‘ಕೆಜಿಎಫ್’ ಕ್ಯಾಪ್ಟನ್ ಯಶ್ ಬಗ್ಗೆ ನಟ ಶಿವರಾಜ್‌ಕುಮಾರ್ ಹೇಳಿದ್ದೇನು?
ನಟ ಯಶ್ & ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ನಡುವೆ ಅತ್ಯುತ್ತಮ ಸಂಬಂಧವಿದ್ದು, ಹಲವು ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ. ಹೀಗಿದ್ದಾಗ ಯಶ್ ಅವರ ಹುಟ್ಟುಹಬ್ಬಕ್ಕೆ ನಟ ಶಿವಣ್ಣ ದೊಡ್ಡ ಉಡುಗೊರೆ ನೀಡಿದ್ದಾರೆ. ಹಾಗಾದರೆ ಹ್ಯಾಟ್ರಿಕ್ ಹೀರೋ, ರಾಕಿಭಾಯ್‌ಗೆ ನೀಡಿದ ಆ ಉಡುಗೊರೆ ಏನು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ನಟ ಯಶ್ ತಮ್ಮ ಮೊದಲನೇ ಸಿನಿಮಾದಿಂದ ಹಿಡಿದು, ಕೆಜೆಎಫ್ ತನಕ ಹೊಸ ತನವನ್ನು ಕನ್ನಡ ಸಿನಿಮಾ ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಒಂದು ಸಿನಿಮಾ ಕಥೆ ಇದ್ದಂತೆ, ಇನ್ನೊಂದು ಸಿನಿಮಾದ ಮೇಕಿಂಗ್ ಇರಲ್ಲ. ಎಲ್ಲದರಲ್ಲೂ ಚೇಂಜ್ & ಚಾಲೆಂಜ್ ತಗೊಂಡು ಮುನ್ನುಗ್ಗುತ್ತಾರೆ ಯಶ್. ಈಗ ತಮ್ಮ ಮುಂದಿನ ಸಿನಿಮಾ ಯಶ್-19 ಮೂಲಕ, ಸಂಚಲನ ಸೃಷ್ಟಿಸಿದ್ದಾರೆ. ಸರಿಯಾಗಿ 1 ತಿಂಗಳ ಹಿಂದೆ, ಅಂದರೆ ಡಿಸೆಂಬರ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಅವರ ಹುಟ್ಟುಹಬ್ಬ ಬಂದಿದ್ದು ಈ ಸಮಯದಲ್ಲಿ ನಟ ಶಿವಣ್ಣ ಸರ್ಪ್ರೈಸ್ ಕೊಟ್ಟಿದ್ದಾರೆ.

ಯಶ್‌ಗೆ ಶಿವರಾಜ್‌ಕುಮಾರ್ ಗಿಫ್ಟ್!
'ಕೆಜಿಎಫ್-1' ತನ್ನ ಕೆಪಾಸಿಟಿ ತೋರಿಸಿದ ನಂತರ 2022 ರಲ್ಲಿ 'ಕೆಜಿಎಫ್-2'ಗೆ ಸಿಕ್ಕ 1000 ಕೋಟಿ ರೂಪಾಯಿ ಗೆಲುವು ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿತ್ತು. ಇದೇ ಸಮಯದಲ್ಲಿ ಯಶ್ ಮತ್ತೆ ಅಬ್ಬರಿಸಲು ಸಿದ್ಧವಾಗಿದ್ದು ಕನ್ನಡಿಗರಿಗೆ 'ಆಸ್ಕರ್' ಕೊಡಿಸಲು ಸಜ್ಜಾಗಿದ್ದಾರೆ. ಹೀಗಿದ್ದಾಗ ಯಶ್ ಅವರ ಅಭಿಮಾನಿಗಳು ಈ ಬಾರಿ ನಟ ರಾಕಿಂಗ್ ಸ್ಟಾರ್‌ರ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ, ಸಂಭ್ರಮದಿಂದ ಮಾಡಲು ನಿರ್ಧರಿಸಿದ್ದಾರೆ.
ಯಶ್ ಹುಟ್ಟುಹಬ್ಬಕ್ಕೆ ಅಂತಾನೆ ಈಗ ಕಾಮನ್ ಡಿಪಿ ಅಂದ್ರೆ ಸಿಡಿಪಿ ರಿಲೀಸ್‌ನ ಮಾಡಲಾಗಿದೆ. ಇದನ್ನು ನಟ & ಕನ್ನಡಿಗರ ಹ್ಯಾಟ್ರಿಕ್ ಹೀರೋ ಶಿವಣ್ಣ ಹಂಚಿಕೊಂಡಿದ್ದಾರೆ. 'ಯಶ್ ಹಾಗೂ ಅವರ ಎಲ್ಲಾ ಅಭಿಮಾನಿಗಳಿಗೂ ಶುಭಾಶಯಗಳು! CDP ತುಂಬಾ ಚೆನ್ನಾಗಿದೆ.' ಎಂದು ಇದೀಗ ನಟ ಶಿವಣ್ಣ ಬರೆದುಕೊಂಡಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ನಟ ಶಿವಣ್ಣ ಅವರ ಪೋಸ್ಟ್ ವೈರಲ್ ಆಗುತ್ತಿದೆ.
ಯಶ್ ಹಾಗೂ ಅವರ ಎಲ್ಲಾ ಅಭಿಮಾನಿಗಳಿಗೂ ಶುಭಾಶಯಗಳು!
— DrShivaRajkumar (@NimmaShivanna) January 5, 2024
CDP ತುಂಬಾ ಚೆನ್ನಾಗಿದೆ.
Happy to unveil the Birthday Common Dp of @TheNameIsYash #YashBirthdayCDP pic.twitter.com/GkTcoZ9bHf
ಹೇಗಿದೆ ಯಶ್-19 ಪ್ಲ್ಯಾನ್?
ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಜೊತೆಗೆ ಸೇರಿ, ರಾಕಿಂಗ್ ಸ್ಟಾರ್ ಯಶ್ ಕಮಾಲ್ ಮಾಡಲು ಸಿದ್ಧವಾಗಿದ್ದಾರೆ. ಯಶ್ ಅವರ ಮುಂದಿನ ಸಿನಿಮಾ ಕಥೆಯು ಡ್ರಗ್ಸ್ ಮಾಫಿಯಾ ಸುತ್ತ ಇರುತ್ತೆ ಎಂಬ ಮಾತುಗಳು ಓಡಾಡುತ್ತಿದ್ದು, ಮುಂದೆ ಇದಕ್ಕೆ ಪಕ್ಕಾ ಉತ್ತರ ಸಿಗಲಿದೆ. ಆದರೆ ಈಗ, ಯಶ್ ಅವರ ಹುಟ್ಟುಹಬ್ಬದ ಸಂಭ್ರಮ ಜೋರಾಗಿದೆ. ಕನ್ನಡಿಗರು ಮಾತ್ರವಲ್ಲ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಅಭಿಮಾನಿಗಳು ಯಶ್ ಅವರ ಬರ್ತ್ ಡೇ ಹಿನ್ನೆಲೆ ಸಕಲ ಸಿದ್ಧತೆ ನಡೆಸಿದ್ದಾರೆ.

