Sushmith Jain: ಬಿಗ್‌ಬಾಸ್‌ಗೆ ಅಣ್ಣಯ್ಯ ಪಾತ್ರಧಾರಿ ಜಿಮ್ ಸೀನ: ಸೀರಿಯಲ್ ಬಿಟ್ಟಿದ್ದಕ್ಕೆ ಕೊಟ್ಟ ಕಾರಣ ರಿವೀಲ್ ?
Sushmith Jain: ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಣ್ಣಯ್ಯ ಸೀರಿಯಲ್‌ನ ಇನ್ಮುಂದೆ ನಾವು ನೋಡಲ್ಲ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಸೀರಿಯಲ್‌ನ ಪ್ರಮುಖ ಪಾತ್ರಧಾರಿ ಬದಲಾಗಿರುವುದು ಹಲವು ಅಭಿಮಾನಿಗಳು ಬೇಸರ ತರಿಸಿದೆ. "ಕಳ್ - ಕಳೆಯಾಗಿ ಬಂದವ್ನೆ ಸೀನ!" ಎನ್ನುವ ಸಾಲುಗಳೊಂದಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಸೀರಿಯಲ್‌ನ ಹೊಸ ಪಾತ್ರಧಾರಿಯನ್ನು ಪರಿಚಯಿಸಲಾಗಿದೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಸೀರಿಯಲ್ ಅಣ್ಣಯ್ಯದಿಂದ ಜಿಮ್ ಸೀನ ಪಾತ್ರಧಾರಿ ಸುಷ್ಮಿತ್ ಜೈನ್ ಅವರು ಹೊರ ಬಂದಿದ್ದಾರೆ. ಇದೀಗ ಸುಷ್ಮಿತ್ ಅವರ ಜಾಗಕ್ಕೆ ಹೊಸ ನಟ ನಿದರ್ಶನ್ ಅವರು ಬಂದಿದ್ದಾರೆ. ರಂಗಭೂಮಿಯ ಕಲಾವಿದರಾಗಿರುವ ನಿರ್ದಶನ್ ಅವರು ಇದೇ ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿದ್ದಾರೆ.

Sushmith Jain: ಹೊಸ ಪಾತ್ರಧಾರಿ ಪರಿಚಯ: ಮುನಿಸಿಕೊಂಡ ಪ್ರೇಕ್ಷಕರು
ಇನ್ನು ಅಣ್ಣಯ್ಯ ಸೀರಿಯನ್‌ನ ಪ್ರಮುಖ ಪಾತ್ರಧಾರಿ ಜಿಮ್ ಸೀನ ಪಾತ್ರಧಾರಿ ಬದಲಾಗಿರುವುದಕ್ಕೆ ಬೇಸರ ಮಾಡಿಕೊಂಡಿದ್ದಾರೆ. ಸೀನ ಚೇಂಜ್ ಆಗಿದ್ದು ತುಂಬಾ ಬೇಜಾರ್ ಆಯ್ತು ಎಂದು ಅಭಿಮಾನಿಗಳು ಹೇಳಿದ್ದಾರೆ. ಇನ್ನೂ ಕೆಲವರು ಪಿಂಕಿ ಜೀ ಕನ್ನಡ ಬಿಟ್ಟಮೇಲೆ ಸೀನ ಕೂಡ ಬಿಟ್ಟ 🙌😂😂 ಎಲ್ಲೋ ರಿಯಲ್ Love ಅನ್ಸುತ್ತೆ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಕೆಲವರು ಜಿಮ್‌ಸೀನ ಇಲ್ಲದೆ ಇರುವುದರಿಂದ ಇನ್ಮುಂದೆ ಸೀರಿಯಲ್ ನೋಡಲ್ಲ ಅಂತಲೂ ಹೇಳುತ್ತಿದ್ದಾರೆ. ಇನ್ನೂ ಕೆಲವರು ಜಿಮ್ ಸೀನ ಬಿಗ್‌ಬಾಸ್‌ಗೆ ಹೋಗುತ್ತಿರಬೇಕು. ಇದಕ್ಕಾಗಿಯೇ ಸೀರಿಯಲ್‌ನಿಂದ ಹೊರ ಬಂದಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ನಮ್ಮ ಹೊಸ ಸೀನ ಅವರು ಕೂಡ ತುಂಬಾ ಚೆನ್ನಾಗಿ ಕಾಣಿಸ್ತಾ ಇದಾರೆ ಅನ್ನೋರು ಲೈಕ್ ಮಾಡಿ ಅಂತಲೂ ಕೆಲವು ನೆಟ್ಟಿಗರು ಹೇಳಿದ್ದಾರೆ.
