ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ & ಶಿವರಾಜ್‌ಕುಮಾರ್ ಸಿನಿಮಾ ಕುರಿತು ಭರ್ಜರಿ ಸುದ್ದಿ!
ನಟ ಶಿವರಾಜ್‌ಕುಮಾರ್ ವಯಸ್ಸು ಹೆಚ್ಚಾದಂತೆ ಹೆಚ್ಚು, ಹೆಚ್ಚು ಸಿನಿಮಾ ಮಾಡ್ತಿದ್ದಾರೆ. ಈ ಮೂಲಕ ನಟ ಶಿವಣ್ಣ ಸಿನಿಮಾ ರಂಗಕ್ಕೆ ಮಾದರಿ ಆಗುತ್ತಿದ್ದಾರೆ. ಹಾಗೇ ಕನ್ನಡದ ಅತ್ಯಂತ ಬ್ಯುಸಿ ಆಗಿರುವ ನಟ ಎಂಬ ಕೀರ್ತಿ ಕೂಡ, ನಟ ಶಿವರಾಜ್‌ಕುಮಾರ್ ಅವರಿಗೆ ಸಲ್ಲುತ್ತದೆ. ಹೀಗಿದ್ದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ್ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಹೀಗಿದ್ದಾಗ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಕ್ಕಿದೆ.
ಅಪ್ಪು ಅವರು ನಿಲ್ಲಿಸಿದ್ದ ಸಿನಿಮಾ ಪೈಕಿ ಒಂದು ಸಿನಿಮಾ ನಟ ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ್ ಅವ್ರು ನಿರ್ದೇಶನ ಮಾಡಬೇಕಿತ್ತು. ಆದ್ರೆ ನಿಂತ ಪ್ರಾಜೆಕ್ಟ್ ಈಗ ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆ ಶುರುವಾಯ್ತಾ? ಅನ್ನೋ ಕುತೂಹಲ ಕಾಡುತ್ತಿದೆ. ಇದರ ಜೊತೆಗೆ ನಟ ಶಿವಣ್ಣ ಅವರ ಮುಂದಿನ ಚಿತ್ರ, ಅಂದ್ರೆ 131ನೇ ಸಿನಿಮಾಗೆ ದಿನಕರ್ ತೂಗುದೀಪ್ ನಿರ್ದೇಶನ ಮಾಡ್ತಾ ಇದ್ದಾರೆ. ಹೀಗಿದ್ದಾಗ ಅಭಿಮಾನಿಗಳಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕಿದೆ.

