ಕನ್ನಡಿಗರಿಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟ ರಾಕಿಭಾಯ್ ಯಶ್, ಇನ್ನು ದೀಪಾವಳಿ ಗ್ಯಾರಂಟಿ ಅಂತಾ... Yash Toxic Teaser
ಕನ್ನಡ ಸಿನಿಮಾ ಇಂಡಸ್ಟ್ರಿಗೇ ಹಾಲಿವುಡ್ ಲೆವೆಲ್ ಹೈಪ್ ಕೊಡಿಸಿದ ಕೀರ್ತಿ ಮಾನ್ಯ ಯಶ್ ಅಲಿಯಾಸ್ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಲ್ಲಬೇಕು. ಯಾಕಂದ್ರೆ ಕನ್ನಡ ಸಿನಿಮಾಗಳನ್ನ ನೋಡಲು ಹಿಂದೆ & ಮುಂದೆ ಯೋಚನೆ ಮಾಡುತ್ತಿದ್ದ ಪರಭಾಷಿಕರಿಗೆ ಸರಿಯಾಗಿ ಮುಟ್ಟಿ, ಮುಟ್ಟಿ ನೋಡಿಕೊಳ್ಳುವ ರೀತಿ ಮಾಂಜಾ ಕೊಟ್ಟಿದ್ದೇ ರಾಕಿಂಗ್ ಸ್ಟಾರ್ ಯಶ್ ಅವರು. ಹೀಗೆ ಇದ್ದಾಗ 'ಕೆಜಿಎಫ್ ಚಾಪ್ಟರ್-2' ಬಳಿಕ ಯಶ್ ಖಾಲಿ ಇದ್ದಾರೆ & ಮಾರ್ಕೆಟ್ ಬಿದ್ದೋಯ್ತು ಅಂತಾ ಬಾಯಿ ಬಡಿದುಕೊಳ್ಳುತ್ತಿದ್ದ ಯಶ್ ವಿರೋಧಿಗಳಿಗೆ ಇವತ್ತು ಆಘಾತ ಎದುರಾಗಿದೆ!
ಹೌದು, ಕನ್ನಡಿಗರಿಗೆ ದೊಡ್ಡದಾಗಿ ಸಿಗ್ನಲ್ ಕೊಟ್ಟ ರಾಕಿಭಾಯ್ ಯಶ್ ಇದೀಗ ಸಂಚಲನ ಸೃಷ್ಟಿಸಿ ಹಾಲಿವುಡ್ ಕೂಡ ಶೇಕ್ ಆಗುವಂತೆ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಎಂಬ ಬಿರುದು ಪಡೆದಿರುವ ಯಶ್ ಹೊಸ ಸಿನಿಮಾಗಾಗಿ ಹಲವು ವರ್ಷಗಳಿಂದ ಅಭಿಮಾನಿಗಳು ಕಾಯುತ್ತಿದ್ದು, ಇದೀಗ ಭರ್ಜರಿ ಸುದ್ದಿ ಸಿಕ್ಕಿದೆ. ಕನ್ನಡ ಸಿನಿಮಾಗಳ ತಾಕತ್ ಏನು? ಅನ್ನೋದು ಮತ್ತೊಮ್ಮೆ ಇಡೀ ಜಗತ್ತಿಗೇ ಮನವರಿಕೆ ಮಾಡಿಸಲು ಹೊರಟಿದ್ದಾರೆ ರಾಕಿಭಾಯ್ ಯಶ್!

ಬಾಯಲ್ಲಿ ಸಿಗಾರ್ & ಓಲ್ಡ್ ಮಾಡೆಲ್ ಕಾರ್!
