Sonakshi Sinha Marriage: ಶತೃಘ್ನ ಸಿನ್ಹಾರ 'ರಾಮಾಯಾಣ'ದಲ್ಲಿ ಇಕ್ಬಾಲ್ ಮದುವೆಯಾದ ಸೋನಾಕ್ಷಿ ಸಿನ್ಹಾ!
ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಸೋನಾಕ್ಷಿ ಸಿನ್ಹಾ ಮದುವೆ ಇಂದು ನೆರವೇರಿದೆ. ಬಾಲಿವುಡ್ ನಟ ಜಹೀರ್ ಇಕ್ಬಾಲ್ ಅವರನ್ನು ಸೋನಾಕ್ಷಿ ಸಿನ್ಹಾ ಮದುವೆಯಾಗುವ ಮೂಲಕ, 7 ವರ್ಷಗಳ ಪ್ರೀತಿಯನ್ನು ವಿವಾಹವಾಗಿ ಬದಲಾಯಿಸಿದ್ದಾರೆ.
ಶತೃಘ್ನ ಸಿನ್ಹಾರ ನಿವಾಸ 'ರಾಮಾಯಣ'ದಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು. ಕುಟುಂಬದ ಸದಸ್ಯರು ಮತ್ತು ಬಾಲಿವುಡ್‌ನ ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ದಂಪತಿಗಳು ತಮ್ಮ ಮದುವೆಯ ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಪೋಸ್ಟ್ ಮಾಡಿದ್ದಾರೆ. ವಿಶೇಷ ವಿವಾಹ ಕಾಯಿದೆಯಡಿ ಇದು ನಾಗರಿಕ ವಿವಾಹವಾಗಿದೆ. ಮದುವೆಯು ಹಿಂದೂ ಅಥವಾ ಮುಸ್ಲಿಂ ಆಚರಣೆಗಳಿಂದ ದೂರವಿತ್ತು, ಧಾರ್ಮಿಕ ಸಂಪ್ರದಾಯಗಳಿಗಿಂತ ಮಿಗಿಲಾದ ಅವರ ಬಲವಾದ ಬಂಧದ ಮಹತ್ವವನ್ನು ತೋರಿಸಿದ್ದಾರೆ.
ಜಹೀರ್‌ನ ತಂದೆ ಇಕ್ಬಾಲ್ ರತನ್ಸಿ ಅವರ ವಿವಾಹವು ಹಿಂದೂ ಅಥವಾ ಮುಸ್ಲಿಂ ಸಂಪ್ರದಾಯಗಳನ್ನು ಅನುಸರಿಸುವುದಿಲ್ಲ ಎಂದು ಈ ಹಿಂದೆ ದೃಢಪಡಿಸಿದ್ದರು. ಇದು ಹಿಂದೂ ಅಥವಾ ಮುಸ್ಲಿಂ ಸಂಪ್ರದಾಯಗಳನ್ನು ಹೊಂದಿರುವುದಿಲ್ಲ. ಇದು ನಾಗರಿಕ ವಿವಾಹವಾಗಿರುತ್ತದೆ ಎಂದು ಅವರು ಹೇಳಿದ್ದಂತೆ ಮದುವೆ ನಡೆದಿದೆ.
ಸೋನಾಕ್ಷಿ ಸಿನ್ಹಾ ಮತಾಂತರಗೊಳ್ಳುತ್ತಿಲ್ಲ, ಅವರಿಬ್ಬರದೂ ಪ್ರೀತಿಯ ಅನುಬಂಧ, ಧರ್ಮದ ಯಾವುದೇ ಪಾತ್ರವಿಲ್ಲ. ನಾನು ಮಾನವೀಯತೆಯನ್ನು ನಂಬುತ್ತೇನೆ. ನಾವೆಲ್ಲರೂ ಮನುಷ್ಯರು ಎಂದು ಹೇಳಿದ್ದಾರೆ.
ಮುಂಬೈನ ಬಾಸ್ಟಿಯನ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದ್ದು, ನವವಿವಾಹಿತರನ್ನು ಆಶೀರ್ವದಿಸಲು ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆಯಿದೆ.
ಸೋನಾಕ್ಷಿ ಸಿನ್ಹಾ ಕೊನೆಯದಾಗಿ ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಹೊಸ ಚಿತ್ರ ಕಾಕುಡ ಜುಲೈ 12 ರಂದು ಜೀ5 ನಲ್ಲಿ ಬಿಡುಗಡೆಯಾಗಲಿದೆ.












Click it and Unblock the Notifications