ಡಾರ್ಲಿಂಗ್ ಪ್ರಭಾಸ್ & ಪ್ರಶಾಂತ್ ನೀಲ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ
ಸಲಾರ್ ಸಿನಿಮಾ ಎಲ್ಲೆಲ್ಲೂ ಅಬ್ಬರಿಸುತ್ತಿದೆ. ಮಾಹಿತಿಗಳ ಪ್ರಕಾರ ಈಗಾಗಲೇ ನಟ ಪ್ರಭಾಸ್ ಅವರ ಈ ಸಿನಿಮಾ 500 ಕೋಟಿ ಕ್ಲಬ್ ಸೇರಿ ಆಗಿದೆ. ಇದರ ಜೊತೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೂಡ ಹೊರಬಿದ್ದಿದೆ. ಈಗಾಗಲೇ ಸಲಾರ್ ನೋಡಿ ಮತ್ತೊಮ್ಮೆ ಸಲಾರ್ ಸಿನಿಮಾ ಕಣ್ತುಂಬಿಕೊಳ್ಳಬೇಕು ಅಂತಾ ಕಾಯುತ್ತಿದ್ದ ಫ್ಯಾನ್ಸ್‌ಗೆ. ಹಾಗೂ ಮೊದಲನೇ ಬಾರಿ ಸಲಾರ್ ನೋಡಿ ಖುಷಿ ಪಡಬೇಕು ಎಂಬ ಪ್ರಭಾಸ್ & ನೀಲ್ ಫ್ಯಾನ್ಸ್‌ಗೆ ಸಖತ್ ಸುದ್ದಿ ಸಿಕ್ಕಿದೆ.
ಯೆಸ್, ಸಲಾರ್ ಸಿನಿಮಾ ಸೆಟ್ಟಿರಿದ ಮರು ದಿನದಿಂದಲೇ ಭರ್ಜರಿ ಸದ್ದು ಮಾಡಿತ್ತು. ಇದೇ ಸಿನಿಮಾ ಮೂಲಕ ಪ್ರಭಾಸ್ ಅವರಿಗೆ ದೊಡ್ಡ ಬ್ರೇಕ್ ಸಿಗುತ್ತೆ ಅನ್ನೋ ನಂಬಿಕೆ ಕೂಡ ಎಲ್ಲೆಲ್ಲೂ ಮನೆ ಮಾಡಿತ್ತು. ಈ ಎಲ್ಲಾ ನಂಬಿಕೆ ಈಗ ನಿಜವಾಗಿದ್ದು, ಪ್ರಭಾಸ್ ಅವರ ಅಭಿಮಾನಿಗಳ ಆಸೆ ಈಡೇರಿದೆ. ಈಗಾಗಲೇ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್‌ಗೆ ಸೇರುವಲ್ಲಿ 'ಸಲಾರ್' ಸಿನಿಮಾ ದಾಪುಗಾಲು ಇಟ್ಟಿದ್ದು, ಇದೇ ಸಮಯದಲ್ಲಿ ಅಭಿಮಾನಿಗಳಿಗೂ ಸಿಹಿಸುದ್ದಿ ಕೂಡ ಸಿಕ್ಕಿದೆ. ಹಾಗಾದರೆ ಏನದು ಸಿಹಿಸುದ್ದಿ? ಮುಂದೆ ಓದಿ.

ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್?
'ಸಲಾರ್' ಬಿಗ್ ಬಜೆಟ್ ಚಿತ್ರವಾದ ಹಿನ್ನೆಲೆಯಲ್ಲಿ, ಟಿಕೆಟ್ ದರ ಕೂಡ ಸ್ವಲ್ಪ ಜಾಸ್ತಿಯೇ ಇತ್ತು. ಆದರೆ ಈಗ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಟಿಕೆಟ್ ದರದಲ್ಲಿ ಇಳಿಕೆಯನ್ನು ಮಾಡಲಾಗುವುದು ಎನ್ನಲಾಗಿದೆ. ಈ ಮೂಲಕ ಹೊಸ ವರ್ಷಕ್ಕೆ ಮುನ್ನವೇ ಅಭಿಮಾನಿಗಳು ಸಲಾರ್ ಸಿನಿಮಾ ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿದೆ. ಹೀಗಾಗಿ ಎಲ್ಲೆಲ್ಲೂ ಕನ್ನಡಿಗರೇ ನಿರ್ಮಿಸಿರುವ ತೆಲುಗು ಸಿನಿಮಾ ಸಲಾರ್ ಧೂಳೆಬ್ಬಿಸಲು ಸಜ್ಜಾಗಿದೆ. ಈಗಾಗಲೇ ಸಲಾರ್‌ಗೆ ಹಲವು ದಾಖಲೆಗಳು ಸೇರ್ಪಡೆಯಾಗಿವೆ.
ಸಲ್ಲು ಸಿನಿಮಾ ರೆಕಾರ್ಡ್ ಬ್ರೇಕ್?
ಪ್ರಭಾಸ್ ಭರ್ಜರಿ ಗೆಲುವು ಸಾಧಿಸಿದ್ದು ಪ್ರಶಾಂತ್ ನೀಲ್ ಡೈರೆಕ್ಷನ್ ಕಮಾಲ್ ಮಾಡಿದೆ. ಹೀಗೆ ಕನ್ನಡಿಗರು ಸೇರಿ ನಿರ್ಮಿಸಿರುವ 'ಸಲಾರ್' ಸಿನಿಮಾ ಬರೋಬ್ಬರಿ 500 ಕೋಟಿ ರೂಪಾಯಿಗೂ ಹೆಚ್ಚು ಹಣ ಸುಲಭವಾಗಿ ವಸೂಲಿ ಮಾಡಿದೆ ಎನ್ನಲಾಗಿದೆ. ಈ ಸಾಧನೆಯನ್ನ ಕೆಲವೇ ದಿನಕ್ಕೆ ಸಾಧಿಸಿದೆ ಕನ್ನಡಿಗರು ನಿರ್ಮಿಸಿರುವ ತೆಲುಗು ಸಿನಿಮಾ ಸಲಾರ್. ಪ್ರಭಾಸ್ ಫ್ಯಾನ್ಸ್ ಈ ಸಿನಿಮಾ ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಭಾರತದಲ್ಲೂ ಸಲಾರ್ ಚಿತ್ರ ಹಲವು ದಾಖಲೆ ಬರೆಯುತ್ತಿದೆ.

'ಸಲಾರ್-2' ಯಾವಾಗ ರಿಲೀಸ್ ಆಗುತ್ತೆ?
ಒಟ್ನಲ್ಲಿ ಸಲಾರ್ ಸಿನಿಮಾ ಅಭಿಮಾನಿಗಳಿಗೆ ಇದೀಗ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಈ ಸಮಯದಲ್ಲೇ ಸಲಾರ್-2 ಬಗ್ಗೆ ಕೂಡ ಚರ್ಚೆ ಜೋರಾಗಿದೆ. ಈಗಾಗಲೇ ದೊಡ್ಡ ಮಟ್ಟಿಗೆ ಹಿಟ್ ಪಡೆದಿರುವ ಸಲಾರ್ ಸಿನಿಮಾದ ಮುಂದುವರಿದ ಭಾಗ ನೋಡೋದಕ್ಕೆ, ಅಭಿಮಾನಿ ಬಳಗ ಕಾಯುತ್ತಿದೆ. ಇದೇ ಕಾರಣಕ್ಕೆ ಸಲಾರ್-2 ಯಾವಾಗ ರಿಲೀಸ್ ಆಗುತ್ತೆ ಅಂತಾ ಈಗ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಇದಕ್ಕೆ ಸೂಕ್ತ ಉತ್ತರ ಸಿಗುವ ಬಗ್ಗೆ ನಿರೀಕ್ಷೆಗಳು ದಟ್ಟವಾಗಿವೆ.












Click it and Unblock the Notifications