Tamannaah Bhatia: ಆ ಅದೃಷ್ಟವಂತನಿಗೆ ನಾನೇ ಸಂಗಾತಿ: ಬ್ರೇಕಪ್ ಬಳಿಕ ಗುಡ್‌ನ್ಯೂಸ್ ಕೊಟ್ಟ ತಮನ್ನಾ
ಕನ್ನಡ ಕೆಜಿಎಫ್ ಸಿನಿಮಾದಲ್ಲಿ ಜೋಕೆ ಹಾಡಿಗೆ ಸೊಂಟ ಬಳುಕಿಸಿದ್ದ ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ತಮನ್ನಾ ಹಾಗೂ ನಟ ವಿಜಯ್ ವರ್ಮಾ ಅವರು ಇನ್ನೇನು ಹಸೆಮಣೆ ಏರಲಿದ್ದಾರೆ ಎನ್ನುವ ಹೊತ್ತಲ್ಲೇ ಬ್ರೇಕಪ್ ಮಾಡಿಕೊಂಡಿದ್ದರು. ಇದು ಅವರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಬ್ರೇಕಪ್ ಬಳಿಕ ಎಂದಿನಂತೆ ತಮನ್ನಾ ತನ್ನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಹಾಗೂ ಜೀವನ ಸಂಗಾತಿಯ ಬಗ್ಗೆ ತಮನ್ನಾ ಕೊನೆಗೂ ರಿವೀಲ್ ಮಾಡಿದ್ದಾರೆ.
ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಇಬ್ಬರೂ ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಲಸ್ಟ್ ಸ್ಟೋರೀಸ್-2 ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಬಳಿಕ ವೇದಿಕೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ವದಂತಿಗಳಿಗೆ ಆಹಾರವೂ ಆಗಿದ್ದರು. ಬಳಿಕ ಇಬ್ಬರೂ ತಮ್ಮ ಡೇಟಿಂಗ್ ವದಂತಿಯನ್ನು ಪರೋಕ್ಷವಾಗಿ ಖಚಿತಪಡಿಸಿದ್ದರು. ಮದುವೆಗೆ ಸಜ್ಜಾಗಿದ್ದಾರೆ ಎಂದು ಖುಷಿ ಪಡುವ ಸಮಯದಲ್ಲಿ ಇದ್ದಕ್ಕಿದ್ದಂತೆ ಬ್ರೇಕಪ್ ಮಾಡಿಕೊಂಡಿದ್ದರು.

ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಹಲವು ವರ್ಷಗಳಿಂದ ಲವ್‌ನಲ್ಲಿದ್ದರು. ಸಂಬಂಧಗಳು ನಿರ್ಬಂಧವನ್ನು ಅನುಭವಿಸಬಾರದು, ನಾನು ಮತ್ತು ತಮನ್ನಾ ಮುಚ್ಚಿಡಲು ಏನೂ ಇಲ್ಲ ಎಂದು ವಿಜಯ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಇಬ್ಬರೂ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ಇಬ್ಬರ ಫೋಟೋಗಳನ್ನು ಡಿಲೀಟ್ ಮಾಡುವ ಮೂಲಕ ತಮ್ಮ ಬ್ರೇಕಪ್ ಘೋಷಿಸಿದ್ದರು. ಸಿನಿಮಾಗಳಲ್ಲಿ ಇಬ್ಬರೂ ಬ್ಯುಸಿಯಾಗಿರುವುದರಿಂದ ತಮ್ಮ ತಮ್ಮ ವೃತ್ತಿಜೀವನದ ಮೇಲೆ ಗಮನ ಹರಿಸಿದ್ದು, ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಒಟ್ಟಿಗೆ ಇದ್ದ ಫೋಟೋಗಳನ್ನು ಡಿಲೀಟ್ ಮಾಡಿ ಅಭಿಮಾನಿಗಳಿಗೆ ಬ್ರೇಕಪ್ ವಿಚಾರ ತಲುಪಿಸಿದ್ದರು. ವರದಿಗಳ ಪ್ರಕಾರ ವೈಯಕ್ತಿಕ ಜೀವನದ ಗುರಿಗಳ ಭಿನ್ನತೆಯಿಂದಾಗಿ ಇಬ್ಬರೂ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಆ ಅದೃಷ್ಟಶಾಲಿ...
ಇತ್ತೀಚಿನ ಸಂದರ್ಶನದಲ್ಲಿ ತಮನ್ನಾ ತನ್ನ ಹೊಸ ಸಂಗಾತಿ ಬಗ್ಗೆ ಅಚ್ಚರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. 'ನಾನು ಉತ್ತಮ ಜೀವನ ಸಂಗಾತಿಯಾಗಲು ಪ್ರಯತ್ನಿಸುತ್ತಿದ್ದೇನೆ. ಈ ಸಮಯದಲ್ಲಿ ಅದೇ ನನ್ನ ಅನ್ವೇಷಣೆ. ಹಿಂದಿನ ಜನ್ಮದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ ಎಂದು ಯಾರಾದರೂ ಭಾವಿಸಬೇಕು. ಅಂತವರಿಗೆ ಜೀವನ ಸಂಗಾತಿಯಾಗಲು ನಾನು ಬಯಸುತ್ತೇನೆ. ಅದಕ್ಕಾಗಿಯೇ ನಾನು ಅವರ ಜೀವನಕ್ಕೆ ಬಂದಿದ್ದೇನೆ. ಆ ಅದೃಷ್ಟಶಾಲಿ ಯಾರೇ ಆಗಿರಲಿ. ಸದ್ಯದಲ್ಲೇ ಅದು ಹೊರಬರಲಿದೆ' ಎಂದಿದ್ದಾರೆ.
'ನಾನು ಇತ್ತೀಚೆಗೆ ಕೆಲವು ವಿಷಯಗಳನ್ನು ಅರಿತುಕೊಂಡೆ. ಒಂದು ಪ್ರೀತಿ ಎಂದರೇನು? ಮತ್ತು ಸಂಬಂಧ ಏನು ಎಂದು ಜನರು ಗೊಂದಲಕ್ಕೊಳಗಾಗುತ್ತಾರೆ. ಪುರುಷ-ಮಹಿಳೆ ಸಂಬಂಧದಲ್ಲಿ ಮಾತ್ರವಲ್ಲ, ಆದರೆ ಸ್ನೇಹಿತರಲ್ಲಿಯೂ ಸಹ ಅದು ಷರತ್ತುಬದ್ಧವಾದ ಕ್ಷಣ. ಆ ಕ್ಷಣದಲ್ಲಿ ಅದು ಪ್ರೀತಿಯಾಗಿ ನಿಲ್ಲುತ್ತದೆ ಎಂದು ನನಗೆ ಅನಿಸುತ್ತದೆ' ಎಂದು ತಮನ್ನಾ ಹೇಳಿದ್ದಾರೆ.












Click it and Unblock the Notifications