ಅಲ್ಲು ಅರ್ಜುನ್ & ಪ್ರಭಾಸ್ ಅಭಿಮಾನಿಗಳ ನಡುವೆ ಬೀದಿ ಕಾಳಗ!
ಸಿನಿಮಾ ಹೀರೋಗಳು ಅಂದ್ರೆ ಅಭಿಮಾನ ಇರಬೇಕು, ಅದೇ ಅಭಿಮಾನ ಜಾಸ್ತಿ ಆಗೋದರೆ ಅದು ದುರಭಿಮಾನ ಆಗೋಗುತ್ತೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ ರೀತಿ ಅತಿಯಾದ ಅಭಿಮಾನ ಕಾಣಿಸುವುದಿಲ್ಲ. ಆದರೆ, ತೆಲುಗು & ತಮಿಳು ಭಾಷೆಯ ನಟರ ಅಭಿಮಾನಿಗಳ ನಡುವೆ ಆಗಾಗ ರಕ್ತಸಿಕ್ತ ಹೊಡೆದಾಟ ಹಾಗೂ ಬಡಿದಾಟ ನಡೆಯುತ್ತದೆ. ಈಗಲೂ ಹಂಗೆ, ಸ್ಟಾರ್ ನಟರ ಅಭಿಮಾನಿಗಳು ಫೈಟಿಂಗ್ ಮಾಡಿದ್ದಾರೆ. ಅದೂ ನಮ್ಮ ಬೆಂಗಳೂರಿನಲ್ಲಿ!
ಅಂದಹಾಗೆ ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ತೆಲುಗು ಹೀರೋಗಳ ಅಭಿಮಾನಿಗಳ ಮಧ್ಯೆ, ಸಣ್ಣ ವಿಚಾರಕ್ಕೆ ಭೀಕರ ಬಡಿದಾಟ ಆಗಿದೆ. ನಟ ಅಲ್ಲು ಅರ್ಜುನ್ & ಪ್ರಭಾಸ್ ಅಭಿಮಾನಿಗಳ ನಡುವೆ ಬೀದಿ ಜಗಳ ಆಗಿದೆ. ಬೆಂಗಳೂರಿನ ಕೆ.ಆರ್. ಪುರಂ ಠಾಣೆ ವ್ಯಾಪ್ತಿಯಲ್ಲಿ ಘಟನೆಯು ಸಂಭವಿಸಿದೆ ಎನ್ನಲಾಗಿದೆ. ಇದೀಗ ಯುವಕರ ನಡುವಿನ ಈ ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಹಾಗೇ ಪ್ರಭಾಸ್ ಅಭಿಮಾನಿಯ ಮೇಲೆ ಸಿಕ್ಕಾಪಟ್ಟೆ ಹಲ್ಲೆ ಮಾಡಿರುವ ಕಾರಣ, ಪ್ರಭಾಸ್ ಅಭಿಮಾನಿಗೆ ರಕ್ತ ಕೂಡ ಬಂದಿದೆ. ಹಾಗಾದರೆ ಜಗಳ ಶುರುವಾಗಿದ್ದು ಹೇಗೆ ಗೊತ್ತಾ? ಆ ಫೈಟಿಂಗ್ ವಿಡಿಯೋ ನೋಡಲು ಮುಂದೆ ಓದಿ.

ರಕ್ತ ಬರುವಂತೆ ಬಡಿದಾಡಿದ ಫ್ಯಾನ್ಸ್!
