Darshan Thoogudeepa: ಪವಿತ್ರಾ ಗೌಡ ಜೊತೆ ಮದುವೆಗೆ ನಿರ್ಧರಿಸಿ ಕೊಲೆಯಾದ ರೇಣುಕಾಸ್ವಾಮಿ...
ಪವಿತ್ರಾ ಗೌಡ ವಿಚಾರಕ್ಕೆ ಬಂದ ಎಂಬ ಕಾರಣಕ್ಕೆ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ರೇಣುಕಾಸ್ವಾಮಿ ಸೋಷಿಯಲ್ ಮೀಡಿಯಾ ಮೂಲಕ ಪವಿತ್ರಾ ಗೌಡಗೆ ಮೆಸೇಜ್ ಕಳುಹಿಸುತ್ತಿದ್ದ ಅಲ್ಲದೆ ಕೆಟ್ಟ ಕೆಟ್ಟ ಫೋಟೋ ಕೂಡ ಕಳಿಸಿದ್ದ ಎಂಬ ಆರೋಪ ಮಾಡಲಾಗಿದೆ. ಇದೇ ಕಾರಣಕ್ಕೆ ಪಟ್ಟಣಗೆರೆ ಶೆಡ್‌ಗೆ ಈ ರೇಣುಕಾಸ್ವಾಮಿ ಅಪಹರಣ ಮಾಡಿ ತಂದು, ದರ್ಶನ್ ತೂಗುದೀಪ್ & ಜೊತೆಗಾರರು ಸೇರಿ ಹಲ್ಲೆ ಮಾಡಿ ಕೊಲೆ ಮಾಡಿರುವ ಆರೋಪ ಇದಾಗಿದೆ. ಪರಿಸ್ಥಿತಿ ಹೀಗಿದ್ದಾಗ, ಪವಿತ್ರಾ ಗೌಡ ಜೊತೆ ಮದುವೆಗೆ ನಿರ್ಧರಿಸಿ ಕೊಲೆಯಾದ ರೇಣುಕಾಸ್ವಾಮಿ...
ದರ್ಶನ್ ತೂಗುದೀಪ್ ಅವರಿಗೆ ಪವಿತ್ರಾ ಗೌಡ ಪರಿಚಯವಾಗಿ ಸುಮಾರು 10 ವರ್ಷ ಕಳೆದಿದೆ. ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ನಡುವೆ 10 ವರ್ಷಗಳ ಸುದೀರ್ಘ ಸಂಬಂಧವಿದೆ. ದರ್ಶನ್ ತೂಗುದೀಪ್‌ಗೆ ಮೊದಲು, ಪವಿತ್ರಾ ಗೌಡ ಒಂದು ಮದುವೆಯನ್ನ ಕೂಡ ಆಗಿದ್ದರಂತೆ. ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಸಂಬಂಧ ಆ ನಂತರ ಕೂಡ ಗಟ್ಟಿಯಾಗಿತ್ತು. ಪವಿತ್ರಾ ಗೌಡ ಕಂಡರೆ ದರ್ಶನ್ ತೂಗುದೀಪ್ ಅವರಿಗೆ ಪಂಚ ಪ್ರಾಣ. ಹೀಗಿದ್ದಾಗಲೇ ಪವಿತ್ರಾ ಗೌಡ ಬಗ್ಗೆ ಮಾಹಿತಿ ಪಡೆದಿದ್ದ ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸಿ ಹಿಂದೆ ಬಿದ್ದಿದ್ದ ಎಂಬ ಆರೋಪ ಕೇಳಿಬಂದಿತ್ತು. ಹೀಗಿದ್ದಾಗ, ಪವಿತ್ರಾ ಗೌಡ ಜೊತೆ ಮದುವೆಗೆ ನಿರ್ಧರಿಸಿ ಕೊಲೆಯಾದ ರೇಣುಕಾಸ್ವಾಮಿ...

ಪವಿತ್ರಾ ಗೌಡ ಜೊತೆ ಮದುವೆಗೆ ರೇಣುಕಾಸ್ವಾಮಿ....
ಅಂದಹಾಗೆ ರೇಣುಕಾಸ್ವಾಮಿ & ಪವಿತ್ರಾ ಗೌಡ ಬಗ್ಗೆ ಇದೀಗ ಒಂದು ಸುಳ್ಳು ಸುದ್ದಿ ಹಬ್ಬಿಸಿ ಕೆಲವರು ವೈರಲ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಂದಹಾಗೆ, ಪವಿತ್ರಾ ಗೌಡ ಸಹವಾಸಕ್ಕೆ ಬಂದ ಎಂಬ ಕಾರಣಕ್ಕೆ ದರ್ಶನ್ ತೂಗುದೀಪ್ & ಜೊತೆಗಾರರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎತ್ತಾಕಿಕೊಂಡು ಬಂದು ಪಟ್ಟಣಗೆರೆಯ ಶೆಡ್‌ನಲ್ಲಿ ಭೀಕರವಾಗಿ ಹೊಡೆದು ಸಾಯಿಸಿರುವ ಆರೋಪ ಇದೆ. ಆದರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ, ಪವಿತ್ರಾ ಗೌಡ ಜೊತೆಯಲ್ಲಿ ಮದುವೆಗೆ ನಿರ್ಧರಿಸಿ ಕೊಲೆಯಾದ ರೇಣುಕಾಸ್ವಾಮಿ? ಈ ಸಾವಿಗೆ ಕಾರಣ ಯಾರೂ? ಎಂಬ ಪ್ರಶ್ನೆಯನ್ನ ಕೇಳಲಾಗುತ್ತಿದೆ. ಯಾಕೆ ಗೊತ್ತಾ? ಮುಂದೆ ಓದಿ.
