ಸಾಮಾನ್ಯರಿಗೆ ನೋ ಎಂಟ್ರಿ: ದಳಪತಿ ವಿಜಯ್ ಕೊನೆಯ ಸಿನಿಮಾ 'ಜನನಾಯಗನ್' ನೋಡಲು ಹೊಸ ರೂಲ್ಸ್
ಮಿಳು ಚಿತ್ರರಂಗದ ಸೂಪರ್ಸ್ಟಾರ್, ತಮಿಳುನಾಡು ಹಾಲಿ ಸಿಎಂ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ 'ಜನನಾಯಗನ್' (Jana Nayagan) ರಿಲೀಸ್ಗೆ ಕೊನೆಗೂ ದಿನಾಂಕ ನಿಗದಿಯಾಗಿದ್ದು, ಜಾಗತಿಕ ಮಟ್ಟದಲ್ಲೂ ಚಿತ್ರದ ಮೇಲಿನ ಕ್ರೇಜ್ ಹೆಚ್ಚಾಗಿದೆ. ಕೆನಡಾದ ಪ್ರಸಿದ್ಧ ಚಲನಚಿತ್ರ ವಿತರಕರಾದ 'ಯಾರ್ಕ್ ಸಿನಿಮಾಸ್' (York Cinemas) ಸಾಮಾನ್ಯ ಜನರಿಗೆ ಟಿಕೆಟ್ ಬುಕಿಂಗ್ ಮುಕ್ತಗೊಳಿಸುವ ಮುನ್ನ ಕೇವಲ ವಿಐಪಿಗಳಿಗಾಗಿ ವಿಶೇಷ ಬುಕಿಂಗ್ ವಿಂಡೋ ತೆರೆಯುವ ಮೂಲಕ ಹೊಸ ಪ್ರಯೋಗಕ್ಕೆ ಕೈಹಾಕಿದೆ.
ವಿಜಯ್ ರಾಜಕೀಯಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರವೇಶಿಸುವ ಮುನ್ನ ನಟಿಸಿದ ಕೊನೆಯ ಸಿನಿಮಾ ಇದಾಗಿರುವುದರಿಂದ, ಪ್ರಪಂಚದಾದ್ಯಂತ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರದ ಟಿಕೆಟ್ಗಳಿಗಾಗಿ ಅಭಿಮಾನಿಗಳು ಮುಗಿಬೀಳುವುದನ್ನು ನಿಯಂತ್ರಿಸಲು ಮತ್ತು ನಿಷ್ಠಾವಂತ ಗ್ರಾಹಕರಿಗೆ ಆದ್ಯತೆ ನೀಡಲು ವಿತರಕರು ಹಂತ ಹಂತವಾಗಿ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭಿಸಿದ್ದಾರೆ. ಮುಂಗಡ ಬುಕಿಂಗ್ನ ಮೊದಲ 24 ಗಂಟೆಗಳು ಕೇವಲ ವಿಐಪಿ ಸದಸ್ಯರಿಗೆ ಮಾತ್ರ ಲಭ್ಯವಿರಲಿವೆ.

