ಡಾರ್ಲಿಂಗ್ ಪ್ರಭಾಸ್ ಸಿನಿಮಾ ದಾಖಲೆ, 650 ಕೋಟಿ ಕಲೆಕ್ಷನ್!

ಒಂದು ಒಳ್ಳೆಯ ಸಿನಿಮಾ ಬಂದ್ರೆ ಪ್ರೇಕ್ಷಕರು ಕೈಬಿಡೋದಿಲ್ಲ ಅನ್ನೋದಕ್ಕೆ, ನಟ ಡಾರ್ಲಿಂಗ್ ಪ್ರಭಾಸ್ & ಪ್ರಶಾಂತ್ ನೀಲ್ ಜೋಡಿಯ 'ಸಲಾರ್' ಬೆಸ್ಟ್ ಎಕ್ಸಾಂಪಲ್ ಅಂತ ಹೇಳಬಹುದು ಅಲ್ವಾ? ಯಾಕಂದ್ರೆ ನಟ ಪ್ರಭಾಸ್ ಅವರು ಬಾಹುಬಲಿ ಬಳಿಕ ಸಾಲು ಸಾಲು ಸೋಲುಗಳನ್ನು ಕಂಡು ಬೇಸತ್ತಿದ್ದರು. ಮತ್ತೊಂದು ಕಡೆ, ಅವರ ಸಿನಿಮಾ ಕರಿಯರ್ ಉಳಿಯಲು ಸಲಾರ್ ಗೆಲುವು ಅನಿವಾರ್ಯ ಆಗಿತ್ತು. ಇದೀಗ ಆ ಎಲ್ಲಾ ಕನಸುಗಳು ನೆರವೇರಿವೆ!

ಹೌದು 'ಕೆಜಿಎಫ್-1' & 'ಕೆಜಿಎಫ್-2' ನಿರ್ಮಿಸಿ ಗಮನ ಸೆಳೆದಿದ್ದ ಹೊಂಬಾಳೆ ಸಂಸ್ಥೆ, ಕೆಲ ವರ್ಷಗಳ ಹಿಂದೆ 'ಸಲಾರ್' ಪ್ರಾಜೆಕ್ಟ್ ಕೈಗೆತ್ತಿಕೊಂಡ ದಿನವೇ ಇದು ಬ್ಲಾಕ್ ಬಸ್ಟರ್ ಎಂಬ ಮಾತು ಎಲ್ಲೆಲ್ಲೂ ಓಡಾಡಿತ್ತು. ಇದೀಗ ಆ ಮಾತು ನಿಜವಾಗಿದ್ದು, ಹೊಂಬಾಳೆ ನಿರ್ಮಾಣ ಮಾಡಿದ ಸಲಾರ್‌ಗೆ ಪ್ರೇಕ್ಷಕ ಪ್ರಭು ಫುಲ್ ಮಾರ್ಕ್ಸ್ ಕೊಟ್ಟಿದ್ದಾನೆ. ಹಾಗೂ ಬಾಕ್ಸ್ ಆಫಿಸ್ ಗಳಿಕೆಯಲ್ಲಿಯೂ 'ಸಲಾರ್' ಸಿನಿಮಾ ದೊಡ್ಡ ಮಟ್ಟಿಗೆ ಕಲೆಕ್ಷನ್ ಮಾಡಿದೆ. ಈ ಮೂಲಕ ಇತಿಹಾಸ ಸೃಷ್ಟಿಸಿದೆ ಡಾರ್ಲಿಂಗ್ ಪ್ರಭಾಸ್ ಅವರ ಸಿನಿಮಾ. ಹಾಗಾದ್ರೆ 'ಸಲಾರ್' ಸಿನಿಮಾ ಈಗ ಬಾಕ್ಸ್ ಆಫಿಸ್‌ನಲ್ಲಿ ಗಳಿಕೆ ಮಾಡಿರುವ ಹಣ ಎಷ್ಟು ಕೋಟಿ?

