Shobha Shetty: ದಿಢೀರ್ ಆಸ್ಪತ್ರೆಗೆ ದಾಖಲಾದ ಬಿಗ್‌ಬಾಸ್ ಖ್ಯಾತಿಯ ಶೋಭಾ ಶೆಟ್ಟಿ, ಕಾರಣವೇನು ?!
Shobha Shetty: ಕನ್ನಡ ಬಿಗ್‌ಬಾಸ್ ಸೀಸನ್ 11ರಲ್ಲಿ ಕೆಲವೇ ದಿನವಿದ್ದರೂ ಸಖತ್ ಆಗಿ ಮಿಂಚಿದ್ದ ನಟಿ ಶೋಭಾ ಶೆಟ್ಟಿ ಅವರು ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಾರಿಯ ಕನ್ನಡ ಬಿಗ್‌ಬಾಸ್‌ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟಿರುವ ಸ್ಪರ್ಧಿಗಳ ಹವಾ ಹೆಚ್ಚಾಗಿದೆ. ಹನುಮಂತ ಅವರು ಬಿಗ್‌ಬಾಸ್‌ನಲ್ಲಿ ಮಿಂಚುತ್ತಿದ್ದಾರೆ. ರಜತ್ ಅವರು ಸಹ ವೈಲ್ಡ್ ಕಾರ್ಡ್‌ನಲ್ಲೇ ಎಂಟ್ರಿಕೊಟ್ಟಿದ್ದು, ಬಿಗ್‌ಬಾಸ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ. ರಜತ್ ಅವರು ಹಾಗೂ ಶೋಭಾ ಇಬ್ಬರೂ ಕನ್ನಡ ಬಿಗ್‌ಬಾಸ್ ಸೀಸನ್ 11ಕ್ಕೆ ಒಟ್ಟಿಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಶೋಭಾ ಅವರು ಮಧ್ಯಕ್ಕೆ ಗೇಮ್‌ನಿಂದ ಹೊರಗೆ ಬಂದಿದ್ದರು. ಇದೀಗ ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ನಟಿ ಶೋಭಾ ಶೆಟ್ಟಿ ಅವರು ಬಿಗ್‌ಬಾಸ್ ತೆಲುಗುನಲ್ಲಿ ಸಖತ್ ಮಿಂಚಿದ್ದರು. ಕನ್ನಡದಲ್ಲೂ ಅವರು ಅಗ್ರೆಸ್ಸಿವ್ ಆಗಿ ಆಟ ಆಡಲಿದ್ದಾರೆ ಎಂದೇ ನಿರೀಕೆ ಮಾಡಲಾಗಿತ್ತು. ಆದರೆ, ಆ ಲೆಕ್ಕಾಚಾರಗಳು ತಲೆಕೆಳಗಾಗಿದ್ದವು. ನಾನು ಗೇಮ್‌ನ ಕ್ವೀಟ್ ಮಾಡ್ತೀನಿ ಅಂತ ಹೇಳಿಯೇ ಅವರು ಬಿಗ್‌ಬಾಸ್‌ನಿಂದ ಹೊರ ನಡೆದಿದ್ದರು. ಇದೀಗ ಏಕಾಏಕಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಬಂದಿದೆ.

ಹೌದು ಶೋಭಾ ಅವರ ಆರೋಗ್ಯದಲ್ಲಿ ಸಣ್ಣ ಏರುಪೇರಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ವಿಷಯವನ್ನು ಅವರೇ ದೃಢಪಡಿಸಿದ್ದಾರೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11ಕ್ಕೆ ಬಂದಿದ್ದ ಶೋಭಾ ಅವರು ಏಕಾಏರಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ವಿಷಯವನ್ನು ಅವರು ಅವರ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ತಿಳಿಸಿದ್ದಾರೆ. ಈ ಬಾರಿಯ ಬಿಗ್‌ಬಾಸ್ ಸೀಸನ್‌ನಲ್ಲಿ 50ನೇ ದಿನಕ್ಕೆ ವೈಲ್ಡ್ ಕಾರ್ಡ್ ಮೂಲಕ ಅವರು ಬಂದಿದ್ದರು. ಆದರೆ, ಬಂದಂತೆಯೇ ಗೇಮ್ ಗೀವ್ ಅಪ್ ಮಾಡಿದ್ದರು.
ನನಗೆ ಆರೋಗ್ಯ ಸಮಸ್ಯೆ ಇರುವುದರಿಂದ ಗೇಮ್ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ನನಗೆ ಆಟವಾಡಬೇಕು ಎನ್ನುವ ಆಸೆ ಇದ್ದರೂ ದೈಹಿಕವಾಗಿ ಆಟವಾಡಲು ಆಗುತ್ತಿಲ್ಲ ಎಂದು ಬಿಗ್‌ಬಾಸ್‌ನಿಂದ ಹೊರ ಬಂದಾಗಲೇ ಶೋಭಾ ಶೆಟ್ಟಿ ಅವರು ಹೇಳಿದ್ದರು. ಗೇಮ್‌ನಲ್ಲಿ ಗಮನಕೊಟ್ಟು ಆಟವಾಡಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಈ ಹಿಂದೆಯೇ ಅವರು ಭಾವನಾತ್ಮಕವಾಗಿ ಪೋಸ್ಟ್‌ವೊಂದನ್ನು ಕನ್ನಡಿಗರೊಂದಿಗೆ ಹಂಚಿಕೊಂಡಿದ್ದರು.

ದಿಢೀರ್ ಆಸ್ಪತ್ರೆಗೆ ದಾಖಲು
ಶೋಭಾ ಶೆಟ್ಟಿ ಅವರು ದಿಢೀರ್ ಅಂತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಷಯವನ್ನು ಅವರೇ ಹೇಳಿದ್ದು ಸೋಷಿಯಲ್ ಮೀಡಿಯಾ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಪೋಟೋದಲ್ಲಿ ಅವರು ಆಸ್ಪತ್ರೆಯ ಬೆಡ್ ಮೇಲೆ ಇರುವಂತಹ ಚಿತ್ರ ಇದೆ. ಅಲ್ಲದೇ ಕೈಗೆ ಗ್ಲುಕೋಸ್ ಹಾಕಿರುವುದು ಕಾಣಿಸುತ್ತಿದೆ. ಅವರ ಅಭಿಮಾನಿಗಳು ಈ ಪೋಟೋ ನೋಡಿ ಬೇಗ ಚಿಕಿತ್ಸೆ ಪಡೆದು ಆರಾಮಾಗಿ ಮೇಡಂ ಅಂತಿದ್ದಾರೆ.
ಇನ್ನು ನಾನು ಶೀಘ್ರದಲ್ಲೇ ಹಿಂದಿರುಗುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ತುಂಬಾ ಧನ್ಯವಾದಗಳು ಎಂದಿದ್ದಾರೆ. ಮುಂದುವರಿದು ಮತ್ತೊಂದು ಪೋಸ್ಟ್‌ನಲ್ಲಿ ರಾಘವೇಂದ್ರ ಸ್ವಾಮಿಯ ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ರಾಯರಿಗೆ ಪೂಜೆ ಮಾಡುತ್ತಿರುವುದು ಇದೆ. ಅದರಲ್ಲಿ ಒನ್ಲಿ ಪಾಸಿಟಿವ್ ವೈಬ್ಸ್ (Positive vibes) ಒಳ್ಳೆಯ ಆಲೋಚನೆ ಮಾತ್ರ ಎಂದು ಅದರಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications