Rishab Shetty: ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಭೇಟಿಯಾದ ರಿಷಬ್ ಶೆಟ್ಟಿ, ಕಾರಣವೇನು?
'ಕಾಂತಾರಾ' ಎಂದು ಅದ್ಭುತ ಸೃಷ್ಟಿಸಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. 'ಕಾಂತಾರಾ ಅಧ್ಯಾಯ ಒಂದು' ಸಿನಿಮಾಕ್ಕಾಗಿ ಕನ್ನಡಿಗರು ಸೇರಿದಂತೆ ಭಾರತೀಯ ಸಿನಿಮಾ ರಂಗವೇ ಕಾಯುತ್ತಿದೆ. ರಿಷಬ್ ಶೆಟ್ಟಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಒಂದು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
ಹೌದು... ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಇತ್ತೀಚೆಗೆ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಅವರನ್ನು ಭೇಟಿಯಾಗಿದ್ದಾರೆ. ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳ ಮನದಲ್ಲಿ ಹಲವು ಪ್ರಶ್ನೆಗಳು ಎದ್ದಿವೆ.

"ಲೆಜೆಂಡರಿ ನಟ ಮೋಹನ್ ಲಾಲ್ ಸರ್ ಅವರನ್ನು ಭೇಟಿಯಾಗಿದ್ದು ಹೆಮ್ಮೆ ಮತ್ತು ಸಂತೋಷವಾಗಿದೆ" ಎಂದು ನಟ ರಿಷಬ್ ಶೆಟ್ಟಿ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ. ರಿಷಬ್ ಶೆಟ್ಟಿ ಹಂಚಿಕೊಂಡಿರುವ ಚಿತ್ರಗಳಲ್ಲಿ ಮೋಹನ್‌ಲಾಲ್ ಗ್ರೇ ಶರ್ಟ್ ಮತ್ತು ಬಿಳಿ ಪಂಜೆ ಧರಿಸಿದ್ದಾರೆ. ರಿಷಬ್ ಶೆಟ್ಟಿ ಬಿಳಿ ಶರ್ಟ್ ಮತ್ತು ಬಿಳಿ ಪಂಚೆ, ಪ್ರಗತಿ ಶೆಟ್ಟಿ ಪಿಂಕ್ ಕಲರ್‌ನ ಲಾಂಗ್ ಕುರ್ತಾ ಸೂಟ್ ಧರಿಸಿದ್ದಾರೆ.
ಕಾಂತಾರದಲ್ಲಿ ಮೋಹನ್ ಲಾಲ್ ಬೇಕು ಎಂದ ಫ್ಯಾನ್ಸ್!
ರಿಷಬ್ ಶೆಟ್ಟಿ ಶೇರ್ ಮಾಡಿರುವ ಫೋಟೋಗಳಿಗೆ ಲೈಕ್, ಕಾಮೆಂಟ್‌ಗಳು ಹರಿದು ಬರುತ್ತಿವೆ. ಇಬ್ಬರು ಒಟ್ಟಿಗೆ ನಟಿಸಬೇಕು ಎಂದು ಫ್ಯಾನ್ಸ್ ಒತ್ತಡ ಹಾಕಿದ್ದಾರೆ. ಕಾಂತಾರ- ಅಧ್ಯಾಯ ಒಂದರಲ್ಲಿ ಮೋಹನ್ ಲಾಲ್ ನಟಿಸಿದರೆ ಚೆನ್ನಾಗಿರುತ್ತದೆ ಎಂದು ಹಲವು ಅಭಿಮಾನಿಗಳು ಕಾಮೆಂಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಮತ್ತಷ್ಟು ಜನ ರಿಷಬ್ ಶೆಟ್ಟಿ ನಿಮ್ಮ ಮುಂದಿನ ಸಿನಿಮಾಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ ಎಂದು ರಿಷಬ್ ಶೆಟ್ಟಿಗೆ ಹೇಳಿದ್ದಾರೆ. ನಟ ಮೋಹನ್ ಲಾಲ್ ಅವರ ಅಭಿಮಾನಿಗಳು ಕೂಡ ಫೋಟೋಗಳಿಗೆ ಕಾಮೆಂಟ್ ಮಾಡುತ್ತಿದ್ದು, ಇಬ್ಬರು ಒಟ್ಟಿಗೆ ನಟಿಸಿ, ಒಟ್ಟಿಗೆ ಇಬ್ಬರನ್ನು ಪರದೆ ಮೇಲೆ ನೋಡುವ ಆಸೆಯಿದೆ ಎಂದು ಹೇಳುತ್ತಿದ್ದಾರೆ. ಕನ್ನಡ ಮತ್ತು ಮಲಯಾಳಂ, ಇಂಗ್ಲೀಷ್ ಭಾಷೆಗಳಲ್ಲಿ ಕಾಮೆಂಟ್ ಮಾಡಲಾಗುತ್ತಿದೆ.
