ನಟ ದರ್ಶನ್‌ಗೆ ಎಲ್ಲ ಕೈದಿಗಳಂತೆ ಇದಕ್ಕೆ ಅವಕಾಶವೇ ಇಲ್ಲ!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್‌ ತೂಗುದೀಪ ಅವರಿಗೆ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ರೂಲ್ಸ್‌ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಂತೆ ದರ್ಶನ್‌ ಬಳ್ಳಾರಿ ಜೈಲಲ್ಲಿ ಆರಾಮವಾಗಿರಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಬಳ್ಳಾರಿ ಜೈಲಿನಲ್ಲಿ ಎಲ್ಲ ಕೈದಿಗಳೂ ಹಗಲಿನಲ್ಲಿ ಅಲ್ಲಿನ ಆವರಣದಲ್ಲಿ ಓಡಾಡಲು, ಕೆಲಸ ಮಾಡಲು ಅವಕಾಶ ಅವಕಾಶವಿದೆ. ಬಳಿಕ ಸಮಯ ಮುಗಿದ ನಂತರ ಎಲ್ಲ ಕೈದಿಗಳು ಲಾಕಪ್‌ಗೆ ಓಡಬೇಕು. ಆದರೆ ನಟ ದರ್ಶನ್‌ ವಿಶೇಷ ಭದ್ರತಾ ಸೆಲ್‌ನಲ್ಲಿ ಇರುವುದರಿಂದ ಎಲ್ಲ ಕೈದಿಗಳಂತೆ ಹೊರಗೆ ತಿರುಗಾಡಲು ಅವಕಾಶವೇ ಇಲ್ಲ. ಈ ಸೆಲ್‌ನಲ್ಲಿ ಇದ್ದವರನ್ನು ಹೊರಗಡೆ ಬಿಡುವುದೂ ಇಲ್ಲ ಎನ್ನಲಾಗಿದೆ.

Tough Rules For Kannada Actor Darshan In Bellary Jail

ಆದರೆ, ದರ್ಶನ್‌ ಒಳಗಡೆಯೇ ಇರಲು ಕಷ್ಟವಾಗುವುದರಿಂದ ಪ್ರತಿ ದಿನ ಕೇವಲ ಒಂದು ಗಂಟೆ ಮಾತ್ರವೇ ಸೆಲ್‌ನಿಂದ ಹೊರಬಂದು ಓಡಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ವರದಿಯಾಗಿದೆ. ದಿನವಿಡೀ ಸೆಲ್‌ನಲ್ಲೇ ಇರುವುದರಿಂದ ದರ್ಶನ್‌ ಅವರಿಗೆ ಬೋರ್‌ ಕೂಡ ಆಗುತ್ತದೆ. ಹಾಗಾಗಿ, ಬೆಳಿಗ್ಗೆ ಹಾಗೂ ಸಂಜೆ ಸ್ವಲ್ಪ ಸಮಯ ಹೊರಗೆ ಬಿಡುವಂತೆ ದರ್ಶನ್‌ ಮನವಿ ಮಾಡಿಕೊಂಡಿದ್ದಾರಂತೆ.

ನಟ ದರ್ಶನ್‌ ಈ ಹಿಂದೆ ತನ್ನ ಸೆಲ್‌ಗೆ ಒಂದು ಟಿ.ವಿ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಜೈಲಾಧಿಕಾರಿಗಳು ಟಿ.ವಿ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ದರ್ಶನ್ ಅವರ ಸೆಲ್‌ಗೆ ಇನ್ನೂ ಟಿ.ವಿ ಅಳವಡಿಸಲು ಸಾಧ್ಯವಾಗಿಲ್ಲ. ಹಳೇ ಟಿ.ವಿ ರಿಪೇರಿ ಇನ್ನೂ ಆಗಿಲ್ಲ. ಹೊಸ ಟಿ.ವಿ ತಂದು ಕೊಡಲು ಅನುದಾನವಿಲ್ಲ ಎಂದು ಜೈಲಿನ ಮೂಲಗಳು ತಿಳಿಸಿವೆ.

