ಚಿಕ್ಕಣ್ಣ 45 ರೂಪಾಯಿಗೆ ಗಾರೆ ಕೆಲಸ ಶುರು ಮಾಡಿ, ಇಂದು ಎಷ್ಟು ಕೋಟಿ ಗಳಿಸುತ್ತಾರೆ ಗೊತ್ತಾ?
ಜೀವನದಲ್ಲಿ ಕಷ್ಟಪಟ್ಟಿರುವ ವ್ಯಕ್ತಿಗಳು ಮಾತ್ರ ಮುಂದೆ ಬರೋಕೆ ಸಾಧ್ಯ ಅನ್ನೋ ಮಾತು ಚಿಕ್ಕಣ್ಣ ಅವರ ಜೀವನದಲ್ಲಿ ನಿಜವಾಗಿದೆ. ಕೇವಲ 45 ರೂಪಾಯಿಗಾಗಿ ಗಾರೆ ಕೆಲಸ ಶುರು ಮಾಡಿದ್ದ ಕನ್ನಡಿಗರ ಪಾಲಿನ ಕಾಮಿಡಿ ಸೂಪರ್ ಸ್ಟಾರ್ ಚಿಕ್ಕಣ್ಣ ಇಂದು ಕೋಟಿ ಕೋಟಿ ಗಳಿಸುತ್ತಾರೆ. ಹೀಗಿದ್ದರೂ ಚಿಕ್ಕಣ್ಣ ತಮ್ಮ ಹಿಂದಿನ ಜೀವನ ನೆನಪು ಮಾಡಿಕೊಂಡು ತೀರಾ ಭಾವುಕರಾಗಿದ್ದಾರೆ.
ಚಿಕ್ಕಣ್ಣ ಹೀರೋ ಆಗಿ ಅಭಿನಯ ಮಾಡಿದ 'ಉಪಾಧ್ಯಕ್ಷ' ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ, ಅದ್ಧೂರಿಯಾಗಿ ಕೋಟಿ ಕೋಟಿ ಗಳಿಕೆ ಮಾಡಿದೆ. ಇದೇ ಸಮಯದಲ್ಲಿ ಚಿಕ್ಕಣ್ಣ ಅವರ ಆ ಬಾಲ್ಯದ ದಿನಗಳು ಮತ್ತು ಅವರು ಕಷ್ಟಪಟ್ಟು ಮೇಲೆ ಬಂದ ಜೀವನಗಾಥೆ ಕೂಡ ಕನ್ನಡದ ಮನಸ್ಸುಗಳನ್ನ ಸೆಳೆಯುತ್ತಿದೆ. ಅಂದಹಾಗೆ ತನ್ನ ಮನೆಯ ಕಷ್ಟಗಳನ್ನು ಎದುರಿಸಲು ನಟ ಚಿಕ್ಕಣ್ಣ ಅವರು ತಮ್ಮ ಶಾಲಾ ಶಿಕ್ಷಣ ಮುಗಿಸಿದ ತಕ್ಷಣವೇ, ಗಾರೆ ಕೆಲಸಕ್ಕೆ ಸೇರಿದ್ದರಂತೆ.

45 ರೂಪಾಯಿಗೆ ಕೆಲಸ ಶುರುವಾಯ್ತು...
