ಡಾ. ರಾಜ್‌ಕುಮಾರ್ ಅವರ ಜೇಬಿಗೆ ಕೈಹಾಕಿ ಏನು ಮಾಡುತ್ತಿದ್ದರು ಗೊತ್ತೆ ಶಿವರಾಜ್ ಕುಮಾರ್?

ಹ್ಯಾಟ್ರಿಕ್ ಹೀರೋ & ದೊಡ್ಮನೆ ದೊಡ್ಮಗ ಶಿವರಾಜ್‌ ಕುಮಾರ್ ಸಾಲು ಸಾಲು ಹಿಟ್ ಚಿತ್ರಗಳನ್ನ ಕನ್ನಡಿಗರ ಎದುರು ಇಡುತ್ತಿದ್ದಾರೆ. ಕಳೆದ ವರ್ಷ ಕೂಡ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದರು ಶಿವರಾಜ್‌ ಕುಮಾರ್. ಇದೇ ಸಮಯದಲ್ಲಿ ಶಿವರಾತ್ರಿಗೆ ಶಿವಣ್ಣ ಅವರ ಅಬ್ಬರದ ಎಂಟ್ರಿಗೂ ವೇದಿಕೆ ಸಿದ್ಧವಾಗಿದೆ. ಆದರೆ ಈ ವೇಳೆ ನಟ ಶಿವರಾಜ್‌ಕುಮಾರ್ ಅವರು ತಮ್ಮ ತಂದೆಯ ಜೇಬಿಗೆ ಯಾಕೆ ಕೈಹಾಕ್ತಾ ಇದ್ರು? ಅನ್ನೋ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಹ್ಯಾಟ್ರಿಕ್ ಹೀರೋ ಹಾಗೂ ಸೆಂಚ್ಯುರಿ ಸ್ಟಾರ್ ಅಂತಾ ಕನ್ನಡಿಗರಿಂದ ಬಿರುದು ಪಡೆದಿರುವ ನಟ ಶಿವರಾಜ್‌ಕುಮಾರ್ ಈಗ 60ರ ಗಡಿಯನ್ನ ದಾಟಿದ್ದಾರೆ. ಹೀಗಿದ್ದರೂ ನಟ ಶಿವಣ್ಣ ಅವರಿಗೆ ಸಿನಿಮಾ ರಂಗದಲ್ಲಿ ಯಾವುದೇ ಬೇಸರ ಬಂದಿಲ್ಲ. ಈ ವಯಸ್ಸಿನಲ್ಲೂ ಸಾಲು ಸಾಲು ಚಿತ್ರ ನೀಡಿ, ಅಭಿಮಾನಿಗಳನ್ನು ರಂಜಿಸುತ್ತಾರೆ ಶಿವಣ್ಣ. ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ ಡಾ. ಶಿವರಾಜ್ ಕುಮಾರ್. ಡಾನ್ಸ್‌ಗೂ ಸೈ & ಡೈಲಾಗ್‌ಗೂ ಜೈ ಅಂತಾರೆ.

Sandalwood Star Shivarajkumar Said That He Was Taken Money From Dr Rajkumar Pocket

ಸೂಪರ್ ಸ್ಟಾರ್ ರಜನಿಕಾಂತ್‌ ಜೈಲರ್ ಸಿನಿಮಾದಲ್ಲಿ ಶಿವಣ್ಣನ ನಟನೆ ಕಂಡಿದ್ದ ಸಿನಿಮಾ ರಂಗ ಎದ್ದು ನಿಂತು ಚಪ್ಪಾಳೆ ತಟ್ಟಿತ್ತು. ಈಗ ಮತ್ತೊಬ್ಬ ತಮಿಳು ಸ್ಟಾರ್ ಪ್ರಭುದೇವ ಅವರನ್ನೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕರೆತಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದಾರೆ ಶಿವಣ್ಣ. ಈ ಸಮಯದಲ್ಲೇ ಶಿವಣ್ಣ ತಾವು ತಮ್ಮ ತಂದೆ, ಕನ್ನಡಿಗರ ವರನಟ ಡಾ. ರಾಜ್‌ಕುಮಾರ್ ಅವರ ಜೇಬಿಗೆ ಯಾಕೆ ಕೈಹಾಕ್ತಾ ಇದ್ರು? ಅನ್ನೋದನ್ನ ಹೇಳಿದ್ದಾರೆ. ಹಾಗಾದರೆ ಶಿವಣ್ಣ ಅವರು, ಡಾ. ರಾಜ್‌ಕುಮಾರ್ ಅವರ ಜೇಬಿನ ಮೇಲೆ ಕಣ್ಣಿಟ್ಟಿದ್ದು ಏಕೆ? ಮುಂದೆ ಓದಿ.

ಅಪ್ಪನ ಜೇಬಿನಿಂದ ಶಿವಣ್ಣ ದುಡ್ಡು...

