ಕನ್ನಡ ನಟಿಯೊಂದಿಗೆ 48ನೇ ಹುಟ್ಟುಹಬ್ಬದಂದೇ ನಟ ವಿಶಾಲ್‌ ನಿಶ್ಚಿತಾರ್ಥ, ಫೋಟೋ ವೈರಲ್

ಖ್ಯಾತ ನಟ ವಿಶಾಲ್‌ ಅವರು ತಮ್ಮ ಹುಟ್ಟುಹಬ್ಬದಂದೇ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಈ ವರ್ಷ ನಟ ವಿಶಾಲ್ ಅವರಿಗೆ ಡಬಲ್ ಸಂಭ್ರಮವಾಗಿದ್ದು, ತಮ್ಮ 48ನೇ ಹುಟ್ಟುಹಬ್ಬದಂದು ನಟಿ ಸಾಯಿ ಧನ್ಶಿಕಾ ಅವರೊಂದಿಗೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಚೆನ್ನೈನಲ್ಲಿ ನಡೆದ ಈ ಸಮಾರಂಭದಲ್ಲಿ ಆಪ್ತರು, ಕುಟುಂಬಸ್ಥರು, ಸ್ನೇಹಿತರು ಭಾಗವಹಿಸಿದ್ದರು. ನಟ ವಿಶಾಲ್‌ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದು, ವೈರಲ್‌ ಆಗಿದೆ.

ವಿಶಾಲ್ ತಮ್ಮ ಎಕ್ಸ್‌ ಖಾತೆಯಲ್ಲಿ ಫೋಟೋಗಳನ್ನ ಹಂಚಿಕೊಂಡು, "ನನ್ನ ವಿಶೇಷ ಹುಟ್ಟುಹಬ್ಬಕ್ಕೆ ಶುಭ ಹಾರೈಸಿ ಆಶೀರ್ವದಿಸಿದ್ದಕ್ಕಾಗಿ ಈ ವಿಶ್ವದ ಮೂಲೆ ಮೂಲೆಯಿಂದ ಬಂದ ನಿಮ್ಮೆಲ್ಲರಿಗೂ ಧನ್ಯವಾದಗಳು. ಇಂದು ನಡೆದ ನನ್ನ ನಿಶ್ಚಿತಾರ್ಥದ ಶುಭ ಸುದ್ದಿಯನ್ನು ಸಾಯಿ ಧನ್ಶಿಕಾ ಅವರೊಂದಿಗೆ ನಮ್ಮ ಕುಟುಂಬಗಳ ನಡುವೆ ಹಂಚಿಕೊಳ್ಳಲು ಸಂತೋಷವಾಗಿದೆ. ಸಕಾರಾತ್ಮಕ ಮತ್ತು ಆಶೀರ್ವಾದದ ಭಾವನೆ, ಯಾವಾಗಲೂ ನಿಮ್ಮ ಆಶೀರ್ವಾದ ಮತ್ತು ಒಳ್ಳೆಯ ಭಾವನೆಗಳನ್ನು ಬಯಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳಲ್ಲಿ ಇಬ್ಬರೂ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಹಾರ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ವಿಶಾಲ್‌ ಅಭಿಮಾನಿಗಳು ಇದಕ್ಕೆ ಪ್ರತಿಕ್ರಿಯಿಸಿ ಜೋಡಿಯನ್ನ ಅಭಿನಂದಿಸಿದ್ದಾರೆ.

Tamil Actor Vishal Gets Engaged To Actress Sai Dhanshika At 47 Engagement News

ಈ ಹಿಂದೆ ನಟ ವಿಶಾಲ್‌ ಅವರು ಬೇರೆ ನಟಿಯರೊಂದಿಗೆ ಸಂಬಂಧದಲ್ಲಿದ್ದು, ಅವರನ್ನೇ ಮದುವೆಯಾಗ್ತಾರೆ ಎಂದೆಲ್ಲ ವದಂತಿ ಹಬ್ಬಿತ್ತು. ನಂತರ ಅವರ ಆರೋಗ್ಯದ ವಿಚಾತರದಿಂದಲೂ ಹಲವು ಸುದ್ದಿಗಳು ಹುಟ್ಟಿಕೊಂಡಿತ್ತು. ಆದರೆ ನಟಿ ಧನ್ಶಿಕಾ ಅವರನ್ನು ಮದುವೆಯಾಗುವ ನಿರ್ಧಾರವನ್ನ ಸಹ ಗುಟ್ಟಾಗಿ ಇಟ್ಟಿದ್ದರು. ಕೊನೆಗೆ ಧನ್ಶಿಕಾ ಅವರ ಮುಂಬರುವ ಚಿತ್ರ 'ಯೋಗಿ ದಾ' ಆಡಿಯೋ ರಿಲೀಸ್‌ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು.

