Salman Khan: ಸಲ್ಮಾನ್ ಖಾನ್ ಕೊಂದವರಿಗೆ 25 ಲಕ್ಷ ರೂ. ಬಹುಮಾನ- ಪಾಕಿಸ್ತಾನದಿಂದ ಬಿಗ್ ಪ್ಲ್ಯಾನ್!
ಮುಂಬೈ ಜುಲೈ 2: ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆ ಯತ್ನ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರ ವಿರುದ್ಧ ಮುಂಬೈ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಈ ಚಾರ್ಜ್ ಶೀಟ್‌ನಲ್ಲಿ ಸಲ್ಮಾನ್ ಖಾನ್ ಹತ್ಯೆಗೆ ನಡೆಸಲಾಗಿದ್ದ ಸಂಚಿನ ಬಗ್ಗೆ ವಿವರಿಸಲಾಗಿದೆ. ಹಾಗಾದರೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ರೂಪಿಸಿದ್ದ ಪ್ಲ್ಯಾನ್ ಹೇಗಿತ್ತು ಎನ್ನುವುದನ್ನು ತಿಳಿಯೋಣ.

ಪಂಜಾಬ್ ಗಾಯಕ ಸಿಧು ಮೂಸೆವಾಲಾ ಅವರನ್ನ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗುಂಡಿಕ್ಕಿ ಹತ್ಯೆಗೈದಿತ್ತು. ಬಳಿಕ ಸಲ್ಮಾನ್ ಖಾನ್ ಅವರನ್ನು ಟಾರ್ಗೇಟ್ ಮಾಡಿಕೊಂಡಿದ್ದ ಗ್ಯಾಂಗ್ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದ ರೀತಿಯಲ್ಲೇ ಪ್ಲ್ಯಾನ್ ರೂಪಿಸಿತ್ತು. ಸಲ್ಮಾನ್ ಖಾನ್ ಅವರು ಪನ್ವೆಲ್ ಫಾರ್ಮ್‌ಹೌಸ್‌ನಿಂದ ಹೊರಬರಲು ಹೊರಟಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಬಳಿಕ ಮುಂಬೈ ಪೊಲೀಸರು ಕೆಲ ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಭಯಾನಕ ಸತ್ಯಗಳು ಹೊರಬಿದ್ದಿವೆ.
ಸಲ್ಮಾನ್ ಖಾನ್ ಹತ್ಯೆಗೆ ಪಾಕಿಸ್ತಾನದಿಂದ ರೈಫಲ್!
ಸಲ್ಮಾನ್ ಖಾನ್ ಹತ್ಯೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಸಲ್ಮಾನ್ ಖಾನ್ ಹತ್ಯೆಗೆ ಆರೋಪಿಗಳು ಪಾಕಿಸ್ತಾನದಿಂದ ಎಕೆ-47, ಎಕೆ-92, ಎಂ-16 ರೈಫಲ್‌ಗಳನ್ನು ಖರೀದಿಸಲು ಸಿದ್ಧತೆ ನಡೆಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

