ಚಿಕ್ಕಣ್ಣನ ಕಣ ಕಣದಲ್ಲೂ ದರ್ಶನ್ ಅವರ ಬಗ್ಗೆ ಎಷ್ಟು ಅಭಿಮಾನ ಇದೆ ನೋಡಿ!

ಚಿಕ್ಕಣ್ಣ ಇದೀಗ ಉಪಾಧ್ಯಕ್ಷ ಸಿನಿಮಾ ಗೆಲುವಿನ ಖುಷಿಯಲ್ಲಿದ್ದಾರೆ. ಹೀಗಾಗಿಯೇ ಅವರಿಗೆ ಡಬಲ್ ಧಮಾಖ ಸಿಕ್ಕಿದೆ. ಹಾಗೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಹೀರೋ ಆಗಿ, ಚಿಕ್ಕಣ್ಣ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಆದರೆ ಇದೇ ಸಮಯದಲ್ಲಿ ನಟ ಚಿಕ್ಕಣ್ಣ ಅವರು ಡಿ-ಬಾಸ್ ದರ್ಶನ್ ಬಗ್ಗೆ ಮನಸ್ಸು ತುಂಬಿ ಮಾತನಾಡಿದ್ದಾರೆ. ಹಾಗೇ ಚಿಕ್ಕಣ್ಣ ಅವರ ಕಣ ಕಣದಲ್ಲೂ ದರ್ಶನ್‌ರ ಬಗ್ಗೆ ಎಷ್ಟು ಅಭಿಮಾನ ಇದೆ? ಅಂತಾ ಇಡೀ ಜಗತ್ತಿಗೆ ಮತ್ತೆ ಗೊತ್ತಾಗಿದೆ.

ಅಂದಹಾಗೆ ಈಗ ಚಿಕ್ಕಣ್ಣ ಅವರು 'ಉಪಾಧ್ಯಕ್ಷ' ಸಿನಿಮಾ ಗೆಲುವಿನ ಹಿನ್ನೆಲೆಯಲ್ಲಿ, ನಟ ದರ್ಶನ್ ಅವರ ಸಹಾಯ ನೆನಪು ಮಾಡಿಕೊಂಡಿದ್ದಾರೆ. ಅದ್ರಲ್ಲೂ ನಟ ದರ್ಶನ್ ಅವರು ಚಿಕ್ಕಣ್ಣನ ಸಿನಿಮಾಗೆ ಮಾಡಿರುವ ಸಹಾಯ ಹಾಗೂ ಪ್ರಮೋಷನ್ ಬಗ್ಗೆಯೂ ಹೆಮ್ಮೆಯಿಂದ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಹಾಗಾದರೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಚಿಕ್ಕಣ್ಣ ಹೇಳಿದ್ದಾದರೂ ಏನು? ದರ್ಶನ್ ಅವರು ಚಿಕ್ಕಣ್ಣ ಸಿನಿಮಾಗೆ ಅಂತ ಹೇಗೆಲ್ಲಾ ಪ್ರಮೋಷನ್ ಮಾಡಿದ್ದಾರೆ ಗೊತ್ತಾ? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

Sandalwood Star Chikkanna Said That Actor Darshan Is Great

ದರ್ಶನ್ ಅವರಿಗೆ ಚಿಕ್ಕಣ್ಣ ಋಣಿ!

ಹೌದು, ಇದೀಗ ಚಿಕ್ಕಣ್ಣ ಅವರು ಮನಸ್ಸು ತುಂಬಿ ಮಾತನಾಡಿದ್ದಾರೆ. ಹಾಗೇ ದರ್ಶನ್‌ರ ಸಹಾಯದಿಂದ ನನ್ನ ಸಿನಿಮಾ ಗೆಲುವಿಗೆ ದೊಡ್ಡ ಕೊಡುಗೆ ಸಿಕ್ಕಿದೆ ಎಂದಿದ್ದಾರೆ. ಯಾಕಂದ್ರೆ ಡಿ-ಬಾಸ್ ದರ್ಶನ್ ಅವರು, ತಮ್ಮ ಸಿನಿಮಾಗೂ ಮಾಡದಷ್ಟು ಪ್ರಚಾರ ನನ್ನ ಸಿನಿಮಾಗೆ ಮಾಡಿದ್ದಾರೆ. ಹೀಗಾಗಿ ಅವರಿಗೆ ನಾನು ಋಣಿಯಾಗಿ ಇರುತ್ತೇನೆ. ಹಾಗೆಯೇ ನಮ್ಮ ಸಿನಿಮಾ ನಿರ್ಮಾಪಕರಾದ ಉಮಾಪತಿ ಅವರು & ದರ್ಶನ್ ಅವರ ನಡುವೆ ವೈಮನಸ್ಸು ಇದ್ದರೂ ಅದನ್ನ ಈಗ ನಟ ದರ್ಶನ್ ಅವರು ಲೆಕ್ಕ ಮಾಡಲಿಲ್ಲ.