ಶಿವರಾತ್ರಿಗೆ ಗುಡ್ ನ್ಯೂಸ್ ಪಕ್ಕಾ?
ಯೆಸ್, ದಿನಕರ್ ತೂಗುದೀಪ್ ಅವರ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ ಹೊಸ ಸಿನಿಮಾ ಹೊಸ ವರ್ಷಕ್ಕೆ ಘೋಷಣೆಯಾಗಿತ್ತು. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸ ವೇಗವಾಗಿ ಸಾಗಿದೆ. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ಈ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾ ತಂಡ ರಾಜ್ಯದ ಜನತೆಗೆ ಸಂಕ್ರಾಂತಿ ಶುಭಾಶಯ ತಿಳಿಸಿದೆ. ಇದರ ಜೊತೆಗೆ ಇನ್ನೇನು ಕೆಲವೇ ದಿನದಲ್ಲಿ, ಅಂದ್ರೆ ಶಿವರಾತ್ರಿಗೆ ಮತ್ತೊಂದು ಗುಡ್ ನ್ಯೂಸ್ ಸಿಗಲಿದೆ ಎನ್ನಲಾಗಿದೆ.
ಸ್ಪೆಷಲ್ ಟೈಟಲ್ ಗ್ಯಾರಂಟಿ!
ಅಷ್ಟಕ್ಕೂ ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್. ಕೇಶವ್ ಮತ್ತೆ ಬಿ.ಎಸ್. ಸುಧೀಂದ್ರ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಪ್ರಿಯದರ್ಶಿನಿ ರಾಮರೆಡ್ಡಿ ಕಥೆಯನ್ನ ಬರೆದಿದ್ದಾರೆ ಮಹಾ ಶಿವರಾತ್ರಿ ವೇಳೆಗೆ ಈ ಸಿನಿಮಾ ಟೈಟಲ್ ಅನೌನ್ಸ್ ಆಗುವ ನಿರೀಕ್ಷೆ ಮೂಡಿದೆ. ಹಾಗೇ ನಟ ಸೆಂಚುರಿ ಸ್ಟಾರ್ ಶಿವಣ್ಣ ಅವರ ಸಿನಿಮಾಗೆ ಭರ್ಜರಿ ಟೈಟಲ್ ಆಯ್ಕೆ ಮಾಡಲಾಗಿದೆ ಎಂಬ ಮಾತು ಓಡಾಡುತ್ತಿದೆ. ಹೀಗಾಗಿ ಎಲ್ಲಾ ಕುತೂಹಲಕ್ಕೆ ಇನ್ನೇನು ಕೆಲವೇ ದಿನದಲ್ಲಿ ಅಂದರೆ, ಶಿವರಾತ್ರಿ ಹಬ್ಬಕ್ಕೆ ಸಿಹಿ ಸುದ್ದಿ ಸಿಗಬಹುದು ಅಂತಾ ಹೇಳಲಾಗ್ತಿದೆ.

ಸಂಚಲನ ಸೃಷ್ಟಿಸಿರುವ ಹೊಸ ಸಿನಿಮಾ
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತ್ತು ದಿನಕರ್ ಅವರ ಕಾಂಬಿನೇಶನ್ ಸಿನಿಮಾ ಇದೀಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಹಲ್‌ಚಲ್ ಎಬ್ಬಿಸಿದೆ. ಈ ಚಿತ್ರದ ಕುರಿತು ಕನ್ನಡ ಅಭಿಮಾನಿ ವಲಯದಲ್ಲಿ & ಚಿತ್ರೋದ್ಯಮದಲ್ಲಿ ಸಾಕಷ್ಟು ನಿರೀಕ್ಷೆಯಿದೆ. ಯಾವ ರೀತಿ ಕಥೆ ಇದಾಗಿರುತ್ತೆ? ನಟ ಶಿವರಾಜ್‌ಕುಮಾರ್ ಅವರು ಯಾವ ಅವತಾರದಲ್ಲಿ ಎಂಟ್ರಿ ಕೊಡ್ತಾರೆ? ಅಂತ ಫ್ಯಾನ್ಸ್ ಕಾಯುತ್ತಿದ್ದಾರೆ.
ಒಟ್ನಲ್ಲಿ ಕನ್ನಡ ಸಿನಿಮಾ ರಂಗದ 2024ರ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ. ಅದ್ರಲ್ಲೂ ನಟ ಶಿವಣ್ಣ ಅವರ 131ನೇ ಸಿನಿಮಾ ಇದಾಗಿರುವುದು ಮತ್ತೊಂದು ವಿಶೇಷ. ಕನ್ನಡಿಗರಿಗೆ ಸದಾ ಮನರಂಜನೆ ನೀಡುತ್ತಾ, ಸಾಲು ಸಾಲು ಸಿನಿಮಾ ರಿಲೀಸ್ ಮಾಡುತ್ತಿರುವ ಶಿವಣ್ಣಗೆ ಈ ಸಿನಿಮಾ ಕೂಡ ಸ್ಪೆಷಲ್ ಹಾಗೇ ಅವರ ಅಭಿಮಾನಿಗಳಿಗೆ ಕೂಡ ಈ ಸಿನಿಮಾ ಸ್ಪೆಷಲ್ ಅಂತಾ ಹೇಳಲಾಗುತ್ತಿದೆ.












Click it and Unblock the Notifications