Sonakshi Sinha: ಸೋನಾಕ್ಷಿ ಸಿನ್ಹಾ ಮದುವೆಯಿಂದ ಕುಟುಂಬದಲ್ಲಿ ಮನಸ್ತಾಪ- ಸಹೋದರ ಹೇಳಿದ್ದೇನು?
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ತಮ್ಮ ಗೆಳೆಯ ಝಹೀರ್ ಇಕ್ಬಾಲ್ ಅವರೊಂದಿಗೆ ವಿವಾಹವಾದರು. ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಇಕ್ಬಾಲ್ ಇಬ್ಬರೂ ಜೂನ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಆದರೆ ನಟಿಯ ಸಹೋದರ ಲವ್ ಸಿನ್ಹಾ ತನ್ನ ಏಕೈಕ ಸಹೋದರಿಯ ಮದುವೆಯಲ್ಲಿ ಭಾಗಿಯಾಗಿರಲಿಲ್ಲ.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಲವ್ ಸಿನ್ಹಾ ಸೋನಾಕ್ಷಿ ಸಿನ್ಹಾ ಮದುವೆಗೆ ಹಾಜರಾಗಿರಲಿಲ್ಲ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಲವ್ ಸಿನ್ಹಾ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಲವ್ ಸಿನ್ಹಾ ಹೇಳಿದ್ದೇನು ಎಂದು ತಿಳಿಯೋಣ.

ಸೋನಾಕ್ಷಿ ಸಿನ್ಹಾ ಅವರ ಮದುವೆಗೆ ಸಹೋದರನ ಅನುಪಸ್ಥಿತಿಯನ್ನು ಎಲ್ಲರೂ ಗಮನಿಸಿದ್ದಾರೆ. ಇದಾದ ನಂತರ, ತನ್ನ ಸಹೋದರಿಯ ಮದುವೆಗೆ ಹಾಜರಾಗದಿದ್ದಕ್ಕಾಗಿ ಲವ್ ಸಿನ್ಹಾ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡಲಾಯಿತು. ಆದರೆ ಈ ಬಗ್ಗೆ ಒಂದು ವಾರ ಮೌನ ವಹಿಸಿದ್ದ ಲವ್ ಸಿನ್ಹಾ ಸದ್ಯ ಮೌನ ಮುರಿದಿದ್ದಾರೆ.
ಲವ್ ಸಿನ್ಹಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಾವು ಮದುವೆಗೆ ಭಾಗವಹಿಸದಿರಲು ಕಾರಣವನ್ನು ಹೇಳಿಕೊಂಡಿದ್ದಾರೆ. 'ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ನನಗೆ ತನ್ನ ಸಹೋದರಿಯ ಮೇಲೆ ಯಾವುದೇ ಕೋಪವಿಲ್ಲ. ನನ್ನ ವಿರುದ್ಧ ಆನ್‌ಲೈನ್ ಅಭಿಯಾನವನ್ನು ನಡೆಸುವುದರಿಂದ ನನಗೆ ನನ್ನ ಕುಟುಂಬಕ್ಕೆ ಬೇಸರವಾಗಿದೆ. ನನಗೆ ನನ್ನ ಕುಟುಂಬ ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತದೆ' ಎಂದು ಲವ್ ಸಿನ್ಹಾ ಅವರು ಬರೆದುಕೊಂಡಿದ್ದಾರೆ.

ಸೋನಾಕ್ಷಿ ಸಿನ್ಹಾ ಮದುವೆ ವಿಚಾರದಲ್ಲಿ ಸಹೋದರ ಲವ್ ಸಿನ್ಹ ಅವರಿಗೆ ಬೇಸರವಿದೆ ಎನ್ನಲು ಪ್ರಮುಖ ಕಾರಣವೊಂದು ಇದೆ. ಈ ಹಿಂದೆ ಸಿದ್ಧಾರ್ಥ್ ಕಾನನ್‌ಗೆ ನೀಡಿದ ಸಂದರ್ಶನದಲ್ಲಿ ಲವ್ ಸಿನ್ಹಾ,
"ನನ್ನ ಸಹೋದರಿಗೆ ರಾತ್ರೋರಾತ್ರಿ ಯಶಸ್ಸು ಸಿಕ್ಕಿತು. ಇದರಿಂದಾಗಿ ಅವರು ಸುತ್ತ ಜನ ಸುತ್ತುವರೆದಿದ್ದಾರೆ. ಎಲ್ಲರೂ ಅವರ ಸ್ವಂತ ಲಾಭಕ್ಕಾಗಿ ಬರುತ್ತಾರೆ. ನಾನು ನನ್ನ ಸಹೋದರಿಗೆ ಹೆಚ್ಚು ಹೇಳಲಾರೆ. ಅವರವರಿಗೆ ಸ್ವಂತ ಜೀವನದ ಬಗ್ಗೆ ನಿರ್ಧರಿಸುವ ಹಕ್ಕು ಇದೆ. ಆದರೆ ಯಾರು ಸರಿ ಮತ್ತು ಯಾರು ತಪ್ಪು ಎಂಬುದನ್ನು ತಿಳಿದುಕೊಳ್ಳಲು ನಾನು ಅವರಿಗೆ ಸಲಹೆ ನೀಡುತ್ತೇನೆ'' ಎಂದಿದ್ದರು.
ಸೋನಾಕ್ಷಿ ಸಿನ್ಹಾ ಕಳೆದ 7 ವರ್ಷಗಳಿಂದ ಝಹೀರ್ ಇಕ್ಬಾಲ್ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಇವರಿಬ್ಬರೂ ಮೊದಲು ಭೇಟಿಯಾದದ್ದು ಸಲ್ಮಾನ್ ಖಾನ್ ಪಾರ್ಟಿಯಲ್ಲಿ. ಇಬ್ಬರೂ ಪಾರ್ಟಿಗಳಲ್ಲಿ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೂ ದಂಪತಿಗಳು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿರಲಿಲ್ಲ. ಇಬ್ಬರೂ 2022 ರಲ್ಲಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅಲ್ಲದೆ ಸೋನಾಕ್ಷಿ ಸಿನ್ಹಾ ಅವರು ತರಾತುರಿಯಲ್ಲಿ ಮದುವೆ ಮಾಡಿಕೊಂಡಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಸೋನಾಕ್ಷಿ ಸಿನ್ಹಾ ತರಾತುರಿಯಲ್ಲಿ ಮದುವೆಯಾಗಿರುವುದಕ್ಕೆ ಕಾರಣ ಅವರು ಗರ್ಭಿಯಾಗಿದ್ದಾರೆಂದೂ ಮಾತನಾಡಿಕೊಳ್ಳಲಾಗುತ್ತಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸೋನಾಕ್ಷಿ ಸಿನ್ಹಾ ಈಗ ಮದುವೆಯಾಗಿ ಒಂದು ವಾರದಲ್ಲಿ ಆಸ್ಪತ್ರೆಗೆ ತೆರಳಿದ್ದರು. ಇದರಿಂದಾಗಿ ಅವರು ಗರ್ಭಿಣಿ ಆಗಿರಬಹುದು ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಆದರೆ ಈ ಬಗ್ಗೆ ಸೋನಾಕ್ಷಿ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications