ಧನಂಜಯ್ ಅದೊಂದು ವಿಚಾರ ನನ್ನಿಂದ ಸಿಕ್ರೇಟ್ ಆಗಿ ಇಟ್ಟಿದ್ದರು- ನಟಿ ಅಮೃತ ಅಯ್ಯಂಗಾರ್
ಕನ್ನಡದ ನಟ ಡಾಲಿ ಧನಂಜಯ್ ಹಸೆಮಣೆ ಏರಲು ಸಜ್ಜಾಗಿದ್ದು, ಡಾಕ್ಟರ್ ಧನ್ಯತಾ ಅವರನ್ನು ಮದುವೆಯಾಗುತ್ತಿದ್ದಾರೆ. ಫೆಬ್ರವರಿಯಲ್ಲಿ ಮದುವೆ ನಡೆಯಲಿದ್ದು, ಈಗಾಗಲೇ ಸಿದ್ಧತೆಗಳು ಕೂಡ ಆರಂಭವಾಗಿದೆ. ಈ ಬಗ್ಗೆ ಡಾಲಿ ಧನಂಜಯ್ ಆಪ್ತೆ ನಟಿ ಅಮೃತ ಅಯ್ಯಂಗಾರ್ ಮಾತನಾಡಿದ್ದಾರೆ. ಡಾಲಿ ಧನಂಜಯ್ ಧನ್ಯತಾ ಅವರನ್ನು ಮದುವೆಯಾಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ನಟಿ ಅಮೃತ ಅಯ್ಯಂಗಾರ್ 'ಡಾಲಿ ಧನಂಜಯ್ ಮದುವೆ ನನಗೇನೂ ಸಪ್ರೈಸಿಂಗ್ ಆಗಿರಲಿಲ್ಲ. ನನಗೆ ಗೊತ್ತಿತ್ತು. ನನಗೆ ತುಂಬಾ ಹಿಂದೆನೇ ಹೇಳಿದ್ದರು. ನಾನು ತುಂಬಾ ಕಾಯುತ್ತಿದೆ. ಯಾವ ತರ ಎಲ್ಲರಿಗೂ ವಿಶೇಷವಾಗಿ ಹೇಳುತ್ತಾನೆ ಎನ್ನುವ ಕುತೂಹಲ ಇತ್ತು. ಅದೊಂದು ಮಾತ್ರ ನಮ್ಮಿಂದ ಸಿಕ್ರೇಟ್ ಆಗಿ ಇಟ್ಟಿದ್ದರು. ನಾನು ಒಂದು ಕಾನ್ಸೆಪ್ಟ್ ರೆಡಿ ಮಾಡಿದ್ದೇನೆ ಎಂದು ಧನಂಜಯ್ ಹೇಳುತ್ತಿದ್ದರು' ಎಂದರು.