ಬಡವರ ಮಕ್ಕಳಿಗೂ ಒಂದು ಕಾಲ!
ಒಟ್ನಲ್ಲಿ ಬಡವರ ಮಕ್ಕಳಿಗೂ ಒಂದು ಕಾಲ ಬರುತ್ತದೆ, ಬೆಳೆದು ನಿಲ್ಲಲು ಶ್ರಮ ಬೇಕು ಅನ್ನೋದನ್ನ ಹಲವಾರು ಸಿನಿಮಾ ನಟರು ತೋರಿಸಿದ್ದಾರೆ. ಕನ್ನಡ ಸಿನಿಮಾ ಜಗತ್ತಿನಲ್ಲಿ ಹೆಜ್ಜೆ ಹೆಜ್ಜೆಗೂ ಕಷ್ಟಗಳ ಅನುಭವಿಸಿ ಬೆಳೆದು ನಿಂತಿದ್ದ ಹಲವು ಕನ್ನಡದ ಸ್ಟಾರ್‌ಗಳು ಇದ್ದಾರೆ. ಇದೇ ರೀತಿಯೇ ನಟ ಯಶ್ ಹಾಗೂ ಇನ್ನಿತರ ಕನ್ನಡದ ನಟರು ಆಧುನಿಕ ಕಾಲದಲ್ಲಿ ಮಾದರಿ ಆಗುತ್ತಾ ಗಮನ ಸೆಳೆದಿದ್ದಾರೆ.
ಊರಲ್ಲಿ ಇರೋದಿಲ್ಲ ರಾಕಿಂಗ್ ಸ್ಟಾರ್
ಇಷ್ಟೆಲ್ಲ ಸಂಭ್ರಮದ ನಡುವೆ ಯಶ್ ಅವರ ಅಭಿಮಾನಿಗಳಿಗೆ ಒಂದು ಬೇಸರದ ಸಂಗತಿ ಕೂಡ ಇದೆ. ಯಾಕಂದ್ರೆ ನಟ ಯಶ್ ಅವರು ತಮ್ಮ ಹುಟ್ಟುಹಬ್ಬದ ದಿನ ಬೆಂಗಳೂರಲ್ಲಿ ಇರೋದಿಲ್ಲ ಎನ್ನುವ ಸುದ್ದಿ ಈಗಾಗಲೇ ಹೊರಬಿದ್ದಿದೆ. ಹೀಗಿದ್ದರೂ ಯಶ್ ಅವರ ಫ್ಯಾನ್ಸ್ ಮಾತ್ರ ನೆಚ್ಚಿನ ನಟನ ಬರ್ತ್ ಡೇ ಸಂಭ್ರಮಕ್ಕೆ ಅಬ್ಬರದ ತಯಾರಿ ಆರಂಭಿಸಿದ್ದಾರೆ. ಹಾಗೇ ಇನ್ನೇನು ಮುಂದಿನ ವರ್ಷಕ್ಕೆ ಯಶ್ ಅವರ ಹೊಸ ಸಿನಿಮಾ ಕೂಡ ತೆರೆಗೆ ಬರಲಿದ್ದು ಹೀಗಾಗಿ ಖುಷಿ ಜೋರಾಗಿದೆ.












Click it and Unblock the Notifications