ರೇಣುಕಾಸ್ವಾಮಿ ನಂಬರ್ ಕೇಳಿದ್ದರಾ?
ಪವಿತ್ರಾ ಗೌಡ ಹಿಂದೆ ಬಿದ್ದಿದ್ದ ರೇಣುಕಾಸ್ವಾಮಿ ಹಲವು ದಿನಗಳಿಂದ ಮೆಸೇಜ್ ಮಾಡ್ತಿದ್ದ. ರೇಣುಕಾಸ್ವಾಮಿ ಸಾಯುವ ಮೊದಲು ಪವಿತ್ರಾ ಗೌಡಗೆ ಕಳಿಸಿದ್ದ ಮೆಸೇಜ್‌ಗಳಿಗೆ ರೀಪ್ಲೇ ಕೂಡ ಬಂದಿತ್ತು ಎಂಬ ಆರೋಪ ಇದೆ. ಅಲ್ಲದೆ ರೇಣುಕಾಸ್ವಾಮಿ ನಂಬರ್ ಕೂಡ ಕೇಳಲಾಗಿತ್ತು, ಪವಿತ್ರಾ ಗೌಡ ಅಕೌಂಟ್‌ನಿಂದಲೇ ಹೀಗೆ ಮೆಸೇಜ್ ಬಂದಿದೆ ಎಂದು ಆರೋಪಿಸಲಾಗುತ್ತಿದೆ.
ಆದರೆ ಅಸಲಿ ಮ್ಯಾಟರ್ ಏನಂದ್ರೆ, ರೇಣುಕಾಸ್ವಾಮಿಯನ್ನ ಕಂಡುಹಿಡಿಯಲು ಈ ರೀತಿಯಾಗಿ ಪವಿತ್ರಾ ಗೌಡ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಿರಾತಕ ಪವನ್ ಎಂಬುವವನೇ ಮೆಸೇಜ್ ಮಾಡಿದ್ದನಂತೆ. ಹೀಗಿದ್ದಾಗ, ಪವಿತ್ರಾ ಗೌಡ ಜೊತೆಯಲ್ಲಿ ಮದುವೆಗೆ ನಿರ್ಧರಿಸಿ ಕೊಲೆಯಾದ ರೇಣುಕಾಸ್ವಾಮಿ? ಎಂಬ ಪ್ರಶ್ನೆಯಲ್ಲಿ ಹುರುಳಿಲ್ಲ, ಈ ರೀತಿ ಬೇಕು ಅಂತಲೇ ಇಂತಹ ಸುದ್ದಿ ಹಬ್ಬಿಸುತ್ತಿದ್ದಾರೆ ಅಂತಾ ಇದೀಗ ಡಿ-ಬಾಸ್ ಫ್ಯಾನ್ಸ್ ಆರೋಪ ಮಾಡಿ ಆಕ್ರೋಶವನ್ನ ಹೊರ ಹಾಕುತ್ತಿದ್ದಾರೆ.
ಸಮಸ್ಯೆ ಸುಳಿಯಲ್ಲಿ ದರ್ಶನ್ ತೂಗುದೀಪ್?
ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ, ದರ್ಶನ್ ತೂಗುದೀಪ್ ಅವರ ವಿರುದ್ಧ ಗಂಭೀರ ಆರೋಪ ಒಂದು ಕೇಳಿಬಂದಿತ್ತು. ದರ್ಶನ್ ತೂಗುದೀಪ್ ಮತ್ತು ರೌಡಿಶೀಟರ್ ನಾಗ ಸೇರಿ, ಮತ್ತಿಬ್ಬರು ಪಾತಕಿಗಳು ಒಟ್ಟಾಗಿ ಕೂತು ಸಿಗರೇಟು ಸೇದುತ್ತಾ ಟೀ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿತ್ತು. ಆ ನಂತರ ದರ್ಶನ್ ತೂಗುದೀಪ್ ಅವರ ಜೊತೆಗೆ ಇನ್ನುಳಿದ ಆರೋಪಿ ಪಡೆಯನ್ನು ಬೇರೆ ಬೇರೆ ಜೈಲಿಗೆ ಎತ್ತಂಗಡಿ ಮಾಡಲಾಗಿತ್ತು. ಇದೀಗ ನೋಡಿದರೆ ದರ್ಶನ್ ತೂಗುದೀಪ್‌ಗೆ ಪರಪ್ಪನ ಅಗ್ರಹಾರದಲ್ಲಿ ಸಿಗರೇಟು ಸೇದಿರುವ ವಿಚಾರವೇ ದೊಡ್ಡ ಕಂಟಕ ತರುವ ಸಾಧ್ಯತೆ ದಟ್ಟವಾಗಿದ್ದು, ಜಾಮೀನು ಸಿಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications