Shiva Rajkumar: ಮತ್ತೊಮ್ಮೆ ಭಾಷಾ ವಿವಾದದ ಸುಳಿಯಲ್ಲಿ ನಟ ಶಿವರಾಜ್ ಕುಮಾರ್: ಹಿಂದಿ ಚಂದ... ಎಂದಿದ್ದಕ್ಕೆ ಕನ್ನಡಿಗರು ಗರಂ!

Shiva Rajkumar: ನಟ ಶಿವರಾಜ್ ಕುಮಾರ್ ಅವರು ಮತ್ತೊಮ್ಮೆ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಕನ್ನಡದ ತಾಯಿ ತಮಿಳು ಎಂದು ನಟ ಕಮಲ್ ಹಾಸನ್ ಅವರು ಹೇಳಿದ ವೇದಿಕೆಯಲ್ಲೇ ನಟ ಶಿವರಾಜ್ ಕುಮಾರ್ ಅವರು ಸಹ ಇದ್ದರು. ಆದರೆ, ನಟ ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್ ಅವರು ಹೇಳಿದ್ದಕ್ಕೆ ಏನು ತಿರುಗೇಟು ಕೊಡಲಿಲ್ಲ ಎನ್ನುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಇದೀಗ ನಟ ಶಿವಣ್ಣ ಅವರು ಹಿಂದಿ ಭಾಷೆಗೆ ಸಂಬಂಧಿಸಿದಂತೆ ಕೊಟ್ಟಿರುವ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿದೆ. ಇನ್ನೂ ಹಲವರು ಇದು ಶಿವರಾಜ್ ಕುಮಾರ್ ಅವರ ತಪ್ಪಲ್ಲ. ಈ ಹಿಂದಿನ ತಲೆಮಾರಿಗೆ ಹಿಂದಿ ಭಾಷೆಗೆ ಸಂಬಂಧಿಸಿದಂತೆ ಇರುವ ತಪ್ಪು ತಿಳುವಳಿಕೆ ಎಂದೂ ಕೆಲವರು ಹೇಳಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಹಿಂದಿ ಭಾಷೆಗೆ ಸಂಬಂಧಿಸಿದಂತೆ ಹೇಳಿದ್ದೇನು, ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.

Shiva Rajkumar Hindi Remark Sparks Outrage Among Kannadigas Here s What He Said Viral Video

Shiva Rajkumar: ಹಿಂದಿ ಡೈಲಾಗ್ ವಿಚಾರದ ವಿಡಿಯೋ ವೈರಲ್

ನಟ ಶಿವರಾಜ್ ಕುಮಾರ್ ಅವರು ಹಿಂದಿ ಭಾಷೆಗೆ ಸಂಬಂಧಿಸಿದಂತೆ ಕೊಟ್ಟಿರುವ ಹೇಳಿಕೆಯು ಇದೀಗ ಚರ್ಚೆಗೆ ಕಾರಣವಾಗಿದೆ. ನಟ ಶಿವರಾಜ್ ಕುಮಾರ್ ಅವರಿಗೆ ಪತ್ರಕರ್ತರು ಹಿಂದಿ ಡೈಲಾಗ್ ಹೇಳುವುದಕ್ಕೆ ನಟ ಶಿವರಾಜ್ ಕುಮಾರ್ ಅವರು ಹೇಗೆ ಸಿದ್ಧರಾಗಿದ್ದಾರೆ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಶಿವರಾಜ್ ಕುಮಾರ್ ಅವರು, ಯಾಕೆ ನನ್ನ ಸೆಕೆಂಡ್ ಲಾಂಗ್ವೆಜ್ ಹಿಂದಿ... "ಮೇ ಹಿಂದಿ ಬಾತ್ ಕರ್ಸಕ್ತಾಹು / ನಾನು ಹಿಂದಿ ಮಾತನಾಡ್ತೀನಿ ಅಂತ ಹಿಂದಿಯಲ್ಲೇ ಹೇಳಿದ್ದಾರೆ. ಮುಂದುವರಿದು ಹಿಂದಿ ಅತ್ಯಂತ ಸುಲಭದ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ ಬರ್ದೆ ಹೆಂಗೆ ಅಂತಲೂ ಇದೇ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Shiva Rajkumar: ಶಿವಣ್ಣ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರ ಆಕ್ಷೇಪ

ಇನ್ನು ನಟ ಶಿವರಾಜ್ ಕುಮಾರ್ ಅವರು ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಎಂದು ಹೇಳಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿವರಾಜ ಕುಮಾರ್ ಅವರೇ ನೀವು ರಾಜ್ ಕುಮಾರ್ ಮಗನಾಗಿ ಯೋಚನೆ ಮಾಡೋದು ಬೇಡ. ಒಬ್ಬ ಕನ್ನಡದ ನಟನಾಗಿ ಕೂಡ ಯೋಚನೆ ಮಾಡೋದು ಬೇಡ. ಹೋಗ್ಲಿ, ಒಬ್ಬ ಸಾಮಾನ್ಯ ಕನ್ನಡಿಗನಾಗಿಯೂ ಕೂಡ ಯೋಚನೆ ಮಾಡೋದು ಬೇಡ್ವಾ? ಇದನ್ನೇ ನಾವು ಇಶ್ಟು ದಿವಸ ಎಲ್ಲರಿಗೂ ತಿಳಿಸಿ ಹೇಳ್ತಾ ಇದ್ದಿದ್ದು ಎಂದು ರವಿ ಆಲದ ಮರ ಎನ್ನುವವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಹಲವು ಕನ್ನಡಿಗರು ನಟ ಶಿವರಾಜ್ ಕುಮಾರ್ ಅವರು ಹಿಂದಿ ಭಾಷೆಗೆ ಸಂಬಂಧಿಸಿದಂತೆ ಹೇಳಿರುವ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಿವರಾಜ್ ಕುಮಾರ್ ಸ್ಪಷ್ಟನೆ

ಶಿವರಾಜ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಎಂದು ಹೇಳಿದ್ದಾರಾದರೂ ಇದಾದ ನಂತರ ಹಿಂದಿ ರಾಷ್ಟ್ರೀಯ ಭಾಷೆ ಅಂತ ಹೇಳ್ಬಿಟ್ಟೆ. ಅದು ಸಹ ದೇಶದ ಒಂದು ಭಾಷೆ ಅಂತ ಶಿವರಾಜ್‌ಕುಮಾರ್ ಅವರು ಹೇಳಿದ್ದಾರೆ. ನಮ್ಮ ಭಾಷೆ ನಮಗೆ ಯಾವಾಗಲೂ ದೊಡ್ಡದು. ನನಗೆ ಗೊತ್ತಿಲ್ಲ, ನ್ಯಾಶನಲ್ ಲಾಂಗ್ವೆಜ್ ಎಂದರೆ ಇಂಡಿಯಾ ಲಾಂಗ್ವೆಜ್ ಅಂತಾರಲ್ಲ ಹಂಗೆ ಎಂದುಕೊಡ್ಡಿದ್ದೆ ಅಂತಲೂ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ. ಕ್ಷಮಿಸಿ.. ಅವರವರ ಭಾಷೆ ಅವರಿಗೆ ದೊಡ್ಡದು ನಮ್ಮ ಭಾಷೆ ನಮಗೆ ಮುಖ್ಯ ಅಂತಲೂ ಶಿವರಾಜ್ ಕುಮಾರ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+