ವಿಶ್ವ ದಾಖಲೆ ನಿರ್ಮಿಸಿದ ಮೆಗಾಸ್ಟಾರ್ ಚಿರಂಜೀವಿ; ಯಾವ ಕಾರಣಕ್ಕೆ ಗೊತ್ತಾ?
ಟಾಲಿವುಡ್‌ನ ಮೆಗಾಸ್ಟಾರ್ ಖ್ಯಾತಿಯ ಹಿರಿಯ ನಟ ಚಿರಂಜೀವಿ ಅವರು ವಿಶ್ವದಾಖಲೆ ಮಾಡಿ ಗಮನ ಸೆಳೆದಿದ್ದಾರೆ. ಹಲವು ದಶಕಗಳ ಕಾಲ ನಟನೆಯಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿರುವ ಅವರು ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು. ಚಿರು ಅವರ ಡ್ಯಾನ್ಸ್ ವೈಖರಿಯೇ ಅವರನ್ನು ಗಿನ್ನೀಸ್ ದಾಖಲೆಗೆ ಸೇರ್ಪಡೆ ಮಾಡಿದೆ.
ಚಿರಂಜೀವಿ ಅವರು ಬರೋಬ್ಬರಿ 156 ಸಿನಿಮಾಗಳಲ್ಲಿ ನಟಿಸಿದ್ದು, ಕಳೆದ 46 ವರ್ಷಗಳಿಂದ ಅವರು ಸಿನಿಮಾರಂಗದಲ್ಲಿ ಹವಾ ಸೃಷ್ಟಿಸಿದ್ದಾರೆ. ಚಿರಂಜೀವಿ ಅವರು ತಮ್ಮ ನಟನಾ ಜೀವನದಲ್ಲಿ ಬರೋಬ್ಬರಿ 537 ಹಾಡುಗಳಲ್ಲಿ ಅದ್ಭುತವಾದ ಡ್ಯಾನ್ಸ್ ಮಾಡಿದ್ದಾರೆ. ಏನಿಲ್ಲವೆಂದರೂ 24,000 ಸಾವಿರ ಭರ್ಜರಿ ಸ್ಟೆಪ್ಸ್ ಕೂಡ ಹಾಕಿದ್ದಾರಂತೆ. ಇದೇ ಕಾರಣಕ್ಕೆ ಚಿರು ಅವರ ಹೆಸರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಯಾಗಿದೆ.

ಹಾಗಾಗಿ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಚಿರಂಜೀವಿ ಅವರಿಗೆ Most Prolific Film Star in the Indian Film Industry (Actor/Dancer) ಎನ್ನುವ ಪ್ರಮಾಣ ಪತ್ರವನ್ನು ಪ್ರದಾನ ಮಾಡಿದೆ. ನಿನ್ನೆ ಹೈದರಾಬಾದ್‌ನಲ್ಲಿ ಈ ಅದ್ಧೂರಿ ಕಾರ್ಯಕ್ರಮ ನಡೆದಿದ್ದು, ಬಾಲಿವುಡ್ ನಟ ಅಮೀರ್ ಖಾನ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ವಿಶ್ವದಾಖಲೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಚಿರಂಜೀವಿ, ನನ್ನ ಪಾಲಿಗೆ ಇದೊಂದು ಅವಿಸ್ಮರಣೀಯ ಕ್ಷಣ. ನಾನು ಮಾಡಿದ ಡ್ಯಾನ್ಸ್‌ನಿಂದಾಗಿ ಈ ರೀತಿ ಗಿನ್ನಿಸ್ ವಿಶ್ವ ದಾಖಲೆಗೆ ಭಾಜನವಾಗುತ್ತೇನೆ ಎಂದು ನಾನೆಂದೂ ಊಹೆ ಮಾಡಿರಲಿಲ್ಲ. ಇದು ಗೌರವವು ನನ್ನನ್ನು ನಿಜವಾಗಿಯೂ ಒಬ್ಬ ನಟನನ್ನಾಗಿ ಮಾಡಿದೆ ಎಂದಿದ್ದಾರೆ.
ಮೊದನಿಂದಲೂ ಡ್ಯಾನ್ಸ್ ನನ್ನ ವೃತ್ತಿ ಜೀವನದಲ್ಲಿ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಈಗ ಅದರ ತೂಕ ಇನ್ನಷ್ಟು ಜಾಸ್ತಿಯಾಗಿದೆ. ನನ್ನನ್ನು ಈ ಮಟ್ಟಕ್ಕೆ ಒಬ್ಬ ನಟನಾಗಿ ಮಾಡುವಲ್ಲಿ ಡೈರೆಕ್ಟರ್‌ಗಳು, ನಿರ್ಮಾಪಕರು, ಕೊರಿಯೋಗ್ರಫರ್ಸ್‌ಗಳ ಕೊಡುಗೆ ತುಂಬಾ ಇದೆ. ನಾನು ಅವರಿಗೆಲ್ಲ ಸದಾ ಋಣಿಯಾಗಿರುತ್ತೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಅಮೀರ್ ಖಾನ್ ಮಾತನಾಡಿ, ಚಿರಂಜೀವಿ ಅವರು ನನಗೆ ಅಣ್ಣನಿದ್ದಂತೆ. ನಾನು ಕೂಡ ಅವರ ದೊಡ್ಡ ಅಭಿಮಾನಿ. ಚಿರಂಜೀವಿ ಅವರಿಗೆ ಈ ಗೌರವ ಸಿಕ್ಕಿರುವುದು ನನಗೆ ಬಹಳ ಖುಷಿ ನೀಡಿದೆ. ಸಿಕ್ಕಿದ್ದಕ್ಕೆ ನನಗೆ ಖುಷಿಯಾಗಿದೆ ಎಂದಿದ್ದಾರೆ. ಇನ್ನು ಚಿರಂಜೀವಿ ಅವರ ನಟನೆಗೆ ಎಷ್ಟು ಅಭಿಮಾನಿ ಬಳಗವಿದೆಯೋ? ಅವರ ಡ್ಯಾನ್ಸ್‌ಗಳಿಗೆ ಅದಕ್ಕಿಂತಲೂ ಮಿಗಿಲಾದ ಅಭಿಮಾನಿಗಳಿದ್ದಾರೆ ಎನ್ನುವ ಟಾಕ್ ಟಾಲಿವುಡ್‌ನಲ್ಲಿದೆ.
ಚಿರಂಜೀವಿ ಅವರ ಹಲವು ಸ್ಟೆಪ್‌ಗಳು ಟ್ರೆಂಡ್ ಕೂಡ ಸೃಷ್ಟಿಸುತ್ತವೆ. ಪ್ರತಿ ಸಿನಿಮಾ ಬಿಡುಗಡೆಯಾದಾಗ ಅಲ್ಲಿ ಚಿರಂಜೀವಿ ಅವರ ಸ್ಟೆಪ್ ಅನ್ನು ಹಲವರು ಕಾಪಿ ಮಾಡುವುದೂ ಉಂಟು. ಇವರನ್ನು ಚಿತ್ರರಂಗದ ಹಲವು ಯುವ ನಟರು ಕೂಡ ಅನುಕರಣೆ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಚಿರಂಜೀವಿ ಅವರ ಡ್ಯಾನ್ಸ್ ಮನೆಮಾತಾಗಿದೆ. ಚಿರಂಜೀವಿ ಅವರಿಗೆ ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ ಕೂಡ ಅಭಿನಂದನೆಗಳನ್ನು ತಿಳಿಸಿದ್ದಾರೆ.












Click it and Unblock the Notifications