Su From So: ಸು ಫ್ರಮ್ ಸೋ: ಹಾಸ್ಯದ ಆಸ್ವಾದನೆಯಲ್ಲಿ ಮುಚ್ಚಿ ಹೋದ ಆಶಯ

Su From So: ಸು ಫ್ರಮ್ ಸೋ ಸಿನಿಮಾ ಕನ್ನಡ ಹಾಗೂ ಮಲಯಾಳಂ ಭಾಷೆಯ ನಂತರ ಇದೀಗ ತೆಲುಗು ಭಾಷೆಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ದೃಶ್ಯಗಳು ಹಾಗೂ ಕಥೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸು ಫ್ರಮ್ ಸೋ ಸಿನಿಮಾದಲ್ಲಿ ಎರಡು ಮಹತ್ವದ ಸಂದೇಶಗಳನ್ನೂ ನೀಡಲಾಗಿದೆ. ಈ ಸಿನಿಮಾವನ್ನು ಹಾಸ್ಯದೊಂದಿಗೆ ಸೂಕ್ಷ್ಮವಾಗಿ ನೋಡಿದರೆ ತಿಳಿಯುತ್ತದೆ. ಹೌದು ಈ ಸಿನಿಮಾದಲ್ಲಿ ಹಾಸ್ಯದ ಆಸ್ವಾದನೆಯಲ್ಲಿ ಮುಚ್ಚಿಹೋದ ಆಶಯ ಎನ್ನುವಂತೆ ಈ ಸಿನಿಮಾದ ಪ್ರಮುಖ ವಿಷಯವೊಂದು ಸಿನಿ ಪ್ರೇಕ್ಷಕರಿಗೆ ಪರಿಚಯವಾದಂತೆ ಇಲ್ಲ. ಈ ಬಗ್ಗೆ ಶಿಕ್ಷಕರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ನೆಲ ಮೂಲದ ಸಿನಿಮಾ ಸು ಫ್ರಮ್ ಸೋ ಸಿನಿಮಾ ಬಗ್ಗೆ ಶಿಕ್ಷಕರಾದ ದಕ್ಷಿಣಾಮೂರ್ತಿ ಅವರು, "ಹಾಸ್ಯದ ಆಸ್ವಾದನೆಯಲ್ಲಿ ಮುಚ್ಚಿಹೋದ ಆಶಯ" ಎನ್ನುವ ಬರಹವನ್ನು ಹಂಚಿಕೊಂಡಿದ್ದಾರೆ. ಸು ಫ್ರಮ್ ಸೋ ಚಿತ್ರವು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದು ಖುಷಿಯ ವಿಚಾರ. 16ನೇ ದಿನದಲ್ಲೂ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಎಲ್ಲರೂ ಹೇಳುವಂತೆ ಅತಿ ಅಗತ್ಯವಾದ ಗೆಲುವಾಗಿದೆ. ಆದರೆ, ಪ್ರೇಕ್ಷಕರಾಗಿ ನಾವು ಕೇವಲ ಮನರಂಜನೆಯನ್ನೇ ಮುನ್ನಲೆಯಲ್ಲಿ ಮೆರೆಸುತ್ತಿದ್ದೇವೆ.

