Darshan Thoogudeepa: ದರ್ಶನ್ ಭೇಟಿ ಮಾಡಿದ್ದೆ ಎಂದಿದ್ದ ಸಿದ್ಧಾರೂಢಗೆ ಮತ್ತೆ ಜೈಲು 'ದರ್ಶನ'!

ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರಬಂದಿದ್ದ ಮಾಜಿ ಖೈದಿ ಸಿದ್ದಾರೂಢಗೆ ಮತ್ತೆ ಜೈಲು 'ದರ್ಶನ' ಮಾಡಿಸಲು ಪೊಲೀಸರು ಸಜ್ಜಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ನಟ ದರ್ಶನ್‌ರನ್ನು ಜೈಲಿನಲ್ಲಿ ಭೇಟಿ ಮಾಡಿದ್ದೆ ಎಂದು ಸುಳ್ಳು ಹೇಳಿದ್ದೇ ಈಗ ಆತನಿಗೆ ಮುಳುವಾಗಿದ್ದು, ಮತ್ತೆ ಬಂಧನಕ್ಕೊಳಗಾಗುವ ಭೀತಿಯಲ್ಲಿದ್ದಾರೆ.

ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಸಿದ್ಧಾರೂಢ ಬಳ್ಳಾರಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದರು. ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗುವ ಮುನ್ನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಶಿಕ್ಷೆ ಪೂರ್ತಿಯಾಗುವ ಮುನ್ನವೇ ಸನ್ನಡತೆ ಆಧಾರದಲ್ಲಿ ಹೊರಬಂದಿದ್ದ ಸಿದ್ಧಾರೂಢ ನಟ ದರ್ಶನ್‌ ವಿಚಾರದಲ್ಲಿ ಸುಳ್ಳು ಹೇಳಿಕೊಂಡು ಓಡಾಡಿದ್ದರು. ಅದೇ ಈಗ ಅವರಿಗೆ ಮುಳುವಾಗಿದೆ.

Siddharudha Faces Arrest for False Claim of Meeting Darshan in Jail

ಪರಪ್ಪನ ಅಗ್ರಹಾರದಲ್ಲಿದ್ದಾಗ ನಟ ದರ್ಶನ್‌ ಅವರನ್ನು ಭೇಟಿ ಮಾಡಿದ್ದೆ, ಅವರಿಗೆ ಧ್ಯಾನ ಮಾಡುವುದನ್ನು ಹೇಳಿಕೊಟ್ಟಿದ್ದೇನೆ ಎಂದಿದ್ದರು. ದರ್ಶನ್‌ಗೆ ವಿಐಪಿ ಸೆಲ್ ನೀಡಲಾಗಿದ್ದು, ಅಲ್ಲಿ ಟಿವಿ ಕೂಡ ಇರುತ್ತದೆ ಎಂದಿದ್ದ, ಜೊತೆಗೆ ಜೈಲು ಊಟವನ್ನು ನಾಯಿ ಕೂಡ ತಿನ್ನುವುದಿಲ್ಲ, ದರ್ಶನ್ ಹೇಗೆ ತಿನ್ನುತ್ತಾರೆ ಎಂದೆಲ್ಲಾ ಹೇಳಿದ್ದರು.

ಸಿದ್ಧಾರೂಢ ಹೇಳಿಕೆ ಜೈಲು ಅಧಿಕಾರಿಗಳಿಗೆ ಸಂಕಷ್ಟ ತಂದಿತ್ತು, ದರ್ಶನ್‌ರನ್ನು ಯಾರಿಗೂ ಭೇಟಿಯಾಗಲು ಅವಕಾಶ ಇಲ್ಲದಿದ್ದರೂ ಈತ ಭೇಟಿ ಮಾಡಿದ್ದು ಹೇಗೆ ಎಂದು ಉನ್ನತ ಅಧಿಕಾರಿಗಳು ಜೈಲು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದರು. ಸಿದ್ಧಾರೂಢ ಹೇಳಿಕೆ ಕಾರಾಗೃಹ ಅಧಿಕಾರಿಗಳಿಗೆ ಸಂಕಷ್ಟ ತಂದ ಹಿನ್ನಲೆಯಲ್ಲಿ ಕಾನೂನು ಮುಖಾಂತರವೇ ಕ್ರಮಕ್ಕೆ ಮುಂದಾಗಿದ್ದಾರೆ.

ಸನ್ನಡತೆಯನ್ನು ಕ್ಯಾನ್ಸಲ್ ಮಾಡಲು ಜೈಲು ಅಧಿಕಾರಿಗಳು ತೀರ್ಮಾನ ಮಾಡಿದ್ದು, ಮತ್ತೆ ಜೈಲು ತೋರಿಸಲು ಸಜ್ಜಾಗಿದ್ದಾರೆ. ಕಾರಾಗೃಹದ ಊಟವನ್ನು ನಾಯಿ ಕೂಡ ತಿನ್ನಲ್ಲ ಎಂದಿದ್ದಲ್ಲದೆ ಅಲ್ಲಿನ ವ್ಯವಸ್ಥೆ ಬಗ್ಗೆಯೇ ಅವಹೇಳನ ಮಾಡಿದ್ದು, ದರ್ಶನ್‌ ಭೇಟಿಯಾಗದೇ ಇದ್ದರೂ ತನ್ನ ಪ್ರಚಾರಕ್ಕೆ ಭೇಟಿಯಾಗಿದ್ದೆ ಎಂದು ಸುಳ್ಳು ಹೇಳಿಕೊಂಡಿದ್ದವನಿಗೆ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ. ಗೃಹ ಇಲಾಖೆ ಕಾರಾಗೃಹ ಇಲಾಖೆಯಿಂದ ವರದಿ ಕೇಳಿದ್ದು, ಶೀಘ್ರದಲ್ಲೇ ಸಿದ್ಧಾರೂಢನನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ದರ್ಶನ್ ಪ್ರಕರಣ ಅಪ್‌ಡೇಟ್‌!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್ ತೂಗುದೀಪ ಸದ್ಯಕ್ಕೆ ಜೈಲಿನಿಂದ ಹೊರಬರುವ ಸಾಧ್ಯತೆ ಬಹಳ ಕಡಿಮೆಯಾಗಿದೆ. ಮನೆ ಊಟ ಕೊಡಲು ಸಾಧ್ಯವಿಲ್ಲ ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಕೊಟ್ಟ ನಂತರ, ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಹೊಸ ರಿಟ್ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+