ಮದುವೆಯಾದ ಕೆಲ ಹೊತ್ತಲ್ಲೇ ನಾನು ಗರ್ಭಿಣಿ ಎಂದ ಖ್ಯಾತ ನಟನ 2ನೇ ಪತ್ನಿ!
ಸೆಲೆಬ್ರಿಟಿಗಳ ಜೀವನವೇ ಒಂದು ರೀತಿ ರೋಚಕ. ಈಗಾಗಲೇ ಸೆಲೆಬ್ರಿಟಿಗಳ ಮದುವೆ, ಬ್ರೇಕಪ್, ಡಿವೋರ್ಸ್, ಅಕ್ರಮ ಸಂಬಂಧ ಇವೆಲ್ಲವೂ ಕಾಮನ್ ಆಗಿಬಿಟ್ಟಿದೆ. ಕೆಲವರು ಇಂತಹ ವಿವಾದಗಳಿಂದಲೇ ಜನಪ್ರಿಯತೆ ಹೆಚ್ಚಿಕೊಂಡಿದ್ದಾರೆ. ಸಾಮಾನ್ಯವಾಗಿ ಮದುವೆಯಾದ ಒಂದು ವರ್ಷದೊಳಗೆ ದಂಪತಿ ಗುಡ್‌ನ್ಯೂಸ್ ಕೊಡುತ್ತಾರೆ. ಆದರೆ, ಖ್ಯಾತ ನಟನ ಎರಡನೇ ಪತ್ನಿಯಾಗಿ ಹಸೆಮಣೆ ಏರಿದ ಕೆಲ ಹೊತ್ತಲ್ಲೇ ತಾನು ಆರು ತಿಂಗಳ ಗರ್ಭಿಣಿ ಎನ್ನುವ ಮೂಲಕ ಶಾಕ್ ಕೊಟ್ಟಿದ್ದಾರೆ. ಈ ವಿಚಾರವನ್ನು ನಟನ ಪತ್ನಿಯೇ ಬಹಿರಂಗಪಡಿಸಿರುವುದು ಅಚ್ಚರಿ ಮೂಡಿಸಿದೆ.
ತಮಿಳು ನಟ ಮಾಧಂಪಟ್ಟಿ ರಂಗರಾಜ್ ಅವರಿಗೆ ಈಗಾಗಲೇ ಶ್ರುತಿ ಅವರೊಂದಿಗೆ ಮೊದಲನೇ ಮದುವೆಯಾಗಿದ್ದು, ಇತ್ತೀಚೆಗೆ ಸ್ಟೈಲಿಸ್ಟ್ ಜಾಯ್ ಕ್ರಿಜಿಲ್ಡಾ ಎಂಬುವವರನ್ನು ಎರಡನೇ ಮದುವೆಯಾಗಿ ಸುದ್ದಿಯಾಗಿದ್ದರು. ಆದರೆ ಮದುವೆಯಾದ ಕೆಲ ಸಮಯದಲ್ಲೇ ನಾವು ಆಗಲೇ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ದಂಪತಿ ಘೋಷಿಸಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಆದರೆ ರಂಗರಾಜ್ ಅವರ ಮೊದಲ ಪತ್ನಿ ಶ್ರುತಿ ರಂಗರಾಜ್ ಅವರು ತಾವು ಇನ್ನೂ ಕಾನೂನುಬದ್ಧವಾಗಿ ಮದುವೆಯಾಗಿದ್ದೇವೆ ಎಂದು ಹೇಳಿಕೊಳ್ಳುವುದರಿಂದ ಈ ಸುದ್ದಿ ವಿವಾದ ಹುಟ್ಟುಹಾಕಿದೆ, ಇದು ಸಾರ್ವಜನಿಕ ಊಹಾಪೋಹ ಮತ್ತು ಚರ್ಚೆಗೂ ನಾಂದಿ ಹಾಡಿದೆ. ಜಾಯ್ ಕ್ರಿಜಿಲ್ಡಾ ತಮ್ಮ ಮದುವೆಯ ಚಿತ್ರಗಳೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. "ನಾನು ಗರ್ಭಿಣಿಯಾಗಿದ್ದೇನೆ. ಈಗ ನಾನು ಆರು ತಿಂಗಳ ಗರ್ಭಿಣಿ. 2025ರಲ್ಲೇ ಮಗುವಿನ ಜನನ" ಎಂದು ಪೋಸ್ಟ್ ಮಾಡಿದ್ದಾರೆ.
ಮೊದಲ ಪತ್ನಿಗೆ ಡಿವೋರ್ಸ್ ಕೊಟ್ರಾ?
