38ನೇ ಹುಟ್ಟುಹಬ್ಬಕ್ಕೆ, ಯಶ್‌ಗೆ ವಿಶ್ ಮಾಡಿದವರು ಯಾರ‍್ಯಾರು?
'ಕೆಜಿಎಫ್' ಕ್ಯಾಪ್ಟನ್ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಸಂಭ್ರಮ ಎಲ್ಲೆಲ್ಲೂ ಮೊಳಗಿದೆ. ಕನ್ನಡಿಗ ಯಶ್ ಅವರಿಗೆ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿಗಳು ಇದ್ದು, ಭರ್ಜರಿಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಸಿನಿಮಾ ರಂಗದ ದೊಡ್ಡ ದೊಡ್ಡ ನಟರು ಕೂಡ ರಾಕಿಭಾಯ್ ಯಶ್‌ಗೆ ವಿಶ್ ಮಾಡಿದ್ದಾರೆ. ಅದ್ರಲ್ಲೂ ನಮ್ಮ ಶಿವಣ್ಣ ಮಾಡಿರುವ ವಿಶ್ ಸಿಕ್ಕಾಪಟ್ಟೆ ಸರ್ಪ್ರೈಸಿಂಗ್ ಆಗಿದೆ.
ಯಶ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಸ್ಟಾರ್ ಕೂಡ ಆಗಿ ಬೆಳೆದಿದ್ದಾರೆ. ರಾಕಿಭಾಯ್ ಹವಾ ಪೂರ ಪಶ್ಚಿಮ ತೀರಕ್ಕೆ ಮಾತ್ರ ಅಲ್ಲ ಇಡೀ ಜಗತ್ತಿನಲ್ಲೇ ಸದ್ದು ಮಾಡುತ್ತಿದೆ. ಹೀಗಿದ್ದಾಗ ತಮ್ಮ ಪ್ರೀತಿಯ ನಟನ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಸುಮ್ಮನೆ ಕೂರಲು ಆಗುತ್ತಾ? ಇಲ್ಲ ಇಲ್ಲ ಇದೇ ಕಾರಣಕ್ಕೆ ಅಭಿಮಾನಿಗಳು ಯಶ್ ಅವರಿಗೆ ವೆರೈಟಿ, ವೆರೈಟಿ ವಿಶ್ ಮಾಡುತ್ತಿದ್ದಾರೆ. ಇದರ ಜೊತೆಗೆ ಚಿತ್ರರಂಗದ ಹಿರಿಯ ನಟರು ಕೂಡ ಯಶ್ ಅವರಿಗೆ ಶುಭಾಶಯ ಕೋರಿ, ಶುಭ ಹಾರೈಸಿದ್ದಾರೆ. ಹಾಗಾದರೆ ಯಾರು ಯಾರು ಯಶ್‌ಗೆ ವಿಶ್ ಮಾಡಿದ್ರು? ಮುಂದೆ ಓದಿ.

ಯಶ್‌ಗೆ ಶಿವಣ್ಣನ ವಿಶ್ ಹೇಗಿತ್ತು?
ರಾಕಿಂಗ್ ಸ್ಟಾರ್ ಯಶ್ ಅವರಿಗೆ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸ್ಪೆಷಲ್ ವಿಶ್ ಮಾಡಿದ್ದಾರೆ. ಯಶ್ ಹುಟ್ಟುಹಬ್ಬಕ್ಕೆ ಮೊದಲೇ ಸಿಡಿಪಿ ಅಂದ್ರೆ ಕಾಮನ್ ಡಿಪಿ ಪಿಕ್ಚರ್ ರಿಲೀಸ್ ಮಾಡಿದ್ದ ಶಿವಣ್ಣ, ಇಂದು ಬೆಳಗ್ಗೆಯೆ ನಟ ಯಶ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿಕೆ ಕಳುಹಿಸಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಯಶ್' ಎಂದು ಸೆಂಚುರಿ ಸ್ಟಾರ್ ಶಿವಣ್ಣ ಅಪ್ಪಟ ಕನ್ನಡದಲ್ಲಿ ಶುಭಾಶಯ ಕೋರಿದ್ದಾರೆ. ನಟ ಯಶ್ ಅವರನ್ನ ಈ ಟ್ವೀಟ್ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿರುವ ಶಿವಣ್ಣ, ಯಶ್ ಜೊತೆಗಿನ ಫೋಟೊ ಕೂಡ ಹಾಕಿದ್ದಾರೆ.
ಹುಟ್ಟುಹಬ್ಬದ ಶುಭಾಶಯಗಳು @thenameisyash #HappyBirthday pic.twitter.com/iDkH3KEdXC
— DrShivaRajkumar (@NimmaShivanna) January 8, 2024
ರವಿಶಂಕರ್ ವಿಶ್ ಹೇಗಿತ್ತು ಗೊತ್ತಾ?
