ತಮಿಳುನಾಡಲ್ಲಿ ಕನ್ನಡಿಗನ ಹವಾ, ಶಿವರಾಜ್‌ಕುಮಾರ್ ಅಬ್ಬರ ಜೋರು!
ಕನ್ನಡ ಸಿನಿಮಾ ರಂಗ ಜಗತ್ತಿನಾದ್ಯಂತ ತನ್ನ ಬಲ ಪ್ರದರ್ಶನ ಮಾಡುತ್ತಿದೆ. ಕನ್ನಡಿಗರ ಈ ಸಿನಿಮಾ ಜಗತ್ತಿಗೆ ಹತ್ತಿರ ಹತ್ತಿರ 100 ವರ್ಷಗಳ ಇತಿಹಾಸ ಇದೆ. ಹೀಗಿರುವ ಕನ್ನಡ ಸಿನಿಮಾ ಇಂಡಸ್ಟ್ರಿ ಕಳೆದ 5-6 ವರ್ಷದಿಂದ ಅಬ್ಬರಿಸುತ್ತಿದೆ. ಅದರಲ್ಲೂ ನಟ ಶಿವಣ್ಣ ಅವರು ಈಗ ಇಡೀ ಭಾರತದಲ್ಲಿ ತಮ್ಮದೇ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ನೆರೆಯ ತಮಿಳುನಾಡಿನ ಜನ ಕೂಡ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರನ್ನು ಅಪ್ಪಿಕೊಂಡು, ಒಪ್ಪಿದ್ದಾರೆ!
ಯೆಸ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 60 ಕ್ರಾಸ್ ಆಗಿದ್ದರೂ ಇಂದಿಗೂ 16 ವರ್ಷದ ಚಿರ ಯುವಕರಂತೆ ನಟನೆ ಮಾಡ್ತಾರೆ. ನಟ ಶಿವಣ್ಣರ ಸಿನ್ಮಾ ನೋಡಲು ಅವರ ಫ್ಯಾನ್ಸ್ ಭಾರಿ, ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಈ ಕ್ರೇಜ್ ಈಗ ತಮಿಳುನಾಡಿಗೆ ಕೂಡ ಹಬ್ಬಿದೆ. ಹೌದು, ಈಗ ಶಿವರಾಜ್‌ಕುಮಾರ್ ಅವರ 2ನೇ ತಮಿಳು ಸಿನಿಮಾ ರಿಲೀಸ್ ಆಗಿದ್ದು ಬಾಕ್ಸ್ ಆಫಿಸ್‌ನಲ್ಲಿ ಕೂಡ ಶೇಕ್ ಆಗಿದೆ. ಇದರ ಜೊತೆಗೆ, ಥಿಯೇಟ್ ಒಳಗೆ & ಹೊರಗೆ ಬರೀ ಶಿವರಾಜ್‌ಕುಮಾರ್ ಹೆಸರು ಅಬ್ಬರಿಸಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಶಿವಣ್ಣ
ಕ್ಯಾಪ್ಟನ್ ಮಿಲ್ಲರ್ ಪ್ಯಾನ್ ಇಂಡಿಯಾ ಸಿನ್ಮಾ. ಕನ್ನಡ, ತಮಿಳು, ತೆಲುಗು ಮತ್ತೆ ಹಿಂದಿಯ ಸಿನಿಮಾ ರಂಗದಲ್ಲಿ ರಿಲೀಸ್ ಆಗಿದೆ. ಸಿನಿಮಾಗೆ ಅರುಣ್ ಮಾಥೇಶ್ವರನ್ ಅವರು, ಡೈರೆಕ್ಷನ್ ಮಾಡಿದ್ದಾರೆ ಧನುಷ್ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸಂಕ್ರಾಂತಿಗಾಗಿ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗಿದ್ದು ಸಿನಿಮಾ ನೋಡಿ ಹೊರಗಡೆ ಬರುತ್ತಿರುವ ಅಭಿಮಾನಿಗಳು ಫಿದಾ ಆಗಿ ಮಾತನಾಡಿದ್ದಾರೆ. ಈ ಮೂಲಕ ಕನ್ನಡಿಗ ತಮಿಳುನಾಡಿನಲ್ಲೂ ಹವಾ ಇಟ್ಟಿದ್ದಾರೆ.