ಈ ಹಿಂದೆ ಜಾಯ್ ಅವರು ರಂಗರಾಜ್ ಅವರನ್ನು ದೇವಸ್ಥಾನದಲ್ಲಿ ವಿವಾಹವಾದರು ಎಂದು ಅಧಿಕೃತವಾಗಿ ಹೇಳಿದ್ದರು. ಬಳಿಕ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ನಟ ಹಾಗೂ ಚೆಫ್ ಆಗಿ ಗುರುತಿಸಿಕೊಂಡಿರುವ ರಂಗರಾಜ್ ಅವರಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ತಮಿಳುನಾಡಿನ ಕೊಯಮತ್ತೂರಿನ ವಕೀಲೆ ಶ್ರುತಿ ಅವರನ್ನು ಮಾಧಂಪಟ್ಟಿ ರಂಗರಾಜ್ ಮೊದಲ ವಿವಾಹವಾಗಿದ್ದರು. ಅವರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದು, ಆಗಾಗ ತಮ್ಮ ಪುತ್ರರೊಂದಿಗೆ ಇರುವ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಶ್ರುತಿ ಇನ್ನೂ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತಿ ರಂಗರಾಜ್ ಜೊತೆಗಿನ ಫೋಟೋಗಳನ್ನು ಪಿನ್ ಮಾಡಿದ್ದಾರೆ. ಹಾಗಾಗಿ ದಂಪತಿ ಅಧಿಕೃತವಾಗಿ ಡಿವೋರ್ಸ್ ಪಡೆದಿದ್ದಾರೆ ಎಂಬುದು ಖಚಿತವಾಗಿಲ್ಲ.
ಮಾಧಂಪಟ್ಟಿ ರಂಗರಾಜ್ ತಮಿಳು ಚಿತ್ರರಂಗದ ಪ್ರಸಿದ್ಧ ನಟ ಹಾಗೂ ಅಡುಗೆ ಕೆಲಸ ಮಾಡುತ್ತಿದ್ದರು. ಹಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸಿನಿಮಾ ರಂಗದ ಪ್ರಸಿದ್ಧ ಫ್ಯಾಷನ್ ಡಿಸೈನರ್ ಆಗಿರುವ ಜಾಯ್ ಗ್ರಿಸೆಲ್ಡಾ ಅವರೊಂದಿಗಿನ ಪರಿಚಯ ಪ್ರೀತಿಗೆ ತಿರುಗಿತು ಕೊನೆಗೆ ಮದುವೆಯಾಗಿದ್ದಾರೆ ಎನ್ನಲಾಗಿದೆ. ಗ್ರಿಸೆಲ್ಡಾ ಕೆಲವು ದಿನಗಳ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇಬ್ಬರೂ ಮದುವೆಯಾಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಆದರೆ ಇಲ್ಲಿಯವರೆಗೆ ರಂಗರಾಜ್ ತಮ್ಮ ಮೊದಲ ಪತ್ನಿ ಶ್ರುತಿಯಿಂದ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.
ಜಾಯ್‌ಗೂ ಎರಡನೇ ಮದುವೆ!
ಜಾಯ್ ಗ್ರಿಸೆಲ್ಡಾ ಆರು ತಿಂಗಳ ಗರ್ಭಿಣಿ ಎಂದು ದಿಢೀರ್ ಘೋಷಿಸಿರುವುದು ಸಾಕಷ್ಟು ಸಂಚಲನ ಮತ್ತು ವಿವಾದಕ್ಕೆ ಕಾರಣವಾಗಿದೆ. ಅಚ್ಚರಿ ಎಂದರೆ ಇದು ಜಾಯ್ ಗ್ರಿಸೆಲ್ಡಾ ಅವರಿಗೂ ಇದು ಎರಡನೇ ಮದುವೆಯಾಗಿದೆ. ಅವರು ಈ ಹಿಂದೆ ನಿರ್ದೇಶಕ ಜೆ.ಜೆ. ಫ್ರೆಡೆರಿಕ್ ಅವರನ್ನು ವಿವಾಹವಾಗಿ ಡಿವೋರ್ಸ್ ಪಡೆದಿದ್ದರು. ಅವರಿಗೆ ಒಬ್ಬ ಮಗನಿದ್ದಾನೆ ಎಂಬ ವದಂತಿಗಳೂ ಇವೆ. ಇದರ ನಡುವೆ ಅವರು ನಟನೊಂದಿಗೆ ಎರಡನೇ ಮದುವೆಯಾಗಿದ್ದಾರೆ.












Click it and Unblock the Notifications