ಮದುವೆ ಮುಂದೂಡಿದ್ದೇಕೆ?

ಆ ಕಾರ್ಯಕ್ರಮಕ್ಕೆ ವಿಶಾಲ್ ಕೂಡ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದರು. ಈ ವಿಶೇಷ ಸಂದರ್ಭದಲ್ಲಿ ವಿಶಾಲ್ ಮತ್ತು ಧನ್ಶಿಕಾ ಕೈ ಹಿಡಿದು ನಗುತ್ತಿದ್ದರು. ವಿಶಾಲ್ ಬಂದ ತಕ್ಷಣ, ಅವರು ತಮ್ಮ ಅಪ್ಪಿಕೊಂಡರು ಮತ್ತು ಇಬ್ಬರೂ ಕ್ಯಾಮೆರಾಗಳ ಮುಂದೆ ನಾಚಿಕೆಪಟ್ಟರು. ಕೊನೆಗೆ ಅಧಿಕೃತವಾಗಿ ತಮ್ಮ ಪ್ರೀತಿಯನ್ನು ಬಿಚ್ಚಿಟ್ಟರು. ಈ ವರ್ಷದ ಮೇ ತಿಂಗಳಲ್ಲಿ ತಮ್ಮ ಸಂಬಂಧವನ್ನು ಘೋಷಿಸಿದ್ದ ಈ ಜೋಡಿ, ಆಗಸ್ಟ್ 29ರಂದೇ ಮದುವೆಯಾಗಲು ಯೋಜಿಸಿದ್ದರು. ಆದರೆ ವಿಶಾಲ್ ಕಾರಣಾಂತರಗಳಿಂದ ತಮ್ಮ ಮದುವೆ ಮುಂದೂಡಿದ್ದಾರೆ.

ಸಾಯಿ ಧನ್ಶಿಕಾ ತಮಿಳು ಚಿತ್ರರಂಗದ ಖ್ಯಾತ ನಟಿಯಾಗಿದ್ದು, ಕನ್ನಡ ಕೆಂಪಾ ಸಿನಿಮಾದಲ್ಲೂ ನಟಿಸಿದ್ದರು. ಅಲ್ಲಿ ಅವರನ್ನು ತನುಷಿಕಾ ಎಂದು ಕರೆಯಲಾಗುತ್ತಿತ್ತು. ನವೆಂಬರ್ 20ರಂದು ತಮಿಳುನಾಡಿನ ತಂಜಾವೂರಿನಲ್ಲಿ ಜನಿಸಿದ ಅವರು, 2006ರಲ್ಲಿ ಮರೀನಾ ಎಂದು ಖ್ಯಾತಿ ಪಡೆದ ಮನತೋಡು ಮಜೈಕಾಲಂ ಮೂಲಕ ತಮ್ಮ ಸಿನಿಮಾ ವೃತ್ತಿ ಪ್ರಾರಂಭಿಸಿದರು. ಮಲಯಾಳಂ ನಟ ಜಯಸೂರ್ಯ ಅವರೊಂದಿಗೂ ನಟಿಸಿದ್ದರು. 2016ರಲ್ಲಿ ತೆರೆಕಂಡ ಕಬಾಲಿ ಸಿನಿಮಾದಲ್ಲಿ ರಜನಿಕಾಂತ್ ಅವರ ಮಗಳ ಪಾತ್ರ ನಿರ್ವಹಿಸಿದ್ದರು. ಇದೀಗ ವಿಶಾಲ್‌-ಧನ್ಶಿಕಾ ಹಸೆಮಣೆ ಏರಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+