ಪುಟ್ಟಕ್ಕನ ಮಕ್ಕಳು ಸ್ನೇಹ ಪಾತ್ರಧಾರಿ ಮತ್ತೆ ಬದಲು: ಧಾರಾವಾಹಿ ನಿಲ್ಲಿಸಿ ಎಂದ ವೀಕ್ಷಕರು

ಕಿರುತೆರೆಯ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಪ್ರೇಕ್ಷಕರಿಗೆ ಒಂದಾದ ಮೇಲೊಂದು ಶಾಕ್‌ ಕೊಡುತ್ತಿದ್ದು, ವೀಕ್ಷಕರು ಧಾರಾವಾಹಿಯನ್ನೇ ನಿಲ್ಲಿಸಿ ಬಿಡಿ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಮುಖ ಪಾತ್ರ ಸ್ನೇಹ ಪಾತ್ರವನ್ನು ಅಂತ್ಯಗೊಳಿಸಿ, ಸ್ನೇಹ ಎನ್ನುವ ಹೆಸರಿನ ಹೊಸ ಪಾತ್ರವನ್ನೇ ಪರಿಚಯಿಸಲಾಗಿತ್ತು.

ಸರಿಸುಮಾರು ಮೂರು ವರ್ಷಗಳ ಕಾಲ ಸ್ನೇಹ ಪಾತ್ರಧಾರಿಯಾಗಿ ಅಭಿನಯಿಸಿದ್ದ ಸಂಜನಾ ಬುರ್ಲಿ ಕಾರಣಾಂತರಗಳಿಂದ ಧಾರಾವಾಹಿ ಪಾತ್ರದಿಂದ ಹೊರಬಂದಿದ್ದರು. ಈ ವೇಳೆ ಪಾತ್ರದ ನಟಿಯನ್ನು ಬದಲಿಸುವ ಬದಲು ಸ್ನೇಹ ಪಾತ್ರವನ್ನೇ ಸಾಯಿಸಲಾಗಿತ್ತು. ಇದರಿಂದ ಅಭಿಮಾನಿಗಳಿಗೆ ತೀರಾ ನಿರಾಸೆಯಾಗಿದ್ದು, ಉತ್ತಮ ಕಥೆಯೊಂದಿಗೆ ಸಾಗುತ್ತಿದ್ದ ಧಾರಾವಾಹಿ ಹಳಿ ತಪ್ಪಿತು ಎಂದು ಅಂದೇ ಅನೇಕರು ಊಹಿಸಿದ್ದರು.

Sneha Character Again Changed in Puttakkana Makkalu Serial

ಬಳಿಕ ಪುಟ್ಟಕ್ಕನ ಮಕ್ಕಳು ಕಥೆ ಬದಲಾಗಿದ್ದು, ಸ್ನೇಹ ಹೃದಯವನ್ನು ಮತ್ತೊಂದು ಸ್ನೇಹಗೆ ನೀಡಿ ಆಕೆಯನ್ನು ಪರಿಚಯಿಸಲಾಗಿತ್ತು. ಆಕೆ ಕೂಡ ಪುಟ್ಟಕ್ಕನ ಮನೆಯಲ್ಲೇ ಇರುವಂತೆ ಕಥೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಹೊಸದಾಗಿ ಬಂದ ಸ್ನೇಹ ಪಾತ್ರವನ್ನು ಜನ ತಕ್ಕ ಮಟ್ಟಿಗೆ ಒಪ್ಪಿಕೊಂಡಿದ್ದು, ಇನ್ನೇನು ಕಥೆ ಇಂಟ್ರಸ್ಟಿಂಗ್‌ ಎನ್ನುವ ಸಮಯದಲ್ಲಿ ಮತ್ತೊಂದು ಬದಲಾವಣೆಯನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡ ಮಾಡಿದೆ.

ಈವರೆಗೂ ಅಪೂರ್ವ ನಾಗರಾಜ್ ಹೊಸ ಸ್ನೇಹಾ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇದೀಗ ಮತ್ತೆ ಈ ಸ್ನೇಹ ಪಾತ್ರಧಾರಿಯನ್ನು ಬದಲಾಯಿಸಲಾಗಿದೆ. ಮೊದಲು ಕಲರ್ಸ್ ಕನ್ನಡದ ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಮಿಣಿ ಪಾತ್ರ ಮಾಡುತ್ತಿದ್ದ ನಟಿ ಇದೀಗ ಸ್ನೇಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಸ್ನೇಹ ಪಾತ್ರಧಾರಿಯನ್ನು ಪರಿಚಯಿಸುವ ಪ್ರೋಮೋ ವೈರಲ್‌ ಆಗುತ್ತಿದ್ದು, ವೀಕ್ಷಕರು ಕಮೆಂಟ್‌ ಮೂಲಕ ಧಾರಾವಾಹಿ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Sneha Character Again Changed in Puttakkana Makkalu Serial

ಮೊದಲಿನ ಸ್ನೇಹ ಹಾಗೂ ಕಂಠಿ ಜೋಡಿಯನ್ನು ಮನಸಾರೆ ಮೆಚ್ಚಿಕೊಂಡಿದ್ದ ಪ್ರೇಕ್ಷಕರು ಅಪೂರ್ವ ನಾಗರಾಜ್ ಕಂಠಿಗೆ ತಕ್ಕನಾದ ಜೋಡಿಯಾಗುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದರು. ಇದೀಗ ಹೊಸ ನಟಿ ಕಂಠಿ ಜೋಡಿ ಎನ್ನುವ ಪ್ರೋಮೋ ನೋಡಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ವೀಕ್ಷಕರು ಮೊದಲು ಸ್ನೇಹ ಪಾತ್ರಧಾರಿ ಬದಲಿಸಿ, ಇಲ್ಲಾ ಧಾರಾವಾಹಿ ನಿಲ್ಲಿಸಿ ಎಂದಿದ್ದಾರೆ.

Take a Poll

ಕನ್ನಡದಲ್ಲಿ ಇನ್ನೂ ಒಳ್ಳೆಯ ನಟಿಯರಿದ್ದರು. ಈ ಹುಡಗಿ ಕಂಠಿಗೆ ಜೋಡಿಯಲ್ಲ. ಹೇಗೋ ಸ್ನೇಹ ಪಾತ್ರ ಬದಲಿಸಿದಿರಿ ಸುಂದರವಾಗಿರೋ ಹುಡುಗಿನಾ ಆ ಪಾತ್ರಕ್ಕೆ ಹಾಕಬೇಕಲ್ಲವೇ?, ಡೈರೆಕ್ಟರ್‌ಗೆ ಕಂಠಿಗೆ ಒಂದು ಚೆನ್ನಾಗಿರುವ ಹುಡುಗಿಯನ್ನು ಜೊತೆಯಲ್ಲಿ ಹಾಕಲು ಆಗಾಲ್ವಾ? ದಿನದಿಂದ ದಿನಕ್ಕೆ ಧಾರಾವಾಹಿ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದೆ ಎಂದು ಸಾಲು ಸಾಲು ಕಮೆಂಟ್‌ಗಳ ಮೂಲಕ ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+