ನಟ ದರ್ಶನ್‌ ಅವರಿಗೆ ಬೋರ್‌ ಆಗುವುದನ್ನು ತಡೆಯಲು ಕೆಲವು ಕತೆ ಪುಸ್ತಕಗಳು ಹಾಗೂ ಕಾದಂಬರಿಗಳನ್ನು ಕೊಡಲಾಗಿದೆ ಎಂದು ಹೇಳಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ನಡೆದ ಯಾವ ಘಟನೆಗಳೂ ಬಳ್ಳಾರಿಯಲ್ಲಿ ಮರುಕಳಿಸಬಾರದು ಎಂದು ಈ ಬಾರಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ದರ್ಶನ್‌ ಬೆಂಗಳೂರಿನಲ್ಲಿರುವಂತೆ ಬಳ್ಳಾರಿ ಜೈಲಿನಲ್ಲಿರಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ.

Tough Rules For Kannada Actor Darshan In Bellary Jail

ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಕಾರಾಗೃಹ ಹಿರಿಯ ಅಧಿಕಾರಿಗಳು ವಿಶೇಷ ರೂಲ್ಸ್‌ ಜಾರಿ ತಂದಿದ್ದಾರೆ. ಅದೇನಂದ್ರೆ, ದರ್ಶನ್ ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಬೇಕು ಹಾಗೂ ಆ ಸೆಲ್‌ಗೆ 24x7 ಅವಧಿಗೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಬೇಕು. ಪ್ರತಿದಿನವೂ ಈ ರೆಕಾರ್ಡಿಂಗ್‌ಗಳನ್ನು ಸ್ಟೋರೇಜ್‌ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ದರ್ಶನ್ ಇರುವ ಸೆಲ್ ಕಾಯಲು ಪ್ರತ್ಯೇಕವಾಗಿ ಒಬ್ಬ ಅಧಿಕಾರಿ ಇರಲಿದ್ದಾರೆ. ಈ ಸೆಲ್‌ಗೆ ಜೈಲರ್ ಪ್ರತಿದಿನ ಭೇಟಿ ನೀಡಿ ಭದ್ರತೆಯನ್ನು ಚೆಕ್‌ ಮಾಡುತ್ತಿದ್ದಾರೆ. ಜೈಲಿನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸೆಲ್‌ಗೆ ಬೀಗ ಹಾಕುವುದು ಮತ್ತು ಬೀಗ ತೆಗೆಯುವುದು ನಡೆಯುತ್ತಿದೆ. ದರ್ಶನ್‌ ಸೆಲ್‌ಗೆ ನಿಯೋಜಿಸುವ ಅಧಿಕಾರಿ ಕಡ್ಡಾಯವಾಗಿ ಬಾಡಿವೋರ್ನ್' ಕ್ಯಾಮೆರಾ ಧರಿಸಲು ಸೂಚಿಸಿದ್ದು, ದರ್ಶನ್‌ ಅವರ ಪ್ರತಿ ಚಲನವಲನವೂ ಕಣ್ಗಾವಲಿನಲ್ಲಿರಲಿದೆ.

ನಿನ್ನೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ವಿಚಾರಣೆಗೆ ದರ್ಶನ್‌ ಹಾಜರಾಗಿದ್ದರು. ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್‌ ಮತ್ತೆ ಮುಂದೂಡಿದ ಕಾರಣ, ನಟ ದರ್ಶನ್‌ ಜೈಲಿನಲ್ಲೇ ಇರಬೇಕಾಗಿದೆ. ಇನ್ನು ದರ್ಶನ ಪತ್ನಿ ವಿಜಯಲಕ್ಷ್ಮಿ ಹಾಗೂ ತಾಯಿ ನಾಳೆ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+