ನಟ ದರ್ಶನ್‌ ಜೊತೆ ಶರ್ಮಿಳಾ ಮಾಂಡ್ರೆ..

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಹಿನ್ನೆಲೆ ಡೆವಿಲ್‌ ಸಿನಿಮಾದ ಚಿತ್ರೀಕರಣ ನಿಂತುಹೋಗಿಬಿಟ್ಟಿತ್ತು. ಆದ್ರೆ ಇದೀಗ ದರ್ಶನ್‌ ಜಾಮೀನಿನ ಮೇಲೆ ಹೊರಗಡೆ ಬಂದಿದ್ದು, ಸಿನಿಮಾನ ಚಿತ್ರೀಕರಣವೂ ಆರಂಭವಾಗಿದೆ. ಈ ನಡುವೆಯೇ ಸಿನಿಮಾದಲ್ಲಿ ನಟನೆ ಮಾಡುತ್ತಿರುವ ಬಗ್ಗೆ ನಟ ಶರ್ಮಿಳಾ ಅವರು ಹೇಳಿದ್ದೇನು ಎಂದು ಇಲ್ಲಿ ತಿಳಿಯಿರಿ.

ಶರ್ಮಿಳಾ ಮಂಡ್ರೆ ಅವರು ನಟ ದರ್ಶನ್‌ ಜೊತೆ ನವಗ್ರಹ ಚಿತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೆ ಅವರ ಜೊತೆ 17 ವರ್ಷಗಳ ನಂತರ ಡೆವಿಲ್ ಸಿನಿಮಾನದಲ್ಲಿ ನಟನೆ ಮಾಡುತ್ತಿದ್ದಾರೆ. ಪ್ರಕಾಶ್ ವೀರ್ ನಿರ್ದೇಶನದ ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಪ್ರಕಾರ, ಸಮಯ ಕಳೆದಿಲ್ಲ ಎಂಬಂತೆ ಭಾಸವಾಗುತ್ತಿದೆ.

Sharmiela Mandre acting in Devil movie with actor Darshan after 17 years

2008ರಲ್ಲಿ ನವಗ್ರಹದಿಂದ ಹಿಡಿದು 2025ರ ಡೆವಿಲ್‌ವರೆಗೆ, ಒಂದೇ ರೀತಿ ಭಾಸವಾಗುತ್ತಿದೆ. 10 ಅಥವಾ 15 ವರ್ಷಗಳು ಕಳೆದಿದ್ದರೂ ಕೂಡ ಜನರು ಮತ್ತೆ ಕೆಲವು ಪಾತ್ರಗಳ ಸಂಯೋಜನೆಯನ್ನು ನೋಡಲು ಇಷ್ಟಪಡುತ್ತಾರೆ. ದರ್ಶನ್ ಜೊತೆ ತೆರೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷ ಆಗಿದೆ. ಇದು ವಿಶೇಷ ಎನಿಸುತ್ತದೆ. ಡೆವಿಲ್ ಚಿತ್ರದ ಪಾತ್ರವರ್ಗ ಮತ್ತು ಕಥೆಯು ವಿಶಿಷ್ಟವಾದದ್ದನ್ನು ಹೊಂದಿದೆ. ಆದ್ದರಿಂದ ಚಿತ್ರದ ಭಾಗವಾಗಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

ಪ್ರಕಾಶ್ ವೀರ್ ಜೊತೆಗೆ ಶರ್ಮಿಳಾ ಮಾಂಡ್ರೆ ಅವರ ಮೊದಲ ಸಹಯೋಗ ಇದಾಗಿದೆ. ನಾವು ಯಾವಾಗಲೂ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಮಾತನಾಡುತ್ತಿದ್ದೆವು. ಆದರೆ, ಕೆಲವು ಕಾರಣಗಳಿಂದ ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕೊನೆಗೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ನಾನೊಬ್ನ ರಾಜಕಾರಣಿಯಾಗಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಈ ಪಾತ್ರವನ್ನು ಮಾಡಬೇಕು ಎಂದು ತುಂಬಾ ದಿನಗಳ ಆಸೆಯಾಗಿತ್ತು. ಇದು ಪ್ರಭಾವ ಬೀರುವ ಪಾತ್ರ ಮತ್ತು ಅದನ್ನು ಪರದೆಯ ಮೇಲೆ ಜೀವಂತಗೊಳಿಸಲು ನಾನು ಉತ್ಸುಕಳಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ನವೆಂಬರ್ 8ರಂದು ನವಗ್ರಹ ಚಿತ್ರವು ಚಿತ್ರಮಂದಿರಗಳಲ್ಲಿ ರೀ ರಿಲೀಸ್ ಮಾಡಲಾಗಿತ್ತು. ಇದೊಂದು ಅವಾಸ್ತವಿಕ ಅನುಭವ ಆಗಿತ್ತು ಮತ್ತು ಚಿತ್ರದ ಸುತ್ತಲಿನ ಕ್ರೇಜ್ ಅದ್ಭುತ ಆಗಿತ್ತು. ನಾನು ಕೂಡ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದೆ. ಇದು ನಿಜವಾಗಿಯೂ ಉತ್ತಮವಾಗಿತ್ತು ಎಂದು ಹೇಳಿದರು.

ಇದೀಗ ಸದ್ಯ ಮೈಸೂರಿನಲ್ಲಿ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿರುವ ಶರ್ಮಿಳಾ ಅವರು ಇದೇ ತಿಂಗಳು ಅಂದ್ರೆ, ಮಾರ್ಚ್ನಲ್ಲಿಯೇ ತಮ್ಮ ಭಾಗಗಳ ಚಿತ್ರೀಕರಣ ಪೂರ್ಣಗೊಳಿಸಲಿದ್ದು, ಏಪ್ರಿಲ್‌ನಲ್ಲಿ ಉಳಿದ ದೃಶ್ಯಗಳನ್ನು ಮುಗಿಸಲಿದ್ದಾರೆ. ಜೈ ಮಾತಾ ಕಂಬೈನ್ಸ್ ಪ್ರಸ್ತುತಪಡಿಸುವ ಮತ್ತು ವೈಷ್ಣೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ನಿರ್ಮಿಸಿರುವ ಈ ಚಿತ್ರದಲ್ಲಿ ರಚನಾ ರೈ ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್ ಖಳನಾಯಕನಾಗಿ ನಟಿಸಿದ್ದು, ನಟರಾದ ತುಳಸಿ, ಅಚ್ಯುತ್ ಕುಮಾರ್ ಇದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಸುಧಾಕರ್ ಎಸ್ ರಾಜ್ ಅವರದ್ದು ಛಾಯಾಗ್ರಹಣ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+