ಅಂದಹಾಗೆ ಇದೀಗ 'ಟಾಕ್ಸಿಕ್' ಸಿನಿಮಾದ ಟೀಸರ್ ಅದ್ಧೂರಿಯಾಗಿ ರಿಲೀಸ್ ಆಗಿದೆ. ಯಶ್ ಹುಟ್ಟುಹಬ್ಬ ಹಿನ್ನೆಲೆ 'ಟಾಕ್ಸಿಕ್' ಚಿತ್ರತಂಡ ಟೀಸರ್ ರಿಲೀಸ್ ಮಾಡುವ ಮೂಲಕ ಭರ್ಜರಿ ಗಿಫ್ಟ್ ಕೊಟ್ಟಿದೆ. ಕೋಟಿ ಕೋಟಿ ಅಭಿಮಾನಿಗಳು ಜಗತ್ತಿನಾದ್ಯಂತ ರಾಕಿಭಾಯ್ ಯಶ್ ಎಂಟ್ರಿ ಯಾವಾಗ ಅಂತಾ ಕಾಯುತ್ತಿದ್ದರು. ಇದೀಗ ಬಾಯಲ್ಲಿ ಸಿಗಾರ್ ಹಿಡಿದುಕೊಂಡು & ರೆಟ್ರೋ ಶೈಲಿ ಕಾರ್ ಹತ್ತಿಕೊಂಡು ರಾಕಿಭಾಯ್ ಯಶ್ ಅವರು ಭಾರಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡಿಗರ ಮನಸ್ಸು ಗೆದ್ದು, 'ಕೆಜಿಎಫ್' ಸಿನ್ಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಹೆಸರು ತಂದುಕೊಟ್ಟ ನಟ ಯಶ್ ಅವರು ಈಗ ಹಾಲಿವುಡ್ ಲೆವೆಲ್ ಸಿನಿಮಾ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಸಿನಿಮಾ 'ಟಾಕ್ಸಿಕ್' ಬಗ್ಗೆ ಸಖತ್ ಕುತೂಹಲ ಕಾಡುತ್ತಿದೆ. ಇಷ್ಟೆಲ್ಲಾ ಕೌತುಕ & ಕುತೂಹಲ ನಡುವೆ ಇಂದು ಯಶ್ ಅವರ 'ಟಾಕ್ಸಿಕ್' ಸಿನಿಮಾದ ಟೀಸರ್ ಅದ್ಧೂರಿಯಾಗಿ ರಿಲೀಸ್ ಆಗಿದೆ. ಹಾಗಾದ್ರೆ ಏನೆಲ್ಲಾ ಹಿಂಟ್ ಕೊಟ್ಟಿದ್ದಾರೆ ಯಶ್ ಅವರು?
ಡ್ರಗ್ ಲೋಕದ ದೊರೆಯಾಗಿ ಯಶ್ ಎಂಟ್ರಿ?
ಹೌದು, ಇದೀಗ 'ಟಾಕ್ಸಿಕ್' ಟೀಸರ್ ನೋಡ್ತಾ ಇದ್ರೆ ರಾಕಿಂಗ್ ಸ್ಟಾರ್ ಯಶ್ ಅವರು ಏನೋ ದೊಡ್ಡದಾಗಿ ಮಾಡ್ತಾ ಇರುವಂತೆ ಕಾಣುತ್ತಿದೆ. ಅದರಲ್ಲೂ 'ಟಾಕ್ಸಿಕ್' ಟೀಸರ್ ಪೂರ್ತಿ ಭಾರಿ ಕುತೂಹಲಗಳ ಸರಮಾಲೆ ಇಟ್ಟಿದ್ದಾರೆ. ಯಶ್ ಎಂಟ್ರಿ ಕೊಟ್ಟ ಕಾರು ಇಂಗ್ಲೆಂಡ್ ರಾಣಿಯದ್ದು ಅಂತಾ ಹೇಳಲಾಗ್ತಿದ್ದು, ಇನ್ನೊಂದು ಕಡೆ ಯಶ್ ಬೆನ್ನ ಹಿಂದೆ ಕೊಲಂಬಿಯಾದ ಮಾದಕ ದ್ರವ್ಯಗಳ ದೊರೆ ಪ್ಯಾಬ್ಲೋ ಎಸ್ಕೋಬಾರ್ ಇರುತ್ತಾನೆ ಎಂಬ ಮಾತುಗಳೂ ಕೇಳಿ ಬಂದಿದೆ. ಈ ಮೂಲಕ ಇಂಟರ್‌ನ್ಯಾಷನಲ್ ಸಿನಿಮಾ ಆಗಿ ಮೂಡಿ ಬರಲು ಟಾಕ್ಸಿಕ್ ಸಿದ್ಧವಾಗಿದೆ.












Click it and Unblock the Notifications