BBK 12: ತಾಕತ್ ಇದ್ರೆ ಟಚ್ ಮಾಡು, ಕಿರುಚಿದ್ರೆ ಯಾರೂ ಹೆದರಲ್ಲ: ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ vs ಅಶ್ವಿನಿ ಫೈಟ್
Bigg Boss Kannada 12: ಬಿಗ್‌ಬಾಸ್ ಮನೆ ಅಕ್ಷರಶಃ ರಣರಂಗವಾಗಿದೆ. ಟಾಸ್ಕ್ ಶುರುವಾದ ಕೂಡಲೇ ಸ್ಪರ್ಧಿಗಳ ನಡುವೆ ಗಲಾಟೆ, ರಂಪಾಟ ಜೋರಾಗಿದೆ. ಒಂಟಿ-ಜಂಟಿಗಳ ನಡುವೆ ಕಾದಾಟ ಶುರುವಾಗಿದ್ದು, ಏಕವಚನದಲ್ಲಿ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ಅಚ್ಚರಿಯೆಂದರೆ ಈ ಬಾರಿ ಅಶ್ವಿನಿ vs ಅಶ್ವಿನಿ ಫೈಟಿಂಗ್‌ಗೆ ಉಳಿದ ಸ್ಪರ್ಧಿಗಳು ಸೈಲೆಂಟ್ ಆಗಿದ್ದಾರೆ. ಅಶ್ವಿನಿ ಗೌಡ ಹಾಗೂ ಅಶ್ವಿನಿ ರಣಚಂಡಿಯರಂತೆ ಅವತಾರ ತಾಳಿದ್ದಾರೆ. ಇವರಿಬ್ಬರ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಕಲರ್ಸ್ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಬಿಗ್‌ಬಾಸ್ ಮನೆಯಲ್ಲಿ ನಡೆದಿರುವ ಭಾರೀ ಫೈಟಿಂಗ್ ಇದೆ. ಒಂದು ಬಾಟಲ್ ವಿಚಾರಕ್ಕೆ ಅಶ್ವಿನಿ ಗೌಡ ಹಾಗೂ ಅಶ್ವಿನಿ ನಡುವೆ ರಂಪಾಟ ಜೋರಾಗಿ ನಡೆದಿದೆ. "ತಾಕತ್ ಇದ್ರೆ ಟಚ್ ಮಾಡಿ" ಎಂದು ಅಶ್ವಿನಿ ಗೌಡ ಅವಾಜ್ ಹಾಕಿದ್ದಾರೆ. ಸಹಸ್ಪರ್ಧಿಯಾಗಿರುವ ಅಶ್ವಿನಿ ಮೇಲೆ ಅಶ್ವಿನಿ ಕೂಗಾಡಿದ್ದಾರೆ.

"ನನ್ನ ಮೇಲೆ ಮ್ಯಾನ್ ಹ್ಯಾಂಡ್ಲಿಂಗ್ ಮಾಡೋದಲ್ಲ ಇಟ್ಕೋಬೇಡಿ" ಎಂದು ಅಶ್ವಿನಿ ಗೌಡ ಅವಾಜ್ ಹಾಕಿದ್ದಾರೆ. "ಆಟಾನ ಆಟ ತರ ಆಡು" ಎಂದು ಕಿರುಚಾಡಿದ್ದಾರೆ. ಇದಕ್ಕೆ ಅಶ್ವಿನಿ ಕೂಡ ತಿರುಗೇಟು ನೀಡಿದ್ದು, "ಮಾತನ್ನ ತಿರುಚಬೇಡಿ" ಎಂದಿದ್ದಾರೆ. "ಸುಮ್ಮನೆ ಕಿರುಚಾಡೋದಲ್ಲ, ನೀನು ಕಿರುಚಿದ್ರೆ ಇಲ್ಲಿ ಯಾರೂ ಹೆದರಲ್ಲ" ಎಂದು ಕೌಂಟರ್ ಕೊಟ್ಟಿದ್ದಾರೆ.
ʼಯೋಗ್ಯತೆ ಇದ್ರೆ ಆಟ ಆಡು, ಮೈ ಫುಟ್ʼ
ʼಯೋಗ್ಯತೆ ಇದ್ರೆ ಆಟ ಆಡಬೇಕು ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಯೋಗ್ಯತೆ ಇರೋದಕ್ಕೇನೆ ಇಲ್ಲಿರೋದು ಎಂದು ಅಶ್ವಿನಿ ಕೂಡ ಮಾತಿಗೆ ಮಾತು ಕೊಟ್ಟಿದ್ದಾರೆ. ನನಗೆ ಹೇಳೋಕೆ ನೀನ್ಯಾರು? ಎಂದು ಮತ್ತೆ ಗಲಾಟೆ ಶುರುವಾಗಿದ್ದು, ನನಗೂ ಮಾತಾಡೋಕೆ ಬರುತ್ತೆ, ಬಾಯಿ ಮುಚ್ಕೊಂಡು ಇರಿ ಎಂದು ಸೈಲೆಂಟ್ ಆಗಿದ್ದ ಅಶ್ವಿನಿ ವೈಲೆಂಟ್ ಆಗಿದ್ದಾರೆ. ಹೂ ದ ಹೆಲ್ ಆರ್ ಯೂ, ಮೈ ಫುಟ್ʼ ಎಂದು ಅಶ್ವಿನಿಗೌಡ ಏರುಧ್ವನಿಯಲ್ಲಿ ಅರಚಾಡಿದ್ದಾರೆ. ಈ ಇಬ್ಬರ ಜಗಳ ನೋಡಿ ಉಳಿದ ಸ್ಪರ್ಧಿಗಳೆಲ್ಲ ಕಣ್ಣು, ಬಾಯಿ ಬಿಟ್ಕೊಂಡು ನೋಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಈ ಗಲಾಟೆಯಿಂದ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ. ಒಂದು ಬಾಟಲ್ ವಿಚಾರಕ್ಕೆ ಶುರುವಾದ ಗಲಾಟೆಯು ಅತಿರೇಕಕ್ಕೆ ತಲುಪಿದೆ. ಪ್ರೋಮೋ ನೋಡಿದರೆ ದೊಡ್ಡ ಗಲಾಟೆಯೇ ನಡೆದಂತಿದ್ದು, ಅಸಲಿ ವಿಚಾರವೇನು ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ಈ ಗಲಾಟೆಯಿಂದ ಬಿಗ್‌ಬಾಸ್ ಯಾರಿಗೆ ಶಿಕ್ಷೆ ಕೊಡ್ತಾರೆ, ಇಲ್ಲಿ ಯಾರದ್ದು ತಪ್ಪು? ಸರಿ ಎನ್ನುವುದು ಎಪಿಸೋಡ್ ನೋಡಿದ ನಂತರ ತಿಳಿಯಲಿದೆ. ಕಳೆದ ವಾರ ಗಿಲ್ಲಿ ಜೊತೆಗೆ ಅಶ್ವಿನಿ ಗೌಡ ಗಲಾಟೆ ಮಾಡಿಕೊಂಡಿದ್ದರು. ಈಗ ಅಶ್ವಿನಿ vs ಅಶ್ವಿನಿ ಫೈಟ್ ನಡೆದಿದೆ.












Click it and Unblock the Notifications