ಇಲ್ಲಿ ಪ್ರಭಾಸ್ ಅಭಿಮಾನಿ & ಅಲ್ಲು ಅರ್ಜುನ್ ಅಭಿಮಾನಿಗಳ ನಡುವೆ, ಸುಖಾಸುಮ್ಮನೆ ಫೈಟಿಂಗ್ ಶುರುವಾಗಿದೆ. ಆಗ ದಿಢೀರ್ ಪ್ರಭಾಸ್ ಅಭಿಮಾನಿ ಮೇಲೆ ಹಲ್ಲೆ ಮಾಡಲಾಗಿದ್ದು ಅಲ್ಲು ಅರ್ಜುನ್ ಫ್ಯಾನ್ಸ್ ಎಂದು ಹೇಳಿಕೊಂಡಿರುವ ಕೆಲವರು ಹಿಂಗೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ವೈರಲ್ ವಿಡಿಯೋದಲ್ಲಿ ಬಾಹುಬಲಿ ಖ್ಯಾತಿ ನಟ, ಪ್ರಭಾಸ್ ಫ್ಯಾನ್ ಎನ್ನಲಾದ ಓರ್ವ ಯುವಕನಿಗೆ ಅಲ್ಲು ಅರ್ಜುನ್ ಅಭಿಮಾನಿಗಳು ಎಂದು ಹೇಳಿಕೊಂಡವರು ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ. ಅಲ್ಲದೇ 'ಜೈ ಅಲ್ಲು ಅರ್ಜುನ್ ಅಂತಾ ಹೇಳಿಬಿಡು, ಬಿಟ್ಟು ಬಿಡುತ್ತೀವಿ' ಅಂತಾನೂ ಹೇಳಿದ್ದಾರೆ. ಹಾಗಾದರೆ ಈ ಘಟನೆಯಲ್ಲಿ ಕಿರಿಕ್ ಶುರುವಾಗಿದ್ದು ಹೇಗೆ? ಫೈಟಿಂಗ್ ವಿಡಿಯೋ ನೋಡಲು ಮುಂದೆ ಓದಿ.
ಕ್ರಿಕೆಟ್ ಆಡುವಾಗ ಶುರುವಾಯ್ತು ಕಿರಿಕ್!
ಅಷ್ಟಕ್ಕೂ ಕೆ.ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕ್ರಿಕೆಟ್ ಮೈದಾನದಲ್ಲಿ ಈ ಫೈಟಿಂಗ್ ನಡೆದಿದೆ ಎನ್ನಲಾಗಿದೆ. ಕ್ರಿಕೆಟ್ ಆಡೋದಕ್ಕೆ ಬಂದವರ ನಡುವೆ ಹೀಗೆ ಮೊದಲಿಗೆ ಫೈಟಿಂಗ್ ಶುರುವಾಗಿದೆ. ಆ ನಂತರ ಅದು ಎಲ್ಲೆಲ್ಲಿಗೋ ಹೋಗಿ, ಪ್ರಭಾಸ್ & ಅಲ್ಲು ಅರ್ಜುನ್ ಅವರ ಹೆಸರು ಕೂಡ ಈ ಜಗಳದಲ್ಲಿ ತಳುಕು ಹಾಕಿಕೊಂಡಿದೆ. ಇನ್ನು ಘಟನೆ ಸಂಬಂಧ ವಿಡಿಯೋ ವೈರಲ್ ಆದ ತಕ್ಷಣ ಪೊಲೀಸರು ಕೂಡ ಆರೋಪಿಗಳನ್ನು ಹುಡುಕಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಘಟನೆಯಲ್ಲಿ ಹಲ್ಲೆ ಮಾಡಿರುವ ಯುವಕರನ್ನು ಹುಡುಕಲಾಗುತ್ತಿದೆ ಎನ್ನಲಾಗಿದೆ.
Allu Arjun and Prabhas fan war in Bangalore I think they r not fans all r local Rowdies @BlrCityPolice need Strict action against this idiots #Alluarjunonline #Prabhas #Karnataka #Bangalore pic.twitter.com/O0cfF0NKfb
— ShokiRaja (@ShokiRaaj) March 10, 2024
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ ಸುಮ್ಮನೆ ತಮ್ಮ ಕೆಲಸ ಮಾಡಿಕೊಂಡು ಇರುವುದು ಬಿಟ್ಟು ಈ ಯುವಕರು ಫ್ಯಾನ್ ವಾರ್ ಮಾಡಿದ್ದಾರೆ. ಹೀಗೆ ಗಲಾಟೆ ಮಾಡಿದವರನ್ನು ಈಗ ಜೈಲಿಗೆ ಹಾಕಲು ಪೊಲೀಸರು ಕೂಡ ಹುಡುಕುತ್ತಿದ್ದಾರೆ. ಹೀಗಾಗಿ ಮುಂದೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ಕಾರಣಕ್ಕೆ ಪೊಲೀಸರು ಕೂಡ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಕ್ರಮಕ್ಕೆ ಮುಂದಾಗಿದ್ದಾರೆ.












Click it and Unblock the Notifications