ಈ ರೀತಿ ಚಿಕ್ಕಣ್ಣ ಗಾರೆ ಕೆಲಸಕ್ಕೆ ಸೇರಿದ ನಂತರ ಅವರಿಗೆ ಸಿಗುತ್ತಿದ್ದ ಹಣ ಎಷ್ಟು ಗೊತ್ತಾ? ಕೇವಲ 45 ರೂಪಾಯಿ. ಹೀಗೆ 45 ರೂಪಾಯಿಗೆ ತಮ್ಮ ಕೆಲಸ ಶುರು ಮಾಡಿದ್ದ ಚಿಕ್ಕಣ್ಣಗೆ ಇದೀಗ ಒಂದು ಸಿನಿಮಾಗೆ ಎಷ್ಟು ಕೋಟಿ ರೂಪಾಯಿ ಸಿಗುತ್ತೆ? ಉಪಾಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣಗೆ ಎಷ್ಟು ಕೋಟಿ ಸಿಕ್ಕಿದೆ ಗೊತ್ತಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
2011ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ
ಕನ್ನಡ ಸಿನಿಮಾ ಕ್ಷೇತ್ರಕ್ಕೆ ನಟ ಚಿಕ್ಕಣ್ಣ 2011ರಲ್ಲಿ ಎಂಟ್ರಿ ಕೊಟ್ಟರು. ಅವರು ಕಿರಾತಕ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದರು. ಬಳಿಕ ಚಿಕ್ಕಣ್ಣಗೆ, ಸಾಲು ಸಾಲು ಆಫರ್ಸ್ ಬಂದವು. ನೋಡ ನೋಡುತ್ತಲೇ ದೊಡ್ಡದಾಗಿ, ಕನ್ನಡ ಸಿನಿ ರಂಗದಲ್ಲಿ ಬಿಡುವೆ ಇಲ್ಲದ ನಟನಾಗಿ ಬೆಳೆದು ನಿಂತರು ಚಿಕ್ಕಣ್ಣ. ಈ ನಟ ಮೊದಲ ಬಾರಿ ಹೀರೋ ಆಗಿ ನಟಿಸಿದ್ದು, 'ಉಪಾಧ್ಯಕ್ಷ' ಮೂಲಕ ಅಬ್ಬರಿಸಿದ್ದಾರೆ. ಇದೇ ಸಮಯದಲ್ಲಿ ಚಿಕ್ಕಣ್ಣ ಅವರ ಕಣ್ಣೀರಿನ ಕಥೆ ಕೂಡ ಜನರಿಗೆ ಭಾರಿ ನೋವು ನೀಡುತ್ತಿದೆ. ತಮ್ಮ ಜೀವನದಲ್ಲಿ 45 ರೂಪಾಯಿಗೆ ಪರದಾಡುತ್ತಿದ್ದ ನಟ ಚಿಕ್ಕಣ್ಣ ಇದೀಗ ಕೋಟಿ ಕೋಟಿ ಗಳಿಸುತ್ತಿದ್ದಾರೆ.
ಚಿಕ್ಕಣ್ಣ ಅವರ ಅಪ್ಪ ಹೊಡೆಯುತ್ತಿದ್ದರು!
ಸಾಧಕರು ಎಂದಿಗೂ ಸುಮ್ಮನೆ ಕೂರುವುದಿಲ್ಲ ಎನ್ನುವ ಮಾತಿಗೆ ಚಿಕ್ಕಣ್ಣ ಮತ್ತೊಂದು ತಾಜಾ ಉದಾಹರಣೆ. ಯಾಕಂದ್ರೆ ನಟ ಚಿಕ್ಕಣ್ಣ ತಮ್ಮ ಜೀವನದಲ್ಲಿ ಕಷ್ಟಗಳು ಎದುರಾದ ವೇಳೆ, ಸುಮ್ಮನೆ ಕುಳಿತುಕೊಳ್ಳದೆ ಹೋರಾಡಿದರು. ಹೀಗೆ ನಟ ಚಿಕ್ಕಣ್ಣ ಸಾಲು ಸಾಲು ಸಮಸ್ಯೆಗಳನ್ನು ಎದರಿಸಿದರೂ ಕೂಡ ಬೆಂಗಳೂರಿಗೆ ಬಂದಿದ್ದರಂತೆ. ತಮ್ಮ ತಂದೆ ಸಾಕಷ್ಟು ಹೊಡೆಯುತ್ತಿದ್ದ ಕಾರಣ, ಕೈಯಲ್ಲಿ ಚಿಲ್ಲರೆ ಕಾಸು ತೆಗೆದುಕೊಂಡು ಮೊದಲ ಬಾರಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದರಂತೆ.
ಬೆಂಗಳೂರಿನಲ್ಲಿ ಪರದಾಡಿದ್ದ ಚಿಕ್ಕಣ್ಣ
ಹೀಗೆ ಚಿಕ್ಕಣ್ಣ ಆರಂಭದಲ್ಲಿ ಬೆಂಗಳೂರಿಗೆ ಬಂದಾಗ, ಅವರ ಜೀವನದಲ್ಲಿ ಬದಲಾವಣೆಗಳು ಆಗಲೇ ಇಲ್ಲ. ಬೆಂಗಳೂರಿನಲ್ಲಿ 100 & 200 ರೂಪಾಯಿಗೆ ಗಾರೆ ಕೆಲಸ ಮಾಡುತ್ತಾ, ನಟ ಚಿಕ್ಕಣ್ಣ ಪರದಾಡಿದ್ದರು. ಇದನ್ನೆಲ್ಲಾ ತಡೆಯಲು ಆಗದೆ ಮರಳಿ ತಮ್ಮ ಊರಿಗೆ ಹೋಗಿ, ಅಲ್ಲೇ ವಾಸ ಮಾಡಿದ್ದರಂತೆ. ಆದರೆ ಬೆಂಗಳೂರಿನಲ್ಲಿ ಅವರಿಗೆ ಆದ ಅನುಭವದ ಪರಿಣಾಮ ಮುಂದೆ ನಟನಾ ಕ್ಷೇತ್ರಕ್ಕೆ ಅವರು ಹೆಜ್ಜೆ ಇಟ್ಟರು. ಚಿಕ್ಕಂದಿನಲ್ಲೂ ಅವರು ನಾಟಕಗಳಲ್ಲಿ & ಸ್ಟೇಜ್ ಪ್ರೋಗ್ರಾಮ್ ಮೂಲಕವೂ ನಟನೆ ಕಲಿತಿದ್ದರಂತೆ. ಮುಂದೆ ಏನಾಯ್ತು ಗೊತ್ತಾ?