'ಉಪಾಧ್ಯಕ್ಷ' ಸಿನಿಮಾಗೆ ಉಮಾಪತಿ ಅವರು ಬಂಡವಾಳ ಹೂಡಿದ್ದರೂ ಡಿ-ಬಾಸ್ ದರ್ಶನ್ ಅವರು ನನಗಾಗಿ ಪ್ರಚಾರ ನಡೆಸಿದರು. ಇದು ಗ್ರೇಟ್ ಅಂತಾ ಇದೀಗ ಚಿಕ್ಕಣ್ಣ ಹೇಳಿದ್ದಾರೆ. ಹಾಗೇ ಈ ರೀತಿ ಡಿ-ಬಾಸ್ ಮಾಡಿದ ಪ್ರಚಾರದ ಪರಿಣಾಮ ನನ್ನ ಸಿನಿಮಾ ಗೆಲುವಿಗೆ ಕೂಡ ದೊಡ್ಡ ಕೊಡುಗೆ ಸಿಕ್ಕಿದೆ ಎಂಬುದನ್ನೂ ಇದೀಗ ಚಿಕ್ಕಣ್ಣ ನೆನಪು ಮಾಡಿಕೊಂಡಿದ್ದಾರೆ. ಈ ಮೂಲಕ ನಟ ಚಿಕ್ಕಣ್ಣ ಅವರ ಈ ಹೇಳಿಕೆ ಇದೀಗ ಫುಲ್ ವೈರಲ್ ಆಗುತ್ತಿದೆ.

ಕಾಟೇರ ಸಕ್ಸಸ್ ಸಂಭ್ರಮದಲ್ಲಿ ಡಿ-ಬಾಸ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ ತಮ್ಮ ಕಾಟೇರ ಗೆಲುವಿನ ಸಂಭ್ರಮದಲ್ಲಿ ಇದ್ದಾರೆ. ಮತ್ತೊಂದ್ಕಡೆ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್‌ರ ಆತ್ಮೀಯ ಸ್ನೇಹಿತರಾದ, ಚಿಕ್ಕಣ್ಣ ಅಭಿನಯದ 'ಉಪಾಧ್ಯಕ್ಷ' ಸಿನಿಮಾ ಅದ್ಧೂರಿಯಾಗಿ ಸಕ್ಸಸ್ ಕಂಡಿದೆ. ಹೀಗಿದ್ದಾಗ ಚಿಕ್ಕಣ್ಣ ಅವರು ಯಾವುದೇ ಮುಚ್ಚು ಮರೆ ಇಲ್ಲದಂತೆ ನಟ ದರ್ಶನ್ ಅವರು ಮಾಡಿರುವ ಸಹಾಯ ನೆನಪು ಮಾಡಿಕೊಂಡು ಮಾತನಾಡಿದ್ದಾರೆ. ಹಾಗೇ ಇದರ ಜೊತೆಗೆ ಕಾಟೇರ ಸಿನಿಮಾಗಾಗೂ ನಟ ದರ್ಶನ್ ಅವರು ಇಷ್ಟು ಪ್ರಚಾರ ಮಾಡಲಿಲ್ಲ. ಆದರೆ ನನ್ನ ಸಿನಿಮಾ ಮಾಡಿದ್ದಾರೆ, ಇದು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಆಗಲ್ಲ ಎಂದಿದ್ದಾರೆ ನಟ ಚಿಕ್ಕಣ್ಣ.

Sandalwood Star Chikkanna Said That Actor Darshan Is Great

200 ಕೋಟಿ ರೂಪಾಯಿ ಕ್ಲಬ್

ನಟ ದರ್ಶನ್ ಅವರ ಇಡೀ ಸಿನಿ ಕರಿಯರ್ ಈಗ ಝಗಮಗಿಸಿದೆ. ಕೋಟ್ಯಂತರ ಫ್ಯಾನ್ಸ್ ಕಾಟೇರ ಹಬ್ಬ ಎಂಜಾಯ್ ಮಾಡಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲಿ ಕಾಟೇರ ಹೀಗೆ ಅಬ್ಬರಿಸಿದ್ದನ್ನು ಕಂಡು ಖುಷ್ ಆಗಿದ್ದಾರೆ. ಜೊತೆಗೆ ಸ್ಯಾಂಡಲ್‌ವುಡ್‌ಗೆ ಈಗ ಹೊಸ ಗತ್ತು ಬಂದಿದೆ. ಹಿಂದೆ ಕೆಜಿಎಫ್ & ಕಾಂತಾರ ಕೊಟ್ಟ ಶೈನಿಂಗ್ ಮತ್ತಷ್ಟು ಹೆಚ್ಚಾಗಿದೆ. ಈ ಖುಷಿ ಹೆಚ್ಚಾಗಲು ಕಾಟೇರ ಸಿನಿಮಾನೇ ಕಾರಣವಾಗಿದೆ. ಈಗಿನ ಮಾಹಿತಿಯಂತೆ ಕಾಟೇರ ಒಟ್ಟಾರೆ 200 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದ್ದು, ಓಟಿಟಿ ಅಖಾಡದಲ್ಲಿ ಕೂಡ ಅಬ್ಬರಿಸುತ್ತಿದೆ. ಹಾಗೇ ಮತ್ತೊಂದು ಕಡೆ, ನಟ ಚಿಕ್ಕಣ್ಣ ಅವರ ಉಪಾಧ್ಯಕ್ಷ ಸಿನಿಮಾ ಕೂಡ ಕೋಟಿ ಕೋಟಿ ಬಾಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+