Actor Darshan: ಈ ವಿಚಾರ ಗೊತ್ತಾಗ್ತಿದ್ದಂಗೆ...! ದರ್ಶನ್ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಾಧಿಕಾ ಕುಮಾರಸ್ವಾಮಿ, ನಟ ದರ್ಶನ್ ಬಂಧನ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಮತ್ತು ದರ್ಶನ್‌ ತೂಗುದೀಪ ಇಬ್ಬರು ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮಂಡ್ಯ ಮತ್ತು ಅನಾಥರು ಸಿನಿಮಾದಲ್ಲಿ ರಾಧಿಕಾ ದರ್ಶನ್‌ಗೆ ತೆರೆ ಮೇಲೆ ಜೋಡಿಯಾಗಿ ನಟಿಸಿದ್ದು, ದರ್ಶನ್‌ರ ವರ್ತನೆ ಹೇಗಿತ್ತು ಎನ್ನುವ ಬಗ್ಗೆ ಕೂಡ ಮಾತನಾಡಿದ್ದಾರೆ.

ದರ್ಶನ್ ಬಂಧನದ ಬಗ್ಗೆ ಖಾಸಗಿ ವಾಹಿನಿ ಜೊತೆ ಮಾತನಾಡಿರುವ ರಾಧಿಕಾ ಕುಮಾರಸ್ವಾಮಿ, "ದರ್ಶನ್‌ ಅವರ ಪ್ರಕರಣ ಮನಸ್ಸಿಗೆ ತುಂಬಾ ನೋವು ಕೊಡುವ ವಿಚಾರ. ಅನಾಥರು ಮತ್ತು ಮಂಡ್ಯ ಸಿನಿಮಾದಲ್ಲಿ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಶೂಟಿಂಗ್ ವೇಳೆ ಟೆಕ್ನಿಶಿಯನ್, ಸೆಟ್‌ ಹುಡುಗರ ಜೊತೆ ಅಣ್ಣಾ ಬನ್ನಿ ಹೋಗಿ ಎಂದು ಗೌರವ ಕೊಟ್ಟೇ ಮಾತನಾಡುತ್ತಿದ್ದರು. ಎಲ್ಲರ ಜೊತೆ ಸುಲಭವಾಗಿ ಬೆರೆಯೋರು" ಎಂದು ಹೇಳಿದ್ದಾರೆ.

This is What Radhika Kumaraswamy said about Darshan Thoogudeepa

ಇದೆಲ್ಲಾ ನಿಜಾನ ಅನಿಸ್ತು!

"ತಾವೊಬ್ಬ ದೊಡ್ಡ ನಟ ಎನ್ನುವ ಅಹಂ ಕೂಡ ಅವರಲ್ಲಿ ಇರಲಿಲ್ಲ, ದೊಡ್ಡ ಹೀರೋ ಎನ್ನುವಂತೆ ಕೂಡ ನಡೆದುಕೊಳ್ಳುತ್ತರಲಿಲ್ಲ. ಆದರೆ ಈ ವಿಚಾರ ಕೇಳಿದಾಗ, ನಿಜಾನ ಇದು ಎನ್ನಿಸಿಬಿಡ್ತು. ಒಂದು ಕ್ಷಣ ನನಗೆ ನಂಬಲು ಆಗಲಿಲ್ಲ, ಇದೆಲ್ಲಾ ನಿಜವಾ ಎನ್ನುವ ಅನುಮಾನ ಶುರುವಾಯಿತು. ಆದರೆ ಅವರವರ ಜೀವನದಲ್ಲಿ ಏನಾಗಿದೆ ಎನ್ನುವುದು ಅವರಿಗೆ ಮಾತ್ರ ಗೊತ್ತಿರೋಕೆ ಸಾಧ್ಯ, ನಾನು ಇಷ್ಟು ಮಾತ್ರ ಹೇಳಬಲ್ಲೆ" ಎಂದಿದ್ದಾರೆ.

ಮಾಧ್ಯಮಗಳಲ್ಲಿ ಬರೋದು, ಯಾರೋ ಇದರ ಬಗ್ಗೆ ಹೇಳಿದಷ್ಟೇ ನಮಗೆ ಗೊತ್ತಾಗೋದು. ಆದರೆ ಅವರ ಬದುಕಿನಲ್ಲಿ ನಿಜಕ್ಕೂ ಏನಾಗಿದೆ ಎನ್ನುವುದು ನಮಗೆ ಗೊತ್ತಾಗಲ್ಲ. ಗೊತ್ತಿಲ್ಲದೆ ಅವರ ಬಗ್ಗೆ ಕಾಮೆಂಟ್ ಮಾಡೋದು ತಪ್ಪು, ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ದರ್ಶನ್‌ ನಮ್ಮ ಚಿತ್ರರಂಗಕ್ಕೆ ಬೇಕು, ಅವರಿಗೆ ಒಳ್ಳಾದಗಲಿ ಎಂದು ಕೇಳ್ತೀನಿ ಅಷ್ಟೆ ಎಂದರು.

ಎಲ್ಲರ ಬದುಕಿನಲ್ಲೂ ಕೆಲವೊಂದು ಘಟನೆಗಳು ನಡೆಯುತ್ತವೇ, ಮುಂದೆ ಕೆಟ್ಟದ್ದಾಗುತ್ತದೆ ಎಂದು ಮುಂಚಿತವಾಗಿ ಯಾರಿಗೂ ಗೊತ್ತಾಗಲ್ಲ. ಗೊತ್ತಿದ್ದರೆ ಅಂತಹ ಘಟನೆ ನಡೆಯಲು ಕೂಡ ಬಿಡುವುದಿಲ್ಲ. ಎಲ್ಲರ ಬದುಕಿನಲ್ಲಿ ಕೂಡ ಕಹಿ ಘಟನೆಗಳು ನಡೆದಿರುತ್ತವೆ. ನಮ್ಮ ಬದುಕಿನಲ್ಲೂ ಅಂತಹ ಕೆಟ್ಟ ಘಟನೆಗಳನ್ನು ಅನುಭವಿಸಿರುತ್ತೇವೆ ಎಂದರು.

ಏನೇ ಕಷ್ಟ ಬಂದರೂ ಅದನ್ನೆಲ್ಲಾ ಎದುರಿಸಿಕೊಂಡು ಮುಂದೆ ಸಾಗಬೇಕು. ದರ್ಶನ್ ಅವರಿಗೂ ನಾನು ಅದನ್ನೇ ಹೇಳುತ್ತೇನೆ. ಅವರಿಗೆ ಈಗ ಬಂದಿರುವ ಎಲ್ಲಾ ಕಷ್ಟಗಳನ್ನು ಬಗೆಹರಿಸಿಕೊಂಡು ಬೇಗ ಚಿತ್ರರಂಗಕ್ಕೆ ವಾಪಸ್ ಬರಬೇಕು ಎಂದು ಪ್ರಾರ್ಥಿಸುತ್ತೇನೆ ಎಂದರು.

ರಾಧಿಕಾ ಕುಮಾರಸ್ವಾಮಿ ಅವರ ಮಾತುಗಳನ್ನು ಕೇಳಿದ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ನೀವು ಪ್ರಬುದ್ಧರಾಗಿ ಮಾತನಾಡಿದ್ದೀರಾ, ಎಲ್ಲರೂ ತಪ್ಪು ಮಾಡುತ್ತಾರೆ, ಕಹಿ ಘಟನೆಗಳು ನಡೆಯುತ್ತವೆ. ದರ್ಶನ್‌ ಅವರ ಬದುಕಿನಲ್ಲೂ ಅದೇ ಆಗಿದೆ, ಅವರು ಈ ಕಷ್ಟದಿಂದ ಹೊರ ಬರುತ್ತಾರೆ, ಜೈಲಿನಿಂದ ಕೂಡ ಬಿಡುಗಡೆಯಾಗುತ್ತಾರೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+