ಶಿವರಾಜ್‌ಕುಮಾರ್ ತಮಿಳು ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ ಸೌಂಡ್ ಜೋರು!
ಕನ್ನಡಿಗರ ಹ್ಯಾಟ್ರಿಕ್ ಹೀರೋ, ಸೆಂಚ್ಯುರಿ ಸ್ಟಾರ್ ಶಿವರಾಜ್‌ಕುಮಾರ್ ಅವರು ಈಗ ಇಡೀ ಭಾರತದಲ್ಲಿ ತಮ್ಮ ಅಬ್ಬರ ತೋರಿಸುತ್ತಿದ್ದಾರೆ. ಶಿವಣ್ಣ ಅವರ ಸಿನಿಮಾ ಕ್ರೇಜ್ ನೋಡಿದ ಭಾರತೀಯರು ಫಿದಾ ಆಗಿದ್ದಾರೆ. ಅದರಲ್ಲೂ ಕೆಲವೇ ತಿಂಗಳ ಹಿಂದೆ ರಿಲೀಸ್ ಆಗಿದ್ದ ನಟ ರಜನಿಕಾಂತ್ ಅವರ ತಮಿಳು ಸಿನಿಮಾ 'ಜೈಲರ್' ಅಂಗಳದಲ್ಲೂ ಶಿವಣ್ಣ ಅಬ್ಬರಿಸಿದ್ದರು, ಇದೀಗ ರಜನಿಕಾಂತ್ ಅವರ ಅಳಿಯ ಧನುಷ್ ಸಿನಿಮಾದಲ್ಲಿ ಭರ್ಜರಿ ಸದ್ದು ಮಾಡ್ತಿದ್ದಾರೆ.
ಅಂದಹಾಗೆ ಸಂಕ್ರಾಂತಿ ಸಂಭ್ರಮ ಡಬಲ್ ಮಾಡಲು ಬರುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಒಂದಾದ ಕ್ಯಾಪ್ಟನ್ ಮಿಲ್ಲರ್, ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿಯೇ ಕನ್ನಡಿಗರು ಕುತೂಹಲದಿಂದ ಈ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಧನುಷ್ ನಾಯಕನಾಗಿ ನಟಿಸಿದ ತಮಿಳು ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ಅಂಗಳದಲ್ಲಿ ನಟ ಶಿವಣ್ಣ ಮುಖ್ಯ ಭೂಮಿಕೆಯಲ್ಲಿ ಅಬ್ಬರಿಸಿದ್ದಾರೆ. ಈಗಾಗಲೇ ಟೀಸರ್ ಹಾಗೂ ಎರಡು ಹಾಡುಗಳ ಮೂಲಕ ಗಮನ ಸೆಳೆದಿರುವ, ಈ ಸಿನಿಮಾದ ಮೂರನೇ ಸಾಂಗ್ ಇತ್ತೀಚೆಗೆ ರಿಲೀಸ್ ಆಗಿತ್ತು.

ಹ್ಯಾಟ್ರಿಕ್ ಹೀರೋ ಸಿನಿಮಾ ಸಂಭ್ರಮ
ಕ್ಯಾಪ್ಟನ್ ಮಿಲ್ಲರ್ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ, ತಮಿಳು, ತೆಲುಗು & ಹಿಂದಿ ಹೀಗೆ ಎಲ್ಲ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕೂಡ ಹುಟ್ಟಿಕೊಂಡಿದೆ. ಅರುಣ್ ಮಾಥೇಶ್ವರನ್ ಸಿನಿಮಾ ನಿರ್ದೇಶಿಸಿದ್ದರೆ, ನಟ ಧನುಷ್ ಅವರಿಗೆ ಜೋಡಿ ಆಗಿದ್ದಾರೆ ಪ್ರಿಯಾಂಕಾ ಮೋಹನನ್. ಇದು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ತೆರೆದುಕೊಳ್ಳುವ ಕಥೆ ಆಗಿರುವ ಕಾರಣ. ಸಂಕ್ರಾಂತಿಗೆ 'ಕ್ಯಾಪ್ಟನ್ ಮಿಲ್ಲರ್' ರಿಲೀಸ್ ಆದ್ರೂ ಅದರ ಅಬ್ಬರ ಜನವರಿ 26ರ, ಗಣರಾಜ್ಯೋತ್ಸವ ಸಂಭ್ರಮದ ತನಕ ಇರುವು ಪಕ್ಕಾ ಅಂತ ಅಭಿಮಾನಿಗಳು ಹೇಳ್ತಿದ್ದಾರೆ.
ಪ್ರೀ ರಿಲೀಸ್ ಇವೆಂಟ್‌ನಲ್ಲಿ ಮಿಂಚಿಂಗ್!
ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದ್ದು ಸಂಕ್ರಾಂತಿ ಹಬ್ಬದ ಸ್ಪೆಷಲ್ ಆಗಿ ಧನುಷ್ & ಶಿವಣ್ಣ ಸಿನಿಮಾ ರಿಲೀಸ್ ಬರಲಿದೆ. 2024 ಜನವರಿ 12 ಕ್ಕೆ 'ಕ್ಯಾಪ್ಟನ್ ಮಿಲ್ಲರ್' ಜಗತ್ತಿನ ವಿವಿಧೆಡೆ ತೆರೆ ಕಾಣಲಿದ್ದು, ಇದೇ ಕಾರಣಕ್ಕೆ ಭರ್ಜರಿಯಾಗಿ ಪ್ರೀ ರಿಲೀಸ್ ಇವೆಂಟ್ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಶಿವಣ್ಣ ಅವರು ಮಿಂಚಿದ್ದಾರೆ. ಹಾಗೇ ಧನುಷ್ ಅವರ ಜೊತೆ ಭರ್ಜರಿ ಡಾನ್ಸ್ ಮಾಡಿದ್ದಾರೆ.












Click it and Unblock the Notifications