ಆನ್ಲೈನ್ ಟಿಕೆಟ್ ಬದಲಾವಣೆ ಇಲ್ಲ
ಈ ಹಿಂದೆ ಟಿಕೆಟ್ ಬುಕ್ ಮಾಡಿ ಹಣದ ಮರುಪಾವತಿಗಾಗಿ ಕಾಯುತ್ತಿರುವ ಗ್ರಾಹಕರಿಗೂ ಈ ಆರಂಭಿಕ ಹಂತದಲ್ಲಿ ಟಿಕೆಟ್ ಪಡೆಯಲು ಮೊದಲ ಆದ್ಯತೆ ನೀಡಲಾಗಿದೆ. ಎರಡನೇ ಮತ್ತು ಮೂರನೇ ದಿನದ ಬುಕಿಂಗ್ನಲ್ಲೂ ವಿಐಪಿ ಗ್ರಾಹಕರಿಗೆ ಮೊದಲ ಅವಕಾಶ ಸಿಗಲಿದ್ದು, ಆ ಬಳಿಕವಷ್ಟೇ ಸಾಮಾನ್ಯ ಜನರಿಗೆ ಟಿಕೆಟ್ ಬುಕಿಂಗ್ ಮುಕ್ತವಾಗಲಿದೆ. ಆನ್ಲೈನ್ ಮೂಲಕ ಟಿಕೆಟ್ ಎಕ್ಸ್ಚೇಂಜ್ ಮಾಡಲು ಅವಕಾಶವಿಲ್ಲ. ಟಿಕೆಟ್ ಬದಲಾಯಿಸಿಕೊಳ್ಳಬೇಕಾದ ಗ್ರಾಹಕರು ನೇರವಾಗಿ ಚಿತ್ರಮಂದಿರದ ಬಾಕ್ಸ್ ಆಫೀಸ್ಗೆ ಭೇಟಿ ನೀಡಬೇಕು.
ಕೇವಲ ಕೆನಡಾ ಮಾತ್ರವಲ್ಲದೆ ಜಗತ್ತಿನ ಇತರೆ ದೇಶಗಳಲ್ಲೂ ಈ ಚಿತ್ರ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಯುನೈಟೆಡ್ ಕಿಂಗ್ಡಮ್ನಲ್ಲಿ (UK) 'ಅಹಿಂಸಾ ಎಂಟರ್ಟೈನ್ಮೆಂಟ್' ಮುಂಗಡ ಬುಕಿಂಗ್ ಆರಂಭಿಸಿದ ಕೇವಲ ಒಂದು ಗಂಟೆಯಲ್ಲೇ ಸಾವಿರಾರು ಟಿಕೆಟ್ಗಳು ಮಾರಾಟವಾಗಿ ದಾಖಲೆ ಬರೆದಿದೆ. ಈ ಹಿಂದೆ ವಿಶ್ವದಾದ್ಯಂತ ಜುಲೈ 24ರಂದು ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಈಗ ಭಾರತದಲ್ಲಿ ಒಂದು ದಿನ ಮುಂಚಿತವಾಗಿ ಅಂದರೆ ಜುಲೈ 23ರಂದೇ ಚಿತ್ರಮಂದಿರಗಳಲ್ಲಿ 'ಜನನಾಯಗನ್' ಧೂಳೆಬ್ಬಿಸಲಿದೆ. ಶೀಘ್ರದಲ್ಲೇ ಭಾರತದಲ್ಲೂ ಮುಂಗಡ ಬುಕಿಂಗ್ ಶುರುವಾಗಲಿದೆ. ಇತ್ತೀಚೆಗಷ್ಟೇ ಚಿತ್ರದ ಸೆನ್ಸಾರ್ ಪ್ರಕ್ರಿಯೆಯಲ್ಲಿ ಸಣ್ಣ ಬದಲಾವಣೆಯಾಗಿದ್ದು, ಸಿನಿಮಾದ ಅವಧಿಯನ್ನು 41 ಸೆಕೆಂಡ್ ಹೆಚ್ಚಿಸಲಾಗಿದೆ. ಈಗ ಚಿತ್ರದ ಒಟ್ಟು ಅವಧಿ 3 ಗಂಟೆ 3 ನಿಮಿಷ 52 ಸೆಕೆಂಡುಗಳು ಇರಲಿದೆ. ಯುನೈಟೆಡ್ ಕಿಂಗ್ಡಮ್ನಲ್ಲಿ ಯಾವುದೇ ಕಟ್ ಇಲ್ಲದೆ ಇಡೀ ಸಿನಿಮಾವನ್ನು ಪ್ರದರ್ಶಿಸಲಾಗುತ್ತಿದೆ.












Click it and Unblock the Notifications