Geetha Shivarajkumar: ಗೀತಕ್ಕನ ಹುಟ್ಟುಹಬ್ಬಕ್ಕೆ ಶಿವಣ್ಣನಿಂದ ಸ್ಪೆಷಲ್ ಸರ್‌ಪ್ರೈಸ್, ಏನದು?
ಸ್ಯಾಂಡಲ್‌ವುಡ್ ದೊಡ್ಮನೆಯ ದೊಡ್ಡ ಸೊಸೆ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಜ್ಯದೆಲ್ಲೆಡೆ ಈ ಜೋಡಿ ಗೀತಕ್ಕ-ಶಿವಣ್ಣ ಎಂದೇ ಮನೆಮಾತಾಗಿದೆ. ಇನ್ನು ಗೀತಕ್ಕನ ಹುಟ್ಟುಹಬ್ಬಕ್ಕೆ ಶಿವಣ್ಣನ ಅಭಿಮಾನಿಗಳು ವಿಶ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಜೋಡಿಯ ಫೋಟೋ ಹಂಚಿಕೊಂಡಿದ್ದಾರೆ. ಶಿವಣ್ಣ ಕೂಡ ತಮ್ಮ ಪ್ರೀತಿಯ ಪತ್ನಿಗೆ ವಿಶೇಷವಾಗಿ ಸರ್‌ಪ್ರೈಸ್‌ವೊಂದನ್ನು ನೀಡಿದ್ದಾರೆ.
ಗೀತಾ ಪಿಕ್ಚರ್ಸ್ ಕೂಡ ವಿಶೇಷವಾಗಿ ಗೀತಕ್ಕನ ಹುಟ್ಟುಹಬ್ಬಕ್ಕೆ ಶುಭ ಕೋರಿದೆ. ಪ್ರೀತಿ, ಗೌರವ ಮತ್ತು ಪ್ರಾಮಾಣಿಕತೆಯ ಪ್ರತಿರೂಪ ನೀವು, ನಿಮ್ಮ ಕಾರ್ಯನಿಷ್ಠೆ ನಮಗೆಲ್ಲ ಮಾದರಿ. ನೀವಿರೋ ಜಾಗವೆಲ್ಲ ಪ್ರೀತಿಯಿಂದ ತುಂಬಿರಲಿ. ಪಬ್ಬಾರ್ ತಂಡದಿಂದ ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಎಂದು ಪೋಸ್ಟ್ ಹಂಚಿಕೊಂಡಿದೆ. ಶಿಸ್ತಿಗೆ ಮಾರ್ಗದರ್ಶಿ, ಪ್ರೀತಿಗೆ ಮೂಲಸೂತ್ರ, ನಮ್ಮೆಲ್ಲರ ಪ್ರೀತಿಯ ಪ್ರಿನಿಪಾಲ್ ಮೇಡಂ ಗೀತಕ್ಕ ಅವರಿಗೆ A for ಆನಂದ್ ತಂಡದಿಂದ H ಫಾರ್ ಹ್ಯಾಪಿ ಬರ್ತ್‌ಡೇ ಎಂದು ನಿರ್ದೇಶಕ ಶ್ರೀನಿ ಕೂಡ ವಿಶ್ ಮಾಡಿದ್ದಾರೆ.

ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಗೀತಕ್ಕನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ ಹರಿದಿದೆ. ನಮ್ಮೆಲ್ಲರ ನೆಚ್ಚಿನ ಕರುನಾಡ ಚಕ್ರವರ್ತಿಯ ಶಕ್ತಿಯಾಗಿ ಜೊತೆನಿಂತ ಶಕ್ತಿ, ಅತ್ಯದ್ಭುತ ಸಿನಿಮಾಗಳನ್ನ ನೀಡುತ್ತಲೇ ಬಂದಿರುವ ಪ್ರಭುದ್ಧ ನಿರ್ಮಾಪಕಿ, ಗೀತಾ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹಲವರು ಶುಭಕೋರಿದ್ದಾರೆ.
ನೀನಿದ್ದರೇ ಈ ಆನಂದ!
ನಟ ಶಿವರಾಜ್‌ಕುಮಾರ್ ಅವರು ವಿಶೇಷವಾದ ಫೋಟೋ ಹಂಚಿಕೊಂಡು ಪತ್ನಿ ಗೀತಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಗೀತಾ, ನೀನಿದ್ದರೆ ಆನಂದ, ನೀನಿದ್ದರೇ ಈ ಆನಂದ ಎಂದು ಶಿವಣ್ಣ ಸಾಲುಗಳನ್ನು ಬರೆದುಕೊಂಡಿದ್ದಾರೆ. ಬಳಿಕ ಮಕ್ಕಳೊಂದಿಗೆ ಗೀತಕ್ಕ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಈ ಹಿಂದೆಯೂ ಹಲವು ವೇದಿಕೆಗಳಲ್ಲಿ ಶಿವರಾಜ್‌ಕುಮಾರ್ ಅವರು ನೀನೇ ನನ್ನ ಶಕ್ತಿ, ನನ್ನ ಶಾಂತಿ, ನನ್ನ ಕುಟುಂಬದ ಆಧಾರ ಎಂದು ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದರು.
ನಟ ಶಿವರಾಜ್‌ಕುಮಾರ್ ಅವರ ಧರ್ಮಪತ್ನಿ, ನಟ ರಾಜ್‌ಕುಮಾರ್ ಕುಟುಂಬದ ಸೊಸೆಗೆ ಗೀತಾ ಅವರ ಹುಟ್ಟುಹಬ್ಬದ ವಿಶೇಷ ದಿನದಂದು ಸಂಭ್ರಮ ಮನೆಮಾಡಿದೆ. ಗೀತಾ ಶಿವರಾಜ್‌ಕುಮಾರ್ ಅವರು ಶಿವಣ್ಣನಿಗೆ ನಂಬಿಕೆ, ನೆರವು ಮತ್ತು ಪ್ರೇರಣೆಯ ಮೂಲ ಎಂದು ಹಲವರು ಕರೆದಿದ್ದಾರೆ. ಅವರು ಬಹುತೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಚಾರಿಟಿ ಕೆಲಸಗಳಲ್ಲಿ, ಚಿತ್ರರಂಗದಲ್ಲಿಯೂ ನಿಜವಾದ ಶಕ್ತಿ ಎಂದು ಹೊಗಳಿದ್ದಾರೆ. ಗೀತಕ್ಕನ ಹುಟ್ಟುಹಬ್ಬದ ಈ ದಿನದಂದು ಅಭಿಮಾನಿಗಳು ಗೀತಾ ಮತ್ತು ಶಿವರಾಜ್‌ಕುಮಾರ್ ಜೋಡಿಯ ಫೋಟೋಗಳು ಹಾಗೂ ಹಳೆಯ ನೆನಪುಗಳ ಫೋಟೋಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಾಮನಿಗಾಗಿ ಸೀತಾ, ಶಿವುಗಾಗಿ ಗೀತಾ ಎಂದಿದ್ದಾರೆ.












Click it and Unblock the Notifications