'ಧನಂಜಯ್ ಅವರು ತುಂಬಾ ಚೆನ್ನಾಗಿ ಬರೆಯುತ್ತಾರೆ ಅದು ಎಲ್ಲರಿಗೂ ಗೊತ್ತಿದೆ. ಹುಡುಗಿ, ಪ್ರಕೃತಿ ಬಗ್ಗೆ ತುಂಬಾ ಚೆನ್ನಾಗಿ ಬರೆಯುತ್ತಾರೆ. ಹೀಗಾಗಿ ಯಾವ ರೀತಿ ಎಲ್ಲರಿಗೂ ಹೇಳುತ್ತಾರೆ ಎನ್ನುವ ಕುತೂಹಲ ತುಂಬಾ ಜಾಸ್ತಿ ಇತ್ತು. ವಿಷಯ ಮೊದಲೇ ಗೊತ್ತಿದ್ದರು ಅದನ್ನು ನೋಡಿದಾಗ ತುಂಬಾ ಖುಷಿ ಆಯ್ತು. ಯಾಕೆಂದರೆ ಆ ರೀತಿ ಒಂದು ಪ್ರೀತಿ ವ್ಯಕ್ತಪಡಿಸಿಕೊಳ್ಳುವುದು ಇದೆಯಲ್ಲಾ ಎಲ್ಲಾ ಹುಡುಗಿಯರದು ಡ್ರೀಮ್ ಅದು. ಅದನ್ನು ಧನಂಜಯ್ ತುಂಬಾ ಚೆನ್ನಾಗಿ ಮಾಡಿದ್ದಾರೆ'.
'ಧನಂಜಯ್ ಇದೇ ರೀತಿ ಹೇಳಬಹುದು ಅಂತಾ ನಾನು ಅಂದುಕೊಂಡಿದ್ದೆ. ಎಷ್ಟು ಚೆನ್ನಾಗಿ ಬರೆದು ಕೊನೆಯಲ್ಲಿ ನಾನು ಧನ್ಯ ಅಂತಾ ಹಾಕಿದ್ದರಲ್ಲಾ, ಆ ಕ್ಷಣ ನಂಗೆನೇ ರೋಮಾಂಚನ ಆಯ್ತು. ಎಷ್ಟು ಚೆನ್ನಾಗಿ ಯೋಚನೆ ಮಾಡಿ ಮಾಡಿದ್ದಾರೆ ಅಂತಾ. ಧನಂಜಯ್ ಅವರ ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡುವ ಹಾಗೇ ಇಲ್ಲ. ನಮ್ಮ ಅಮ್ಮ ಕೂಡ ಹೇಳುತ್ತಿದ್ದರು ಎಷ್ಟು ಚೆನ್ನಾಗಿ ಬರೆಯುತ್ತಾರೆ ಅಂತಾ. ನನಗೆ ಧನಂಜಯ್ ಜೊತೆ ಕೆಲಸ ಮಾಡಲು ತುಂಬಾ ಖುಷಿ ಇದೆ' ಎಂದು ನಟಿ ಅಮೃತ ಅಯ್ಯಂಗಾರ್ ಹೇಳಿದರು.

ಇನ್ನು ತೆರೆಯಲ್ಲಿ ಮಿಂಚಿದ್ದ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ಸಾಲು ಸಾಲು ಚಿತ್ರಗಳನ್ನು ಇಬ್ಬರು ಒಟ್ಟಿಗೆ ನಟಿಸಿದ್ದರು. ಈ ಜೋಡಿ ತೆರೆ ಮೇಲೆ ಮೋಡಿ ಮಾಡಿತ್ತು. ಜೊತೆಗೆ ತೆರೆ ಮರೆಯಲ್ಲೂ ಡಾಲಿ ಧನಂಜಯ್ ಮತ್ತು ಅಮೃತಾ ಐಯ್ಯಂಗಾರ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಅನುಮಾನ ಅನೇಕರಲ್ಲಿತ್ತು. ಯಾಕೆಂದರೆ ಒಂದಾದ ಮೇಲೊಂದು ಚಿತ್ರಗಳನ್ನು ಒಟ್ಟಿಗೆ ಮಾಡುತ್ತಿದ್ದರು.
ಜೊತೆಗೆ ಎಲ್ಲಾ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಈ ವಿಚಾರದಲ್ಲಿ ಯಾರೇ, ಎಂತಹ ವೇದಿಕೆಯಲ್ಲೂ ಕಾಲು ಎಳೆದರೂ ಕೂಡ ಇಬ್ಬರೂ ಯಾವುದೇ ರೀತಿಯಾಗಿ ರಿಯ್ಯಾಕ್ಟ್ ಮಾಡುತ್ತಿರಲಿಲ್ಲ. ಬದಲಿಗೆ ನಗುತ್ತಿದ್ದರು. ಆದರೆ ಈಗ ಎಲ್ಲರ ಊಹೆ, ನಿರೀಕ್ಷೆ ಎಲ್ಲವೂ ಹುಸಿಯಾಗಿದೆ.












Click it and Unblock the Notifications