Salaar Star Prabhas Movie Reached 650 Crore Club

ದಕ್ಷಿಣ ಭಾರತದ ಸಿನಿಮಾಗಳ ಹೆಮ್ಮೆ

ಅಂದಹಾಗೆ 'ಸಲಾರ್' ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಸುಲಭವಾಗಿ 650 ಕೋಟಿ ರೂಪಾಯಿ ಗಡಿ ದಾಟಿದೆ. ಸಿನಿಮಾ ಬಿಡುಗಡೆ ಆಗಿ ಸುಮಾರು 12 ದಿನ ಕಳೆದಿದ್ದು, ಈಗಲೂ ಗಳಿಕೆಯ ಮೊತ್ತ ಹೆಚ್ಚಿಸಿಕೊಳ್ಳುತ್ತಿದೆ ಸಲಾರ್. ಆರಂಭದ ದಿನವೇ ಸುಮಾರು 175 ಕೋಟಿ ರೂಪಾಯಿ ಹಣ ಗಳಿಸಿದ್ದ ಸಲಾರ್, ನಂತರದ ದಿನಗಳಲ್ಲಿ ಕೂಡ ಅಬ್ಬರಿಸಿತ್ತು. ಈ ಮೂಲಕ ಸಾಲು, ಸಾಲು ಸೋಲಿನಿಂದ ಕಂಗೆಟ್ಟಿದ್ದ ನಟ ಡಾರ್ಲಿಂಗ್ ಪ್ರಭಾಸ್ ಅವರಿಗೆ ಸಲಾರ್ ಬಿಗ್ ಬ್ರೇಕ್ ನೀಡಿದೆ. ಹಾಗೇ ದಕ್ಷಿಣ ಭಾರತದ ಸಿನಿಮಾ ಕೀರ್ತಿಯನ್ನ ಕೂಡ ಮತ್ತಷ್ಟು ಮೇಲಕ್ಕೇರಿಸಿದೆ.

1000 ಕೋಟಿ ಕ್ಲಬ್‌ ಸೇರುತ್ತಾ?

ಸಲಾರ್ ನಿರ್ಮಿಸಿದ ದಾಖಲೆಗಳು ಒಂದೆರಡಲ್ಲ, ಅದ್ರಲ್ಲೂ ನೀಲ್‌ಗೆ ಮತ್ತೆ ಸಕ್ಸಸ್ ಸಿಕ್ಕಿದೆ. ಪ್ರಶಾಂತ್ ನೀಲ್ ಅವರ ಮತ್ತೊಂದು ಸಿನಿಮಾ 500 ಕೋಟಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದೆ ಈ ಹಿಂದೆ ಕೆಜಿಎಫ್-2 ಹೊಸ ದಾಖಲೆ ಬರೆದು 1000 ಕೋಟಿ ರೂಪಾಯಿ ಕ್ಲಬ್‌ಗೆ ಎಂಟ್ರಿ ಕೊಟ್ಟಿತ್ತು. ಈಗ 'ಸಲಾರ್' ಕೂಡ ಅದೇ ರೀತಿ ಸಾಧನೆ ಮಾಡಿದೆ. ಸಲಾರ್ ಚಿತ್ರವು ಭರ್ಜರಿಯಾಗಿ 650 ಕೋಟಿ ಕ್ಲಬ್ ಸೇರಿ ದಕ್ಷಿಣ ಭಾರತದ ಸಿನಿಮಾಗಳ ಶಕ್ತಿ ಪ್ರದರ್ಶನ ಮಾಡಿದೆ. ಅಲ್ಲದೆ ಇನ್ನೂ ಮುಂದೆ, ಸಲಾರ್ ಸಿನಿಮಾ 1000 ಕೋಟಿ ಕ್ಲಬ್‌ ಸೇರುತ್ತಾ? ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ.

Salaar Star Prabhas Movie Reached 650 Crore Club

ಸಲಾರ್ ಜಗತ್ತಿನಾದ್ಯಂತ 650 ಕೋಟಿಗೂ ಹೆಚ್ಚು ಕೆಲೆಕ್ಷನ್ ಮಾಡಿದ್ದರೆ ಭಾರತದಲ್ಲೇ ಸುಮಾರು 350 ಕೋಟಿಗೂ ಹೆಚ್ಚು ಗಳಿಸಿದೆ ಎನ್ನಲಾಗುತ್ತಿದೆ. ಈ ಮೂಲಕ ಕನ್ನಡಿಗರ ತೆಲುಗು ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಗಲ್ಲಾಪೆಟ್ಟಿಗೆ ಅಖಾಡದಲ್ಲೂ ಸಲಾರ್ ಸದ್ದು ಬಲು ಜೋರಾಗಿದೆ ಮತ್ತೊಂದು ಕಡೆ ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ನಟ ಪ್ರಭಾಸ್ ಅವರಿಗು ಈ ಸಿನಿಮಾ ದೊಡ್ಡ ಬ್ರೇಕ್ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+