ಮಗಳಿಗೆ ಮುತ್ತಿಟ್ಟ ‘ಕನಸಿನ ರಾಣಿ’ ಮಾಲಾಶ್ರೀ, ಯಾಕೆ ಗೊತ್ತಾ?

ಕಾಲವನ್ನು ತಡೆಯೋರು ಯಾರೂ ಇಲ್ಲ ಅನ್ನೋ ಸಾಲು ಹೊಂದಿರುವ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರ ಹಾಡು ನಿಜವಾಗುತ್ತಲೇ ಇರುತ್ತೆ. ಈಗ ಸಿನಿಮಾ ಮಂದಿಗೂ ಈ ಹಾಡಿನ ಸಾಲು ಅನ್ವಯ ಆಗುತ್ತಿದೆ. ಅದರಲ್ಲೂ 'ಕನಸಿನ ರಾಣಿ' ಮಾಲಾಶ್ರೀ ಅವರ ಬದುಕಿನಲ್ಲಿ, ಈ ಹಾಡು ಮತ್ತೆ ಮತ್ತೆ ನಿಜವಾಗುತ್ತಿದೆ. ಒಂದು ಕಾಲದಲ್ಲಿ ಮಾಲಾಶ್ರೀ ಹೀರೋಯಿನ್ ಆಗಿದ್ರು ಹಾಗೂ ನೂರಾರು ಸಿನಿಮಾದಲ್ಲಿ ಮಿಂಚಿದ್ದರು. ಇದೀಗ ಮಗಳು ಕೂಡ, ಅಮ್ಮನ ಹಿರಿಮೆ ಮುಂದುವರಿಸಿದ್ದಾರೆ.

ಆರಾಧನಾ ರಾಮ್ 'ಕಾಟೇರ' ಮೂಲಕ ಹೊಸ ಬದುಕು ಆರಂಭಿಸಿದ್ದಾರೆ. ತಮ್ಮ ಅಮ್ಮ & ಅಪ್ಪನ ರೀತಿಯೇ ಸಿನಿಮಾ ರಂಗಕ್ಕೆ ಆರಾಧನಾ ರಾಮ್ ಹೆಜ್ಜೆ ಇಟ್ಟಿದ್ದಾರೆ. ಹೀಗೆ ಮೊದಲನೇ ಸಿನಿಮಾದಲ್ಲೇ ಗುಡ್ ರೆಸ್ಪಾನ್ಸ್ ಪಡೆದು ಮಿಂಚಿದ್ದಾರೆ. ಇನ್ನು ಮಗಳ ಈ ಸಾಧನೆ ನೋಡಿ ತಾಯಿ ಮಾಲಾಶ್ರೀ ಮಾಡಿದ್ದೇನು ಗೊತ್ತಾ? ಕಾಟೇರ ಸಿನಿಮಾದಲ್ಲಿ ಆರಾಧನಾ ರಾಮ್ ಬಗ್ಗೆ ಹೇಗಿದೆ ಪ್ರತಿಕ್ರಿಯೆ? ಬನ್ನಿ ಕಾಟೇರದಲ್ಲಿ ಎದುರಾದ ಭಾವನಾತ್ಮಕ ಸನ್ನಿವೇಶವನ್ನು ಇದೀಗ ಸಂಪೂರ್ಣವಾಗಿ ತಿಳಿಯೋಣ.

Sandalwood Legendary Actress Malashri Reacted Over Her Daughter Performance In Kaatera Movie

ಮಗಳಿಗೆ ಮುತ್ತಿಟ್ಟ ಮಾಲಾಶ್ರೀ!

ಹೌದು ಮಗಳ ಮೊದಲ ಸಿನಿಮಾ ಬಗ್ಗೆ ಮಾತನಾಡುವ ಸಮಯದಲ್ಲಿ ಮಾಲಾಶ್ರೀ ಅವರು ಭಾವುಕರಾಗಿದ್ದಾರೆ. ಆರಾಧನಾ ರಾಮ್ ಅತ್ಯುತ್ತಮ ನಟನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು ಇದೇ ವೇಳೆ ಭಾವುಕರಾಗಿದ್ದಾರೆ. ಹಾಗೇ ತಮ್ಮ ಮಗಳ ನಟನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ ಮತ್ತು ಪುತ್ರಿಗೆ ಮುತ್ತಿಟ್ಟು ಪ್ರೀತಿ ತೋರಿಸಿದ್ದಾರೆ. ಹೀಗೆ ನಟಿ ಮಾಲಾಶ್ರೀ & ಅವರ ಮಗಳು ಆರಾಧನಾ ರಾಮ್ ಅವರ ಈ ಬಾಂಧವ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗೇ ಅಮ್ಮನ ರೀತಿ ಮಗಳು ಕೂಡ ಬೆಳೆದು ನಿಂತಿರುವ ರೀತಿ ನೋಡಿ ಫ್ಯಾನ್ಸ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

'ಕಾಟೇರ' ಅಬ್ಬರಕ್ಕೆ ಹೊಸ ದಾಖಲೆ!

ಅಂದಹಾಗೆ 'ಕಾಟೇರ' ಸಿನಿಮಾ ಬಿಡುಗಡೆಯಾದ ಮೊದಲ ದಿನ ಎಷ್ಟು ಗಳಿಸಿದೆ ಎನ್ನುವ ಬಗ್ಗೆ ಇನ್ನೂ ಅಧಿಕೃತವಾಗಿ ಸಿನಿಮಾ ತಂಡ ಮಾಹಿತಿ ನಿಡಿಲ್ಲ. ಆದ್ರೆ ಈ ಮಧ್ಯೆ ಎಲ್ಲೆಲ್ಲೂ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಭರ್ಜರಿ 20 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನ ಕನ್ನಡಿಗರ ಈ ಸಿನಿಮಾ ಗಳಿಸಿದೆ ಎನ್ನಲಾಗಿದೆ. ಜೊತೆಗೆ ಹೊರ ರಾಜ್ಯದಲ್ಲೂ 'ಕಾಟೇರ'ನ ಅಬ್ಬರ ಬಲು ಜೋರಾಗಿದೆ. ಹೀಗಾಗಿ ಈ ಸಿನಿಮಾ ಮತ್ತಷ್ಟು ದಾಖಲೆ ಧೂಳ್ ಮಾಡುವ, ಹೊಸ ಇತಿಹಾಸ ಸೃಷ್ಟಿಸುವ ನಿರೀಕ್ಷೆ ಕೂಡ ಇದೆ.

Sandalwood Legendary Actress Malashri Reacted Over Her Daughter Performance In Kaatera Movie

ಒಟ್ನಲ್ಲಿ ವರ್ಷದ ಕೊನೆಯಲ್ಲಿ ರಿಲೀಸ್ ಆಗಿರುವ 'ಕಾಟೇರ' ಸಿನಿಮಾ ಭರ್ಜರಿ ರೆಸ್ಪಾನ್ಸ್‌ನ ಪಡೆಯುತ್ತಿದೆ. ಹಾಗೇ ನಟಿ ಮಾಲಾಶ್ರೀ ಮಗಳ ನಟನೆ ಬಗ್ಗೆಯೂ ಅಭಿಮಾನಿಗಳು ಇದೀಗ, ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ತಮ್ಮ ಮಗಳ ಬಗ್ಗೆ 'ಕನಸಿನ ರಾಣಿ' ಮಾಲಾಶ್ರೀ, ಭಾವುಕರಾಗಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+