ಮಾವನ ಬಳಿಕ ಅಳಿಯನ ಸಿನಿಮಾ
ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ & ರಜನಿಕಾಂತ್ ಅಳಿಯ ಧನುಷ್ ಸಿನಿಮಾ ಬಗ್ಗೆ ಚರ್ಚೆ ಜೋರಾಗಿದೆ. ಸೆಂಚ್ಯುರಿ ಸ್ಟಾರ್ ಶಿವಣ್ಣ ಅವರು ಅಬ್ಬರ ತೋರಿಸುತ್ತಿದ್ದಾರೆ. ಶಿವಣ್ಣ ಸಿನಿಮಾ ಕ್ರೇಜ್ ನೋಡಿ ಭಾರತೀಯರು ಫಿದಾ ಆಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ ನಟ ರಜನಿಕಾಂತ್ ತಮಿಳು ಸಿನಿಮಾ 'ಜೈಲರ್' ಮೂಲಕ ಶಿವಣ್ಣ ಮಿಂಚಿದ್ದರು ಈಗ ರಜನಿಕಾಂತ್ ಅಳಿಯ ಧನುಷ್ ಸಿನಿಮಾದಲ್ಲೂ ಹೊಸ ಸಂಚಲನಕ್ಕೆ ಸಾಕ್ಷಿಯಾಗಿದ್ದಾರೆ.
'ಕ್ಯಾಪ್ಟನ್ ಮಿಲ್ಲರ್' ಗಳಿಸಿದ್ದು ಇಷ್ಟು!
ತಮಿಳುನಾಡು ರಾಜ್ಯದಲ್ಲಿ ಸಂಕ್ರಾಂತಿ ದೊಡ್ಡ ಹಬ್ಬ ಅಲ್ಲಿ ಸಂಕ್ರಾಂತಿ ಹಬ್ಬವನ್ನು ಪೊಂಗಲ್ ಅಂತ ಆಚರಣೆ ಮಾಡಲಾಗುತ್ತದೆ. ಹೀಗೆ ಸಂಕ್ರಾಂತಿ, ಪೊಂಗಲ್ ಸಂಭ್ರಮದ ಮಧ್ಯೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ಧನುಷ್ ನಟಿಸಿರುವ ಕ್ಯಾಪ್ಟನ್ ಮಿಲ್ಲರ್ ಅದ್ಧೂರಿಯಾಗಿ ರಿಲೀಸ್ ಆಗಿದೆ. ಹೀಗೆ ರಿಲೀಸ್ ಆಗಿರುವ 'ಕ್ಯಾಪ್ಟನ್ ಮಿಲ್ಲರ್' ಮೊದಲ ದಿನ, ಭರ್ಜರಿ ಸದ್ದು ಮಾಡಿದೆ. 'ಕ್ಯಾಪ್ಟನ್ ಮಿಲ್ಲರ್' ಈಗ ಮೊದಲನೇ ದಿನವೇ ಸುಮಾರು 20 ಕೋಟಿಗೂ ಹೆಚ್ಚು ಗಳಿಸಿದೆ ಎನ್ನಲಾಗಿದೆ.

ಒಟ್ನಲ್ಲಿ ಶಿವರಾಜ್‌ಕುಮಾರ್ ಅವರು ಈ ವಯಸ್ಸಿನಲ್ಲೂ ತುಂಬಾ ಆಕ್ಟಿವ್ ಆಗಿ, ಸಿನಿಮಾ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಶಿವಣ್ಣ ಅವರ ಎನರ್ಜಿ ನೋಡಿ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿ ಆಗುತ್ತಿದೆ. ಯಾಕಂದ್ರೆ ಈಗಿನ ಸಮಯದಲ್ಲೂ ಸಖತ್ ಆಕ್ಷನ್ & ಡಾನ್ಸ್ ಮಾಡುವ ಶಿವಣ್ಣ ಸಿನಿಮಾ ರಂಗಕ್ಕೆ ಮಾದರಿ. ಅದರಲ್ಲೂ ತಮಿಳು ಸಿನಿಮಾ ರಂಗದಲ್ಲಿ, ನಟರು & ನಟಿಯರು ಸೇರಿದಂತೆ ಕೋಟ್ಯಂತರ ಪ್ರೇಕ್ಷಕರು ಶಿವಣ್ಣ ಅವರಿಗೆ ಫಿದಾ ಆಗಿದ್ದಾರೆ.
ಅಲ್ಲದೆ ಶಿವಣ್ಣ ಇನ್ನಷ್ಟು ಸಿನಿಮಾಗಳನ್ನ ತಮಿಳು ಚಿತ್ರರಂಗದಲ್ಲಿ ಮಾಡಲಿ ಅನ್ನೋದೆಲ್ಲ ಅವರ ಬಯಕೆ ಆಗಿದೆ. ಈ ಮೂಲಕ ಹ್ಯಾಟ್ರಿಕ್ ಹೀರೋ ಇಡೀ ತಮಿಳು ಸಿನಿಮಾ ರಂಗಕ್ಕೆ ಹೊಸ ಕಳೆ ನೀಡಿದ್ದಾರೆ. ಜೊತೆಗೆ ತೆಲುಗು ಸಿನಿಮಾ ಇಂಡಸ್ಟ್ರಿಯಿಂದ ಕೂಡ ಸ್ಯಾಂಡಲ್ವುಡ್ ಲೆಜೆಂಡ್‌ಗೆ ದೊಡ್ಡ ದೊಡ್ಡ ಆಫರ್ಸ್ ಬರುತ್ತಿವೆ.












Click it and Unblock the Notifications