ನಾದಬ್ರಹ್ಮ ಹಂಸಲೇಖ ಬಗ್ಗೆ ವ್ಯಂಗ್ಯದ ವಿಡಿಯೋ ವೈರಲ್!
ಡಾ.ರಾಜ್‌ಕುಮಾರ್ ಅವರ ಗಾಯನದ ಬಗ್ಗೆ ವ್ಯಂಗ್ಯವಾಡಿದ ಗಾಯಕನ ವಿಷಯ ವೈರಲ್ ಆಗಿತ್ತು. ಇದರ ನಡುವೆ ಇದೀಗ ನಾದಬ್ರಹ್ಮ ಹಂಸಲೇಖ ಅವರ ಬಗ್ಗೆ ವ್ಯಂಗ್ಯವಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು ಕರ್ನಾಟಕದಲ್ಲಿ ಕನ್ನಡ ಕಂಟೆಂಟ್ ಕ್ರಿಯೇಟರ್ಸ್‌ಗಳ ನಡುವೆ ವಾಗ್ವಾದ ನಡೆಯುತ್ತಿದೆ. ಬೆಳಗಾವಿ ವಿಚಾರವಾಗಿ ಕನ್ನಡ ಕಂಟೆಂಟ್ ಕ್ರಿಯೇಟರ್ಸ್‌ಗಳ ಆಗಿರುವ ವಿವಾದ ತಣ್ಣಗಾಗುತ್ತಿಲ್ಲ. ಈ ರೀತಿ ಇರುವಾಗಲೇ ನಾದಬ್ರಹ್ಮ ಹಂಸಲೇಖ ಅವರ ಬಗ್ಗೆ ವ್ಯಂಗ್ಯವಾಡಿರುವ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾ ಬಂದ ಮೇಲೆ ಹಿರಿಯ ಕಲಾವಿದರ ಬಗ್ಗೆ ಹಾಗೂ ಸಿನಿಮಾ, ಭಾಷೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಕೆಲವರು ಕೊಂಕು ನುಡಿಯುವುದು ಮುಂದುವರಿದಿದೆ. ಈ ರೀತಿ ಇರುವಾಗಲೇ ಹಂಸಲೇಖ ಅವರಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.

ಕನ್ನಡ ಕಂಟೆಂಟ್ ಕ್ರಿಯೇಟರ್ ಉಡಾಳ್ ಪವ್ಯಾ ವಿವಾದಗಳು ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ Pavan Krishna Kulkarni ಅವರು ಹಂಸಲೇಖ ಅವರ ಬಗ್ಗೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದ್ದು. ಇದೀಗ ಮತ್ತೆ ಪವ್ಯಾ ಚರ್ಚೆಗೆ ಗ್ರಾಸರಾಗಿದ್ದಾರೆ.
ನನ್ ಮಿನಿ ರೇಡಿಯೋ ಖ್ಯಾತಿಯ ಕನ್ನಡ ಕಂಟೆಂಟ್ ಕ್ರಿಯೇಟರ್ಸ್ ಅವರ ಬಣ್ಣದ ಬಗ್ಗೆ ಮಾತನಾಡಿದ್ದ ಉಡಾಳ್ ಪವ್ಯಾ ವಿಡಿಯೋ ಮಾಡಿದ್ದ. ಇದರ ನಡುವೆಯೇ ಹಲವರು ಆತ ನಾದಬ್ರಹ್ಮ ಹಂಸಲೇಖ ಅವರ ಬಗ್ಗೆಯೂ ಕೆಟ್ಟದಾಗಿ ವಿಡಿಯೋ ಮಾಡಿದ್ದಾನೆ ನೋಡಿ ಎಂದು ಆತ ಮಾಡಿರುವ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಅಲ್ಲದೆ ಹಂಸಲೇಖ ಅವರ ಬಗ್ಗೆ ವಿಡಿಯೋ ಮಾಡಿದ ಮೇಲೆ ನಾವು ಪವನ್ ಅವರ ಚಾನೆಲ್ ಅನ್ನು ಅನ್‌ಸಬ್‌ಸ್ಕ್ರೈಬ್ ಮಾಡಿದ್ದೇವೆ. ಈ ವಿಡಿಯೋ ಬಂದ ಮೇಲೆ ನಾವು ಆತನ ವಿಡಿಯೋಗಳನ್ನು ನೋಡುತ್ತಿಲ್ಲ. ಕೆಟ್ಟ ಅಭಿರುಚಿ ಇರುವ ವಿಡಿಯೋಗಳು ಎಂದು ಹೇಳಿದ್ದಾರೆ. ಹಂಸಲೇಖ ಅವರು ಜೀ ಕನ್ನಡದಲ್ಲಿ ಸರಿಗಮಪ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಈ ಶೋ ಹಾಗೂ ಹಂಸಲೇಖ ಅವರ ಮಾತು ಮತ್ತು ಸಲಹೆಗಳಿಗೆ ಬೇರೆಯದೇ ತೂಕವಿದೆ. ಸಾವಿರಾರು ಜನ ಹಳ್ಳಿ ಹಾಗೂ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಮುನ್ನೆಲೆಗೆ ತಂದಿರುವ ಶೋ ಇದಾಗಿದೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಪ್ರತಿಭೆಗಳಾದ ಹನುಮಂತ ಹಾಗೂ ಬಾಳು ಬೆಳಗುಂದಿ ಅವರು ಇದೇ ವೇದಿಕೆಯಿಂದ ಬಂದವರು. ಆದರೆ ಈ ಶೋ ಬಗ್ಗೆ ಪವನ್ ಪರೋಕ್ಷವಾಗಿ ಮಾಡಿರುವ ವಿಡಿಯೋ ಕನ್ನಡಿಗರು ಕೆಂಡವಾಗುವಂತೆ ಮಾಡಿದೆ.
ಕ್ಷಮೆ ಒಪ್ಪಿಕೊಳ್ಳದ ಹರೀಶ್: ಇನ್ನು ಪವನ್ ಅವರು ಅವಮಾನ ಮಾಡಿ ಇದಾದ ಮೇಲೆ ಕನ್ನಡಿಗರ ಅಸಮಾಧಾನ ಹಾಗೂ ಆಕ್ರೋಶದಿಂದ ಕ್ಷಮೆ ಕೇಳಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹರೀಶ್ ಅವರು, ನನಗಿರೋ ಕನ್ನಡದ ಬಲ ನೀವೆಲ್ರು..ಈ ಶಕ್ತಿಯನ್ನ ನಾನು ಕನ್ನಡಿಗರ ಮೇಲೆ ಪ್ರತಿ ಬಾರಿ ಹಲ್ಲೆ ಮಾಡೋ ಮರಾಠಿ ಪುಂಡರ ಮೇಲೆ ತೋರಿಸಬೇಕೆ ವಿನಃ ನಮ್ಮ ಸ್ವಂತ ಕನ್ನಡಿಗರ ಮೇಲೆ ಬೇಡ ಅನ್ನೋ ಕಾರಣಕ್ಕೆ ಸುಮ್ನೆ ಇದಿನಿ ಅಷ್ಟೇ ಆದ್ರೆ ಆತ ಕ್ಷಮೆಗೆ ಅರ್ಹನಲ್ಲ ಎಂದಿದ್ದಾರೆ.
ಆಗಲೇ ಅನ್ ಫಾಲೋ ಮಾಡಿದ್ದೇವೆ: ಇನ್ನು ಈ ವಿಚಾರವಾಗಿ ಮಾತನಾಡಿರುವ ಹಲವು ಕನ್ನಡಿಗರು ನಾವು ಉಡಾಳ್ ಪವ್ಯಾನ ಪೇಜ್ ಅನ್ನು ಆಗಲೇ ಅನ್ ಫಾಲೋ ಮಾಡಿದ್ದೇವೆ ಎಂದು ಹೇಳಿದ್ದಾರೆ. ಹಂಸಲೇಖ ಅವರ ಬಗ್ಗೆ ಅಪಹಾಸ್ಯ ಮಾಡಿದಾಗಲೇ ಬಿಟ್ಟಿದ್ದೇವೆ ಎಂದಿದ್ದಾರೆ.












Click it and Unblock the Notifications