ಚಿಕ್ಕ ವಯಸ್ಸಲ್ಲಿ ಅಪ್ಪನ ಜೇಬಿನಿಂದ ದುಡ್ಡ ತೆಗೆದುಕೊಳ್ಳುವುದು, ಅದನ್ನ ಹೊರಗೆ ಸಣ್ಣ ಪುಟ್ಟ ಖರ್ಚಿಗೆ ಅಂಗಡಿಯಲ್ಲಿ ಬಳಸುವುದು ಮಾಮೂಲಿ. ಬಹುತೇಕರು ಹೀಗೆ ತಮ್ಮ ಚಿಕ್ಕ ವಯಸ್ಸಿನಲ್ಲಿ ಮಾಡೇ ಮಾಡಿರುತ್ತಾರೆ. ಆದ್ರೆ ಇನ್ನೂ ಕೆಲವರು ಈ ಕೆಲಸವನ್ನು ಮಾಡಿ ಸುಳ್ಳು ಹೇಳಿ, ಓಳು ಬಿಡುತ್ತಾ ತಾವು ಒಳ್ಳೆಯವರು ಅಂತಾ ಬಿಲ್ಡಪ್ ಕೊಡ್ತಾರೆ. ಆದರೂ ನಟ ಶಿವಣ್ಣ ಈ ವಿಚಾರದಲ್ಲಿ ಸುಳ್ಳು ಹೇಳಿಲ್ಲ. ತಾವು ಕೂಡ ತಮ್ಮ ತಂದೆಯ ಜೇಬಿನಿಂದ, ಅಂದ್ರೆ ಡಾ. ರಾಜ್‌ಕುಮಾರ್ ಅವರ ಜೇಬಿನಿಂದ ದುಡ್ಡು ತೆಗೆದುಕೊಳ್ಳುತ್ತಿದ್ದೆ ಎಂಬುದುನ್ನ ತಿಳಿಸಿದ್ದಾರೆ.

ಡಾ.ರಾಜ್‌ಕುಮಾರ್ ಏನು ಹೇಳ್ತಿದ್ರು?

ಕನ್ನಡಿಗರ ಮನಸ್ಸಿನಲ್ಲಿ ಅಜಾರಮರ ಡಾ.ರಾಜ್‌ಕುಮಾರ್ ಅವರ ಹೆಸರು. ಯಾಕಂದ್ರೆ ಈ ನಟ ಕನ್ನಡ ನಾಡಿಗೆ ಸಾಕಷ್ಟು ಸೇವೆ ಮಾಡಿದ್ದಾರೆ. ಹಾಗೇ ಮಗುವಿನಂತ ಮನಸ್ಸಿನ ಡಾ. ರಾಜ್‌ಕುಮಾರ್ ಅವರಿಗೆ ಮಕ್ಕಳ ಮನಸ್ಸು ಅರ್ಥ ಆಗುತ್ತಿತ್ತಂತೆ. ಇದೇ ಕಾರಣಕ್ಕೆ ಅವರು, ತಮ್ಮ ಜೇಬಿನಲ್ಲಿ ಅಂದ್ರೆ ತಮ್ಮ ಪರ್ಸ್‌ನಲ್ಲಿ ಹಣ ಇಟ್ಟು ಅದನ್ನ ಜೇಬಿನ ಮೇಲೆ ಕಾಣುವ ರೀತಿಯೇ ಇಟ್ಟು ಹೋಗುತ್ತಿದ್ದರಂತೆ. ಆಗ ಡಾ. ಶಿವರಾಜ್‌ಕುಮಾರ್ ಮತ್ತು ಸಹೋದರರು ಆ ದುಡ್ಡು ತೆಗೆದುಕೊಂಡು ಹೋಗಿ ಖರ್ಚು ಮಾಡುತ್ತಿದ್ದರಂತೆ. ಆಗ ಡಾ. ರಾಜ್‌ಕುಮಾರ್ ಅವರು, ಸುಮ್ಮನೆ ಪಾರ್ವತಮ್ಮ ರಾಜ್‌ಕುಮಾರ್ ಅವರನ್ನು ಕರೆದು ಕೇಳುತ್ತಿದ್ದರಂತೆ. ಈ ರೀತಿ ಶಿವಣ್ಣ ತಮ್ಮ ಬಾಲ್ಯದ ತುಂಟತನ ನೆನಪು ಮಾಡಿಕೊಂಡಿದ್ದಾರೆ.

Sandalwood Star Shivarajkumar Said That He Was Taken Money From Dr Rajkumar Pocket

ಶಿವರಾತ್ರಿಗೆ ಶಿವಣ್ಣ ಸಿನಿಮಾ ರಿಲೀಸ್

ಇನ್ನು ಕೆಲವೇ ದಿನದಲ್ಲಿ ಶಿವರಾಜ್‌ಕುಮಾರ್ ಅವರ 'ಕರಟಕ ದಮನಕ' ರಿಲೀಸ್ ಆಗಲಿದೆ. ಹೀಗಾಗಿ ನಟ ಶಿವಣ್ಣ ಅವರು ಖಾಸಗಿ ಸಂದರ್ಶನ ನೀಡುತ್ತಿದ್ದರು. ಹೀಗೆ, ಸಂದರ್ಶವನ್ನು ನೀಡುವ ಸಮಯದಲ್ಲಿ ತಮ್ಮ ಜೀವನದ ಘಟನೆಗಳನ್ನು ಬಿಡಿಸಿಟ್ಟಿದ್ದಾರೆ. ಅದರಲ್ಲೂ ಈ ರೀತಿ ನಟ ಶಿವಣ್ಣ ನೇರವಾಗಿ ಮಾತನಾಡಿರುವುದು ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗಿದೆ. ನಟ ಶಿವಣ್ಣ ಅವರ ನೇರ ನುಡಿ ಕನ್ನಡಿಗರನ್ನ ಮತ್ತೊಮ್ಮೆ ಸೆಳೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+