ಕಾಂತಾರ ಚಾಪ್ಟರ್-1 ನಲ್ಲಿ ಬ್ಯುಸಿಯಾದ ರಿಷಬ್ ಶೆಟ್ಟಿ
ಪ್ರಸ್ತುತ, ರಿಷಬ್ ಶೆಟ್ಟಿ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಬರುತ್ತಿರುವ 'ಕಾಂತಾರ ಚಾಪ್ಟರ್-1' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು 2022 ರ ಬ್ಲಾಕ್‌ಬಸ್ಟರ್ ಕಾಂತಾರ ಚಿತ್ರದ ಮೊದಲ ಅಧ್ಯಾಯ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಕಾಂತಾರ ಕನ್ನಡದಲ್ಲಿ ಬಿಡುಗಡೆಯಾಗಿ ಬಳಿಕ ಪ್ಯಾನ್ ಇಮಡಿಯಾ ಸಿನಿಮಾವಾಗಿದ್ದು ಇತಿಹಾಸವೆ ಸರಿ.
ಸದ್ಯ 'ಕಾಂತಾರ ಚಾಪ್ಟರ್-1' ಚಿತ್ರ ಈ ವರ್ಷ ಚಿತ್ರಮಂದಿರಕ್ಕೆ ಬರುವುದು ಸಾಧ್ಯವಿಲ್ಲ ಎನ್ನಲಾಗ್ತಿದೆ. ಈಗಾಗಲೇ ಚಿತ್ರದ ಓಟಿಟಿ ರೈಟ್ಸ್ ಕೂಡ ಮಾರಾಟವಾಗಿದ್ದು, 150 ಕೋಟಿ ರೂಪಾಯಿಗೆ ಸಿನಿಮಾ ಪೋಸ್ಟ್ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ. ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಚಿತ್ರದಲ್ಲಿ ನಟಿ ಸಪ್ತಮಿ ಗೌಡ ಮತ್ತು ನಟ ಹುಲಿ ಕಿಶೋರ್ ಅಭಿನಯಿಸುವ ಸಾಧ್ಯತೆಯಿದೆ.
ಇತ್ತ, ನಟ ಮೋಹನ್ ಲಾಲ್ ತಮ್ಮ ಮುಂದಿನ ಎರಡು ಪ್ರಾಜೆಕ್ಟ್ ಗಳಿಗೆ ರೆಡಿಯಾಗುತ್ತಿದ್ದಾರೆ. ಅವುಗಳಲ್ಲಿ ಒಂದಕ್ಕೆ ತಾತ್ಕಾಲಿಕವಾಗಿ L360 ಎಂದು ಹೆಸರಿಡಲಾಗಿದೆ. ಇದನ್ನು ಆಪರೇಷನ್ ಜಾವಾ ಖ್ಯಾತಿಯ ತರುಣ್ ಮೂರ್ತಿ ನಿರ್ದೇಶಿಸುತ್ತಿದ್ದಾರೆ. ಚಿತ್ರ ಮೇ 2024 ರಲ್ಲಿ ಬಿಡುಗಡೆಯಾಗಲಿದೆ.












Click it and Unblock the Notifications