆ ಇದ್ದು, ಹಾಲಿವುಡ್ ಅಂಗಳದಲ್ಲೂ ಸಂಚಲನ ಈಗ ಸೃಷ್ಟಿಯಾಗಿದೆ.
ಯಶ್ ಅವರ ಹುಟ್ಟುಹಬ್ಬಕ್ಕೆ ಭರ್ಜರಿಯಾದ ಉಡುಗೊರೆ ಈಗ ಕಾಯುತ್ತಿದೆ. ಕೆಜಿಎಫ್-1 ಮತ್ತು ಕೆಜಿಎಫ್-2 ನಂತರ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಬೆಳೆದು ನಿಂತರು ಯಶ್. ಕನ್ನಡಿಗ ಯಶ್ ಅವರ ಈ ಸಾಧನೆ ಬಗ್ಗೆ ಕನ್ನಡಿಗರಿಗೆ ಹೆಮ್ಮೆ ಇದೆ. ಹೀಗಿದ್ದಾಗ ಜಾಗತಿಕ ಸಿನಿಮಾ ಲೋಕದಲ್ಲಿ ಕೂಡ ಯಶ್ ಅವರ ಹವಾ ಜೋರಾಗಿದೆ. ಇನ್ನೇನು ಟಾಕ್ಸಿಕ್ ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಿ ಅಬ್ಬರಿಸಲಿದೆ. ಇಂತಹ ಸಮಯದಲ್ಲೇ ಮತ್ತೊಂದು ಮಾಹಿತಿ ಗಮನ ಸೆಳೆದಿದೆ. ಅದು ಏನಂದ್ರೆ ಟಾಕ್ಸಿಕ್ ಸಿನಿಮಾ ಹಾಲಿವುಡ್‌ನಲ್ಲಿ ರಿಲೀಸ್ ಆಗುವ ಜೊತೆಗೆ, ಇಡೀ ಜಗತ್ತನ್ನೇ ನಡುಗಿಸಿದ್ದ ದೊಡ್ಡ ದೊಡ್ಡ ಪಾತ್ರಗಳು ಈ ಸಿನಿಮಾದಲ್ಲಿ ಬರಲಿವೆ ಎಂಬ ಚರ್ಚೆ ಶುರುವಾಗಿದೆ.

ಕನ್ನಡ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ!
ಭಾರತೀಯ ಸಿನಿಮಾ ರಂಗ ಹಾಲಿವುಡ್ ಬಿಟ್ಟರೆ ಇಡೀ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಸಿನಿಮಾ ಕ್ಷೇತ್ರ. ಇಷ್ಟುದಿನ ಭಾರತೀಯ ಸಿನಿಮಾ ಇಂಡಸ್ಟ್ರಿ ಅಂದ್ರೆ ಬಾಲಿವುಡ್ ಮಾತ್ರ ಅನ್ನೋ ಮಾತು ಇತ್ತು. ಆದರೆ ಕೆಜಿಎಫ್ ಮತ್ತು ಕಾಂತಾರಾ ಸಿನಿಮಾಗಳು ಅದನ್ನ ಸುಳ್ಳು ಮಾಡಿದ್ದವು, ಇದೀಗ ಕನ್ನಡ ಸಿನಿಮಾಗಳು ಕೂಡ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿವೆ.
ಈ ಹೊತ್ತಲ್ಲೇ ಕನ್ನಡ ಸಿನಿಮಾ ಒಂದು ಇದೀಗ ಭಾರಿ ದೊಡ್ಡ ಮಟ್ಟದಲ್ಲಿ ಹಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವುದು ಅಭಿಮಾನಿಗಳು ಸಖತ್ ಖುಷಿ ಕೊಟ್ಟಿದೆ. ಹಾಗಾದರೆ ಯಾವ ಯಾವ ದೊಡ್ಡ ದೊಡ್ಡ ಪಾತ್ರಗಳು ಟಾಕ್ಸಿಕ್ ಸಿನಿಮಾದ ಕಥೆಯಲ್ಲಿ ಎಂಟ್ರಿ ಕೊಡಬಹುದು? ಎನ್ನುವ ಕುತೂಹಲ ಹೆಚ್ಚಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಬಗ್ಗೆ ದೊಡ್ಡ ಮಟ್ಟದಲ್ಲೇ ಚರ್ಚೆ ಮಾಡುತ್ತಿದ್ದಾರೆ.
ಯಶ್ ದ್ವಿಪಾತ್ರದಲ್ಲಿ ನಟನೆ ಮಾಡಿದ್ದಾರಾ?
ಹಾಗೇ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಅವರದ್ದು ದ್ವಿಪಾತ್ರ ಅಂತಾ ಕೂಡ ಚರ್ಚೆ ನಡೆಯುತ್ತಾ ಇದೆ. ಆದರೆ ಸಿನಿಮಾ ತಂಡ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿರುವ ಈ ಸಿನಿಮಾ 2026 ಮಾರ್ಚ್ 19ಕ್ಕೆ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಜನವರಿ 8ಕ್ಕೆ ಟೀಸರ್ ರಿಲೀಸ್ ಆಗುವ ಸಾಧ್ಯತೆ ಇದ್ದು ಕುತೂಹಲ ಮತ್ತೆ ಮತ್ತೆ ಹೆಚ್ಚಾಗುತ್ತಿದೆ. ಹಾಗೇ ಲ್ಯಾಟಿನ್ ಅಮೆರಿಕದ ಖ್ಯಾತ ಡಗ್ಸ್ ದೊರೆಯ ಪಾತ್ರ ಟಾಕ್ಸಿಕ್‌ನಲ್ಲಿ ಇದೆಯಾ? ಎಂಬ ಪ್ರಶ್ನೆ ಇಡೀ ಜಗತ್ತನ್ನು ಕಾಡುತ್ತಿದೆ. ಯಾಕಂದ್ರೆ ಈಗಾಗಲೇ ಈ ಬಗ್ಗೆ ಹಿಂಟ್ ಸಿಕ್ಕಿದೆ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.












Click it and Unblock the Notifications