ಅಣ್ಣಯ್ಯ ಸೀರಿಯಲ್‌ನಲ್ಲಿ ಜಿಮ್ ಸೀನ ಹಾಗೂ ಗುಂಡಮ್ಮ ಜೋಡಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಇಬ್ಬರ ನಡುವಿನ ತಮಾಷೆ, ಹಾಸ್ಯ ಹಾಗೂ ಒಬ್ಬರನ್ನೊಬ್ಬರು ಕಾಲೆಳೆಯುವುದನ್ನು ಜನ ಮೆಚ್ಚಿಕೊಂಡಿದ್ದರು. ಸೀರಿಯಲ್‌ನಲ್ಲಿ ಜಿಮ್ ಸೀನ ಹಾಗೂ ಪಿಂಕಿ ನಡುವಿನ ಪ್ರೇಮಕಥೆ, ಗುಂಡಮ್ಮನ ಸಂಕಷ್ಟಗಳೆಲ್ಲವೂ ತೀರಿತು ಎನ್ನುವಾಗಲೇ ಸೀನ ಪಾತ್ರಧಾರಿಯೂ ಬದಲಾಗಿರುವುದು ಅಭಿಮಾನಿಗಳನ್ನು ಬೇಸರವನ್ನುಂಟು ಮಾಡಿದೆ. ಇನ್ನು ಜಿಮ್ ಸೀನ ಸಂಪೂರ್ಣವಾಗಿ ಬದಲಾಗಿದ್ದಾನೆಯೇ ಅಥವಾ ಗುಂಡಮ್ಮನ ಹೆಸರಿನಲ್ಲಿರುವ ಆಸ್ತಿಗೋಸ್ಕರ ಬದಲಾಗಿರುವಂತೆ ನಾಟಕವಾಡ್ತಿದ್ದಾನ ಎನ್ನುವ ಅನುಮಾನವೂ ಸಹ ವೀಕ್ಷಕರಲ್ಲಿದೆ. ಈ ಎಲ್ಲ ಪ್ರಶ್ನೆಗಳಿಗೂ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.
Sushmith Jain: ಅಣ್ಣಯ್ಯ ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ: ಸುಷ್ಮಿತ್ ಜೈನ್
ಇನ್ನು ಅಣ್ಣಯ್ಯ ಸೀರಿಯಲ್‌ನ ಜಿಮ್ ಸೀನ ಪಾತ್ರದಿಂದ ಹೊರ ಬಂದಿದ್ಯಾಕೆ ಎನ್ನುವ ಬಗ್ಗೆ ಸುಷ್ಮಿತ್ ಜೈನ್ ಅವರು ಮಾತನಾಡಿದ್ದಾರೆ. ಜೀ ಕನ್ನಡ ಇನ್‌ಸ್ಟಾಗ್ರಾಮ್‌ನಲ್ಲಿ ಸುಷ್ಮಿತ್ ಜೈನ್ ಅವರ ವಿಡಿಯೋವನ್ನು ಹಂಚಿಕೊಂಡಿದೆ. ಅದರಲ್ಲಿ ವೈಯಕ್ತಿಕ ಕಾರಣಗಳಿಂದ ಜಿಮ್‌ಸೀನ ಪಾತ್ರವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಮುಂದೆ ನನ್ನ ಪಾತ್ರವನ್ನು ಯಾರು ಮಾಡಲು ಬರುತ್ತಾರೋ ಅವರಿಗೂ ಪ್ರೀತಿ, ಬೆಂಬಲ ಕೊಟ್ಟು ಸಹಕರಿಸಿ ಅಂತ ಕೇಳಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ಎಂದು ನಟ ಸುಷ್ಮಿತ್ ಜೈನ್ ಅವರು ಹೇಳಿದ್ದಾರೆ.


Click it and Unblock the Notifications