Su from So Lost Essence of Comedy Sparks Viral Buzz

ಈ ಚಿತ್ರದಲ್ಲಿ ಮಾತನಾಡಿರುವ ಕೌಟುಂಬಿಕ ದೌರ್ಜನ್ಯ ( domestic violence ) ಬಗ್ಗೆ ನಾವು ಮಾತನಾಡುವ ಅವಶ್ಯಕತೆ ಇದೆ. ಪ್ರತಿ ಮನೆಯಲ್ಲಿ ಭಾನುವಿನಂತಹ ಹೆಣ್ಣು ಮಕ್ಕಳಿದ್ದಾರೆ ಸ್ವಂತ ಬಾವ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅಣ್ಣಂದಿರಿಂದ ಲೈಂಗಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಆದರೆ ಅದನ್ನು ನೇರವಾಗಿ ಹೇಳಲು ಸಾಧ್ಯವಿಲ್ಲದೆ ಕೌಟುಂಬಿಕ ಚೌಕಟ್ಟಿಗೆ ಹೆದರಿ ಪ್ರತಿದಿನ ನರಕವನ್ನು ಅನುಭವಿಸುತ್ತಿದ್ದಾರೆ. ಇಂತಹ ವಿಷಯವನ್ನು ನಾವು ಗಮನಿಸಬೇಕು #metoo ಆಂದೋಲನ ಆದಾಗ ಎಲ್ಲರೂ ಮಾತನಾಡಿದರು, ಆಗ ಒಂದು ಸಂಚಲನ ಉಂಟಾಗಿತ್ತು. ಅದು ಔದ್ಯೋಗಿಕ ವಲಯದಲ್ಲಿ ನಡೆದಂತಹ ವಿಷಯಗಳು; ಕೌಟುಂಬಿಕ ವಲಯದಲ್ಲಿ ನಡೆಯುವಂತಹ ಲೈಂಗಿಕ ದೌರ್ಜನ್ಯಗಳನ್ನು ಮಾತನಾಡುವ ಅವಶ್ಯಕತೆ ಇದೆ.

ಅದಕ್ಕೆ ಪೂರಕವಾದ ಕಾನೂನಿನ ಅವಶ್ಯಕತೆಯೂ ಇದೆ ಪೋಕ್ಸೋ ದಂತಹ ಒಂದು ಕಾನೂನು, ಕೌಟುಂಬಿಕ ದೌರ್ಜನ್ಯಗಳಿಗೆ ಒಳದಾದಂತಹ ಮಹಿಳೆಯರಿಗೆ ಮುಕ್ತವಾಗಿ ಹೇಳಿಕೊಳ್ಳುವಂತಹ ಆಪ್ತ ಸಮಾಲೋಚನಾ ಕೇಂದ್ರಗಳು ಲಭ್ಯವಾಗಬೇಕು. ಕೌಟುಂಬಿಕ ದೌರ್ಜನ್ಯ ಎಲ್ಲದಕ್ಕಿಂತಲೂ ಹೀನ, ಏಕೆಂದರೆ ದಾರಿಯಲ್ಲಿ ಹೋಗುವವರು, ಪ್ರೀತಿಸಿ ಮೋಸ ಮಾಡುವವರು, ಕಾಮಾಂಧರು ಮಾಡಬಹುದಾದ ಘಾಸಿಯನ್ನು ಪೂರ್ತಿ ನಂಬಿರುವ, ಸದಾ ಜೊತೆಗಿರುವ ಆಪ್ತ ವ್ಯಕ್ತಿಯೇ ಆ ಘಾಸಿಯನ್ನು ಮಾಡುವಾಗ ಯಾರನ್ನು ನಂಬುವುದು? ಭಾರತದಂತಹ ದೇಶದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಹತ್ತರಲ್ಲಿ ಐದರಿಂದ ಆರು ಜನ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಆದರೆ ಯಾವುದು ಬೆಳಕಿಗೆ ಬರುವುದಿಲ್ಲ, ನಾವು ಈ ನಿಟ್ಟಿನಲ್ಲಿ ಯೋಚಿಸಬೇಕಿದೆ ಸು ಫ್ರಮ್ ಸೋ ಅಂಥ ಒಂದು ಯೋಚನೆಗೆ ಅವಕಾಶ ಮಾಡಿಕೊಟ್ಟಿದೆ.

ಎಲ್ಲರೂ ಯೋಚಿಸೋಣ. ಇಡೀ ತಂಡಕ್ಕೆ ಶುಭವಾಗಲಿ ಎಂದು ಅವರು ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+