ಅಲ್ಲದೆ ಈ ಗುಂಪು ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಿದ ಜಿಗ್ನಾ ಪಿಸ್ತೂಲ್ ಅನ್ನು ಖರೀದಿಸಲು ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ. ಸಲ್ಮಾನ್ ಖಾನ್ ಅವರನ್ನು ಕೊಂದವರಿಗೆ ಬಿಷ್ಣೋಯ್ ಗ್ಯಾಂಗ್ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಮುಂಬೈ ಪೊಲೀಸರು ಚಾರ್ಜ್ ಶೀಟ್‌ನಲ್ಲಿ, ಆರೋಪಿಗಳು ಹಲವು ಶಸ್ತ್ರಾಸ್ತ್ರಗಳನ್ನು ಖರೀದಿಸುವ ಯೋಜನೆಯ ಬಗ್ಗೆ ಮಾತನಾಡಿರುವ ರೀತಿ, ಲಾರೆನ್ಸ್ ಗ್ಯಾಂಗ್ ಸಿದ್ದು ಮೂಸೆವಾಲಾ ಮಾದರಿಯಲ್ಲೇ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು ಯೋಜಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಈ ಇಡೀ ಪ್ರಕರಣದಲ್ಲಿ ಪಾಕಿಸ್ತಾನದ ಸಂಪರ್ಕ ಬೆಳಕಿಗೆ ಬಂದಿದ್ದು, ಪೊಲೀಸ್ ತನಿಖೆ ಇನ್ನುಷ್ಟು ಚುರುಕುಗೊಂಡಿದೆ.
350 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಪೊಲೀಸ್ ಗುಪ್ತಚರ ದಳದ ತನಿಖೆಯಲ್ಲಿ ಅನುಮಾನಾಸ್ಪದ ಮೊಬೈಲ್‌ನ್ನು ಪರಿಶೀಲಿಸಲಾಗಿದ್ದು, ಫೋನ್ ಟವರ್ ಇರುವ ಸ್ಥಳದ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಲಾಗಿದೆ. ಚಾರ್ಜ್ ಶೀಟ್ ಪ್ರಕಾರ, ಸಲ್ಮಾನ್ ಖಾನ್ ಅವರು ಪನ್ವೆಲ್ ಫಾರ್ಮ್‌ಹೌಸ್‌ನಿಂದ ಹೊರಬರಲು ಹೊರಟಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು.
ಪೊಲೀಸರು 350 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಇದರಲ್ಲಿ ಲಾರೆನ್ಸ್ ಗ್ಯಾಂಗ್‌ನ ಎಲ್ಲಾ 5 ಆರೋಪಿಗಳ ಹೆಸರುಗಳಿವೆ. ಇದರಲ್ಲಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ ಸಂಪೂರ್ಣ ಮಾರ್ಗವನ್ನೂ ಸೇರಿಸಲಾಗಿದೆ. ಈ ಚಾರ್ಜ್ ಶೀಟ್ ನಲ್ಲಿ ಅಜಯ್ ಕಶ್ಯಪ್, ಮಹಮೂದ್ ಖಾನ್, ರಿಜ್ವಾನ್ ಹಸನ್, ದೀಪಕ್ ಹವಾ ಸಿಂಗ್, ಗೌತಮ್ ಭಾಟಿಯಾ ಎಂಬ ಐವರು ಆರೋಪಿಗಳಿದ್ದಾರೆ.
ಸಲ್ಮಾನ್ ಖಾನ್ ಹತ್ಯೆಗೆ ಲಾರೆನ್ಸ್ ಬಿಷ್ಣೋಯ್ 25 ಲಕ್ಷ ರೂಪಾಯಿ ಬಹುಮಾನ ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳು ಸಂಪೂರ್ಣ ಸಂಚಿಗೆ ವಾಟ್ಸಾಪ್ ಗ್ರೂಪ್ ಬಳಸಿದ್ದು, ಅದರಲ್ಲಿ 15-16 ಮಂದಿ ಭಾಗಿಯಾಗಿದ್ದಾರೆ. ಆರೋಪಿಗಳಿಗೆ ಎಕೆ-47 ನೀಡಿದ ಪಾಕಿಸ್ತಾನದ ಸುಖ ಶೂಟರ್ ಮತ್ತು ದೋಗರ್ ಅವರನ್ನು ಪೊಲೀಸರು ಗುರುತಿಸಿದ್ದಾರೆ. MI16 M5 ಅನ್ನು ಆರೋಪಿಗಳಿಗೆ ಪೂರೈಸಬೇಕಿತ್ತು ಎಂದು ಮುಂಬೈ ಪೊಲೀಸರ 350 ಪುಟಗಳ ಚಾರ್ಜ್ ಶೀಟ್ನಲ್ಲಿ ಉಲ್ಳೇಖಿಸಲಾಗಿದೆ.












Click it and Unblock the Notifications