ಹಾಗೆ ಕನ್ನಡದ ಖ್ಯಾತ ನಟ ರವಿಶಂಕರ್ ಕೂಡ ಸ್ನೇಹಿತ ಯಶ್ ಅವರಿಗೆ ವಿಶ್ ಮಾಡಿದ್ದಾರೆ. ಈ ಬಗ್ಗೆ ರವಿಶಂಕರ ಗೌಡ ಟ್ವೀಟ್ ಪೋಸ್ಟ್ ಹಾಕಿದ್ದಾರೆ. 'ಜನುಮ ದಿನದ ಶುಭಾಶಯಗಳು ಪ್ರೀತಿಯ ನವೀನ 💐💐🤗 ಪೂಜ್ಯ ಕನ್ನಡಿಗರ ಆಶೀರ್ವಾದದೊಂದಿಗೆ ನಿಮ್ಮ ಮುಂದಿನ ಎಲ್ಲಾ ಕಾರ್ಯಗಳಿಗೂ ಜಯ ಸಿಗಲಿ...❤👍' ಎಂದು ಶುಭ ಕೋರಿದ್ದಾರೆ. ಈಗ ಈ ಟ್ವೀಟ್ ಕೂಡ ವೈರಲ್ ಆಗುತ್ತಿದೆ.

ಜನುಮ ದಿನದ ಶುಭಾಶಯಗಳು ಪ್ರೀತಿಯ ನವೀನ 💐💐🤗
— ರವಿಶಂಕರ ಗೌಡ (@RavishankarGow5) January 8, 2024
ಪೂಜ್ಯ ಕನ್ನಡಿಗರ ಆಶೀರ್ವಾದದೊಂದಿಗೆ ನಿಮ್ಮ ಮುಂದಿನ ಎಲ್ಲಾ ಕಾರ್ಯಗಳಿಗೂ ಜಯ ಸಿಗಲಿ...❤👍
💐🤗💐🤗💐🤗💐🤗@TheNameIsYash pic.twitter.com/YGQg0A11WZ
ಬಾಸ್‌ಗೆ ಶುಭಕೋರಿದ ಕೆಜಿಎಫ್ ಗರುಡಾ ರಾಮ್!
ಹಾಗೇ ಮತ್ತೊಂದು ಕಡೆ ಕೆಜಿಎಫ್ ನಟ ಗರುಡಾ ರಾಮ್ ಕೂಡ ತಮ್ಮ ಪ್ರೀತಿಯ ನಟನಿಗೆ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಗರುಡಾ ರಾಮ್, 'Happy Birthday to the most inspiring person our Rocking star Yash boss.. You have been my strength my source of inspiration today and always ..May this Birthday be the start of new chapter with infinite possibilities and boundless happiness Love you Boss❤️ @TheNameIsYash' ಎಂದು ಟ್ವೀಟ್ ಮಾಡಿದ್ದಾರೆ.
Happy Birthday to the most inspiring person our Rocking star Yash boss.. You have been my strength my source of inspiration today and always ..May this Birthday be the start of new chapter with infinite possibilities and boundless happiness Love you Boss❤️ @TheNameIsYash pic.twitter.com/ANsP4ZjZNz
— Garuda Ram (@GarudaRaam) January 8, 2024
ಕೆಜಿಎಫ್ ಖಳನಟ ಆಂಡ್ರ್ಯೂಸ್ ಹೇಳಿದ್ದೇನು?
ಹಾಗೇ ಮತ್ತೊಂದು ಕಡೆ ಕೆಜಿಎಫ್ ಸಿನಿಮಾದಲ್ಲಿ, ಆಂಡ್ರ್ಯೂಸ್ ಪಾತ್ರದಲ್ಲಿ ಮಿಂಚಿರುವ. ಕನ್ನಡಿಗರ ಅವಿನಾಶ್ ಕೂಡ ರಾಕಿಂಗ್ ಸ್ಟಾರ್ ಯಶ್‌ಗೆ ವಿಶ್ ಮಾಡಿದ್ದಾರೆ. ಈ ಕುರಿತಾಗಿ, ನಟ ಅವಿನಾಶ್ ಟ್ವೀಟ್ ಮಾಡಿದ್ದು, 'Happy Birthday To The Indomitable Spirit we so lovingly know as #RockingStarYash. In all your years, one thing that you've constantly knowingly or unknowingly made us all believe is that there are no men like you, only you. #HappyBirthdayYash #HBDRockingStarYash #Yash #Toxic' ಅಂತಾ ವಿಶ್ ಮಾಡಿದ್ದಾರೆ.
Happy Birthday To The Indomitable Spirit we so lovingly know as #RockingStarYash.
— Avinash (@andrews_avinash) January 8, 2024
In all your years, one thing that you’ve constantly knowingly or unknowingly made us all believe is that there are no men like you, only you. #HappyBirthdayYash #HBDRockingStarYash #Yash #Toxic pic.twitter.com/wo3D52vFf2
ಒಟ್ನಲ್ಲಿ ದೇಶದ ಮೂಲೆ ಮೂಲೆಯಲ್ಲೂ ಕನ್ನಡಿಗ ಯಶ್ ಅವರ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಮತ್ತು ನಟ & ನಟಿಯರು ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. ಈ ಮೂಲಕ ಯಶ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆ ಕಳುಹಿಸಿದ್ದಾರೆ. ಅಲ್ಲದೆ ಈ ನಟ ಮತ್ತಷ್ಟು ಎತ್ತರ ಬೆಳೆಯಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications