Rocking Star Yash: 2 ಅಕ್ಷರದಿಂದ ಕನ್ನಡಿಗರನ್ನು ಖುಷಿಪಡಿಸಿದ ಯಶ್!

Rocking Star Yash: ನಟ ಯಶ್ ಅವರು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಕೆಜಿಎಫ್ ಸಿನಿಮಾದ ನಂತರ ಅವರ ಹವಾ ಜೋರಾಗಿದೆ. ಕೆಜಿಎಫ್ ಸಿನಿಮಾದ ಯಶಸ್ಸಿನ ನಂತರ ಜನರಿಗೆ ನನ್ನ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಕೊಡಬೇಕು ಎಂದು ಈ ಹಿಂದೆ ರಾಕಿಂಗ್ ಸ್ಟಾರ್ ನಟ ಯಶ್ ಅವರು ಹೇಳಿದ್ದರು. ಅದರಂತೆ ಅವರು ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿಗೆ ಕೈ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟ ಯಶ್ ಅವರು ಬ್ಯೂಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ನಟ ಯಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಇಂಗ್ಲೀಷ್‌ನಲ್ಲಿ ಮಾಹಿತಿ ಹಂಚಿಕೊಳ್ಳುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಈ ನಡೆಯನ್ನು ಕನ್ನಡಿಗರು ವಿರೋಧಿಸಿದ್ದರು. ಆದರೆ ಇದೀಗ ನಟ ಯಶ್ ಅವರನ್ನು ಕನ್ನಡಿಗರನ್ನು ಖುಷಿಪಡುವಂತೆ ಮಾಡಿದ್ದಾರೆ. ಅದೂ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದೇನು ಅಂತ ನೋಡೋಣ.

ನಟ ಯಶ್ ಕನ್ನಡ ಚಿತ್ರರಂಗದಿಂದ ಹಾಲಿವುಡ್‌ನಲ್ಲಿಯೂ ಮಿಂಚುತ್ತಿದ್ದಾರೆ. ಬಹು ನಿರೀಕ್ಷಿತ ಹಾಗೂ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಪಾರ್ಟ್ 1ರ ದೇಶದಾದ್ಯಂತ ಸುದ್ದಿ ಮಾಡಿದೆ. ಇದರ ಗ್ಲಿಂಪ್ಸ್ ಬಿಡುಗಡೆ ಆಗಿದ್ದು ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿದೆ. ಇದರ ಬೆನ್ನಲ್ಲೇ ನಟ ಯಶ್ ಅವರ ಕನ್ನಡ ಪ್ರೇಮಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಯಶ್ ಅವರು ಕನ್ನಡವನ್ನು ಎಲ್ಲೆಡೆ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ವಿಚಾರವು ಭಾರೀ ಚರ್ಚೆ ಆಗುತ್ತಿದೆ. ರಾಮಾಯಣದಲ್ಲಿ ನಟ ಯಶ್ ಅವರು, ರಾವಣನಾಗಿ ಮಿಂಚುತ್ತಿದ್ದು. ಟೈಟಲ್ ಕಾರ್ಡ್‌ನಲ್ಲಿರುವ ಯಶ್ ಹೆಸರು ಭಾರೀ ಟ್ರೆಂಡ್ ಸೃಷ್ಟಿ ಮಾಡಿದೆ.

Rocking Star Yash delighted Kannadigas by signing in Kannada Ramayana Part 1 Glimpse

ಯಶ್ ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಇತ್ತೀಚೆಗೆ ಅವರ "ರಾಮಾಯಣ" ಪಾರ್ಟ್ 1 ರ ಗ್ಲಿಂಪ್ಸ್ ಬಿಡುಗಡೆ ಆಮಂತ್ರಣ ಪತ್ರಿಕೆಯಲ್ಲಿ / ಟೈಟಲ್ ಕಾರ್ಡ್‌ನಲ್ಲಿ ಬಾಲಿವುಡ್ ತಾರೆಯರು ಇಂಗ್ಲಿಷ್‌ನಲ್ಲಿ ಸಹಿ ಹಾಕಿದ್ದರೆ. ಆದರೆ ನಮ್ಮ ಯಶ್ ಅವರು ಮಾತ್ರ ಕನ್ನಡದಲ್ಲಿ ಸಹಿ ಹಾಕಿದ್ದಾರೆ. ಈ ಮೂಲಕ ಅವರು ಮಾತೃಭಾಷೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅವರ ಈ ನಡೆಯು ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆದಿದೆ. ಇದಕ್ಕೆ ಕನ್ನಡಿಗರು ಖುಷಿಯಾಗಿದ್ದಾರೆ.

ನಾಗರಾಜ್ ಎನ್ನುವವರು, ಕರುನಾಡಿಂದ ಹೊರಗೆ ಹೋಗಿ ಹೆಸರು ಹಣ ಸಂಪಾದನೆ ಮಾಡುವುದು ತಪ್ಪಲ್ಲ. ಆದರೆ, ಬೆಳೆಸಿದ ಕರುನಾಡನ್ನು ಮರೆಯುವುದು ತಪ್ಪು ಇಂಥ ತಪ್ಪುಗಳನ್ನು ಅನೇಕ ಜನರು ಮಾಡುತ್ತಿರುತ್ತಾರೆ. ಆದರೆ ಯಶ್ ಅವರಂತಹ ಕೆಲವೊಬ್ಬರು ಮಾತ್ರ ಅಲ್ಲಿಯೂ ಕನ್ನಡದ ಬಾವುಟ ಹಾರಿಸುತ್ತಾರೆ ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಹಾಗೂ ಕನ್ನಡಿಗರ ಬಗ್ಗೆ ಬೇರೆಯವರು ಗೌರವ ನೀಡುವುದಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.

ಸಹಿ ಬಗ್ಗೆ ವಿಮರ್ಶೆ: ಇನ್ನು ಇದರಲ್ಲೂ ಕೆಲವರು ಮೊಸರಿನಲ್ಲಿ ಕಲ್ಲು ಹುಡುಕಿದರು ಎನ್ನುವಂತೆ ಇದು ನಿಜವಾಗಿಯೂ ಕನ್ನಡ ಸಹಿನಾ ಇಲ್ಲ ತೆಲುಗು ಭಾಷೆದಾ ಅಂತಿದ್ದಾರೆ. ವಸುದೇವ್‌ ಎನ್ನುವವರು, ಇದು ಯಾವ ಕಡೆಯಿಂದ ಕನ್ನಡತರ ಕಾಣಿಸುತ್ತಿದೆ ಅಂತ ಕೇಳಿದರೆ. ಭಾಸ್ಕರ್ ರಾವ್ ಎನ್ನುವವರು, ಒಂದು ಸಹಿಯಲ್ಲಿ ಸ್ಪಷ್ಟ ಅಕ್ಷರಗಳನ್ನು ಹುಡುಕುತ್ತಿರುವ ಕನ್ನಡಿಗರು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+