Pavithra Jayaram: ನಟ ಚಂದು ಸಾವಿಗೆ ಅಸಲಿ ಕಾರಣವೇನು? ಇನ್ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಸಿಕ್ಕ ಸುಳಿವೇನು?

ಕೆಲ ದಿನಗಳ ಹಿಂದಷ್ಟೇ ಕನ್ನಡ ಹಾಗೂ ತೆಲುಗು ಕಿರುತೆರೆಯ ಜನಪ್ರಿಯ ನಟಿಯಾದ ಪವಿತ್ರ ಜಯರಾಂ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ದು:ಖ ಘಟನೆ ಮಾಸುವ ಮುನ್ನವೇ ತೆಲುಗು ಕಿರುತೆರೆಗೆ ಮತ್ತೊಂದು ಆಘಾತ ಎದುರಾಗಿದ್ದು, ಪವಿತ್ರ ಜಯರಾಂ ಆಪ್ತ, ಕಿರುತೆರೆ ನಟ ಚಂದು ಸಾವಿಗೆ ಶರಣಾಗಿದ್ದಾರೆ.

ಪವಿತ್ರ ಜಯರಾಂ ಅಪಘಾತದಲ್ಲಿ ಸಾಯುವ ಸಮಯದಲ್ಲಿ ನಟ ಚಂದು ಕೂಡ ಜೊತೆಯಲ್ಲಿದ್ದರು. ಈ ಅಪಘಾತದಲ್ಲಿ ಚಂದು ಅವರ ತಲೆ ಹಾಗೂ ಕೈ-ಕಾಲುಗಳಿಗೆ ಪೆಟ್ಟಾಗಿತ್ತು. ಈ ನೋವಿನಲ್ಲೇ ಅವರು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ನಡೆದ ಪವಿತ್ರ ಜಯರಾಂ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಪವಿತ್ರ ಜಯರಾಂ ಅವರ ಅಂತಿಮ ಕಾರ್ಯ ಮುಗಿಸಿ ಹೈದರಾಬಾದ್‌ಗೆ ತೆರಳಿದ್ದ ಚಂದು ಅವರು ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

Telugu Serial Actor Chandrakanth End His Life At Home In Hyderabad

ಪವಿತ್ರಾ ಅವರ ಸಾವಿನ ನಂತರ ನಟ ಚಂದು ತೀವ್ರ ದುಃಖಕ್ಕೆ ಒಳಗಾಗಿದ್ದರು. ಇಬ್ಬರು ಆತ್ಮೀಯರಾಗಿದ್ದು, 'ನನ್ನ ಕಣ್ಣೇದುರೆ ಪವಿ ಉಸಿರು ನಿಲ್ಲಿಸಿದಳು' ಎಂದು ಈ ಹಿಂದೆ ಚಂದು ಕಣ್ಣೀರು ಹಾಕಿದ್ದರು. ಇದೇ ನೋವಿನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಕಳೆದ ಮೂರು ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿರುವ ಚಂದು, ಪವಿತ್ರ ಜಯರಾಂ ಅವರೊಂದಿಗಿನ ಫೋಟೋಗಳನ್ನು ಶೇರ್‌ ಮಾಡಿ, 'ನಾನ.. ಪ್ಲೀಸ್‌ ವೈಟ್‌ ಫಾರ್‌ ಜಸ್ಟ್ ಟು ಡೇಸ್‌' ಎಂದು ಬರೆದುಕೊಂಡಿದ್ದರು.

ನಿನ್ನೆ ಹೈದರಾಬಾದ್​​​ನ ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಚಂದು ಸಾವಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಹೈದರಾಬಾದ್ ನಗರದ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಚಂದ್ರಕಾಂತ್‌ ತೆಲುಗು ಕಿರುತೆರೆಯಲ್ಲಿ ಚಂದು ಎನ್ನುವ ಹೆಸರಿನಿಂದಲೇ ಜನಪ್ರಿಯರಾಗಿದ್ದರು. ಚಂದು ಸದ್ಯ ಕಾರ್ತಿಕ ದೀಪ, ರಾಧಮ್ಮ ಮದುವೆ ಹಾಗೂ ತ್ರಿನಯಿನಿ ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಕಿರುತೆರೆಯಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಚಂದು 2015ರಲ್ಲಿ ಶಿಲ್ಪ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಚಂದು ಪತ್ನಿಯಿಂದ ದೂರಾಗಿದ್ದು, ಆರೇಳು ವರ್ಷಗಳಿಂದ ನಟಿ ಪವಿತ್ರ ಜಯರಾಂ ಅವರೊಂದಿಗೆ ಆತ್ಮೀಯವಾಗಿದ್ದರು ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+