ರಾಕಿಭಾಯ್ ಯಶ್ ದೊಡ್ಡ ಸಹಾಯ!
ಇನ್ನು ಚಿಕ್ಕಣ್ಣ ಅವರ ಟ್ಯಾಲೆಂಟ್ ಗುರುತಿಸಿದ್ದ ನಟ ರಾಕಿಂಗ್ ಸ್ಟಾರ್ ಯಶ್ ಅವರು, ಈ ನಟ ಅಂದ್ರೆ ಚಿಕ್ಕಣ್ಣನ ಜೊತೆಗೆ ಸಿನಿಮಾ ಮಾಡೋದಕ್ಕೆ ನಿರ್ಧರಿಸಿದ್ದರಂತೆ. ಯಶ್ ಅವರ ಈ ನಿರ್ಧಾರವೇ ನಟ ಚಿಕ್ಕಣ್ಣ ಅವರಿಗೆ ಹೊಸ ಬದುಕು ನೀಡುತ್ತದೆ. ನಟ ಚಿಕ್ಕಣ್ಣ ಅವರಿಗೆ ಯಶ್ ಅವರು ಕಿರಾತಕ ಸಿನಿಮಾದಲ್ಲಿ ಅವಕಾಶ ಕೊಡಿಸಿದ್ದರು. ಮುಂದೆ ಕಿರಾತಕ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಚಿಕ್ಕಣ್ಣ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು.
'ಉಪಾಧ್ಯಕ್ಷ' ಸಿನಿಮಾಗೆ ಎಷ್ಟು ಕೋಟಿ?
ಹೀಗೆ ಚಿಕ್ಕಣ್ಣ ಹಂತ ಹಂತವಾಗಿ ಬೆಳೆದು ನಿಂತರು. ಮುಂದೆ ಅವರು ಯಶ್ ಅಭಿನಯದ 'ರಾಜಾಹುಲಿ' ಸಿನಿಮಾದಲ್ಲಿ ಪ್ರಮುಖ ಪೋಷಕ ಪಾತ್ರವನ್ನ ನಿರ್ವಹಿಸಿ, ದೊಡ್ಡ ದೊಡ್ಡ ಆಫರ್ಸ್ ಪಡೆದರಂತೆ. ಈಗ 'ಉಪಾಧ್ಯಕ್ಷ' ಸಿನಿಮಾ ಮೂಲಕ ಚಿಕ್ಕಣ್ಣಗೆ ಹುರುಪು ಸಿಕ್ಕಿದ್ದು, 10 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆಯಂತೆ ಈ ಸಿನಿಮಾ. ಆದರೆ ಉಪಾಧ್ಯಕ್ಷ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಿದ್ದರೂ ನಟ ಚಿಕ್ಕಣ್ಣಗೆ 'ಉಪಾಧ್ಯಕ್ಷ' ಸಿನಿಮಾ ನಟನೆಗೆ ಒಂದೇ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ಆದರೆ ಚಿಕ್ಕಣ್ಣಗೆ 'ಉಪಾಧ್ಯಕ್ಷ'ನ ಗಳಿಕೆಯಲ್ಲಿ ಶೇರ್ ಲೆಕ್ಕದಲ್ಲಿ ಹಣ ಸಿಗಲಿದೆಯಂತೆ. ಈ ಮೂಲಕ ಕೋಟಿ ಕೋಟಿ ರೂಪಾಯಿ ಪಡೆಯಲಿದ್ದಾರೆ ನಟ ಚಿಕ್ಕಣ್ಣ.












Click it and Unblock the Notifications