ರಕ್ಷಿತ್ ಶೆಟ್ಟಿ & ರಿಷಬ್ ಶೆಟ್ಟಿ ನಡುವೆ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಸ್ಫೋಟಕ ಹೇಳಿಕೆ... Rishab Shetty
ಕನ್ನಡ ಸಿನಿಮಾ ರಂಗದಲ್ಲಿ ಗುಂಪುಗಳು ಬೆಳೆದಿವೆ, ಕನ್ನಡ ಸಿನಿಮಾ ಇಂಡಸ್ಟ್ರಿ ಡಿವೈಡ್ ಆಗಿದೆ... ಹೀಗೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಬೆಂಕಿ ಹಚ್ಚುವ ಕಿಡಿಗೇಡಿಗಳಿಗೆ ಕೊರತೆ ಏನು ಇಲ್ಲ. ಈ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ ಕೆಲವು ಕಿಡಿಗೇಡಿಗಳು. ಹೀಗೆಲ್ಲಾ ವದಂತಿ ಹಬ್ಬಿಸುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುವುದೇ ಅವರ ಉದ್ದೇಶವಾಗಿದೆ. ಇದೇ ರೀತಿಯಾಗಿ ರಕ್ಷಿತ್ ಶೆಟ್ಟಿ & ರಿಷಬ್ ಶೆಟ್ಟಿ ನಡುವೆ ಬಿರುಕು ಮೂಡಿದೆ ಅನ್ನೋ ಸುದ್ದಿಯನ್ನ ಕೂಡ ಹಬ್ಬಿಸಲಾಗಿತ್ತು. ಹಾಗಾದ್ರೆ ಇದು ನಿಜಾನಾ? ಬನ್ನಿ ಪ್ರಮೋದ್ ಶೆಟ್ಟಿ ಅವರು ಹೇಳಿದ್ದೇನು ಅಂತಾ ಈಗ ಓದೋಣ.
ಹೌದು, ರಕ್ಷಿತ್ ಶೆಟ್ಟಿ & ರಿಷಬ್ ಶೆಟ್ಟಿ ಇಬ್ಬರೂ ಕಷ್ಟಪಟ್ಟು ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಯನ್ನ ಕೊಟ್ಟಿದ್ದರು. ಅದರಲ್ಲೂ ರಕ್ಷಿತ್ ಶೆಟ್ಟಿ & ರಿಷಬ್ ಶೆಟ್ಟಿ ಸಿನಿಮಾ ಮಾಡಲು ಶುರು ಮಾಡಿದ್ದಾಗ ನೂರಾರು ಸಂಕಷ್ಟಗಳು ಎದುರಾಗಿದ್ದವು. ಇದೆಲ್ಲವನ್ನೂ ಒಟ್ಟಾಗಿ ಎದುರಿಸಿ ನಿಂತು ಅವರು ಈ ಹಂತಕ್ಕೆ ಬೆಳೆದಿದ್ದಾರೆ. ಆದರೆ ಅವರ ಬೆಳವಣಿಗೆ ಸಹಿಸಲು ಆಗದ ಕೆಲವರು ಮಾಡುತ್ತಿರುವ ಕೆಲಸ ಮಾತ್ರ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಕೋಪ ತರಿಸುತ್ತಿದೆ. ಇದೇ ರೀತಿಯಾಗಿ ರಕ್ಷಿತ್ ಶೆಟ್ಟಿ & ರಿಷಬ್ ಶೆಟ್ಟಿ ನಡುವೆ ಬಿರುಕು ಮೂಡಿದೆ ಅನ್ನೋ ಸುದ್ದಿಯನ್ನೂ ಹಬ್ಬಿಸಲಾಗಿತ್ತು...

ಪ್ರಮೋದ್ ಶೆಟ್ಟಿ ಸ್ಫೋಟಕ ಹೇಳಿಕೆ!
ಅಂದಹಾಗೆ ರಕ್ಷಿತ್ ಶೆಟ್ಟಿ & ರಿಷಬ್ ಶೆಟ್ಟಿ ನಡುವೆ ಬಿರುಕು ಮೂಡಿದೆ ಅನ್ನೋ ಸುದ್ದಿ ಹಬ್ಬಿಸುವ ಕಿಡಗೇಡಿಗಳಿಗೆ ಈಗ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ ಪ್ರಮೋದ್ ಶೆಟ್ಟಿ ಅವರು. ಈ ಮೂಲಕ ಬಾಯಿಗೆ ಬಂದಂತೆ ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರ ನಡುವೆ ತಂದಿಡುವ ಕೆಲಸ ಮಾಡುವವರಿಗೆ ಸರಿಯಾದ ಎಚ್ಚರಿಕೆ ಸಂದೇಶ ಕೂಡ ಹೀಗೆ ಕೊಟ್ಟಿದ್ದಾರೆ ನಟ ಪ್ರಮೋದ್ ಶೆಟ್ಟಿ ಅವರು.
ಅತಿ ಶೀಘ್ರದಲ್ಲೇ ಸೆಲ್ಫಿ ಗ್ಯಾರಂಟಿ?
ಅಂದಹಾಗೆ ಬಿಯಾಂಡ್ ಲಿಮಿಟ್ಸ್ ಯುಟ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಖಡಕ್ ಆಗಿ ಮಾತನಾಡಿರುವ ನಟ ಪ್ರಮೋದ್ ಶೆಟ್ಟಿ ಅವರು, ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರ ಸ್ನೇಹ ಈಗಲೂ ಗಟ್ಟಿಯಾಗೇ ಇದೆ. ಆದರೆ ಕೆಲವರು ಇಲ್ಲಿ ತಂದಿಡುವ ಕೆಲಸ ಮಾಡುತ್ತಾ ಇದ್ದಾರೆ, ರಕ್ಷಿತ್ ಶೆಟ್ಟಿ ಅವರು ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಮಯದಲ್ಲಿ ಇಲ್ಲಸಲ್ಲದ ಸುದ್ದಿ ಹಬ್ಬಿಸುವವರು ಜಾಸ್ತಿ ಆಗಿದ್ದಾರೆ ಎಂಬುದನ್ನ ತಿಳಿಸಿದ್ದಾರೆ ನಟ ಪ್ರಮೋದ್ ಶೆಟ್ಟಿ. ಅಲ್ಲದೆ ಅತಿ ಶೀಘ್ರದಲ್ಲೇ ನಾವೆಲ್ಲಾ ಸ್ನೇಹಿತರು ಒಟ್ಟಿಗೆ ಸೇರಿ ಒಂದು ಸೆಲ್ಫಿಗೆ ಪೋಸ್ ಕೊಡ್ತೀವಿ ಎನ್ನುವ ಮೂಲಕ ವಿರೋಧಿಗಳು ಹಾಗೂ ಸುಳ್ಳು ಸುದ್ದಿ ಹಬ್ಬಿಸುವ ಕಿಡಿಗೇಡಿಗಳ ಬಾಯಿ ಮುಚ್ಚಿಸಿದ್ದಾರೆ.
ಸಾಲು ಸಾಲು ಸಿನಿಮಾಗಳು ಬರಲಿವೆ...
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಕನ್ನಡ ಸಿನಿಮಾ ಅಭಿಮಾನಿಗಳು ಮಾತ್ರ ಸಿನಿಮಾ ಮೆಚ್ಚುತ್ತಾರೆ ಹೊರತು ಬೇರೆ ಯಾವುದರ ಬಗ್ಗೆ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಕೆಲವರು ಬೇಕು ಬೇಕು ಅಂತಾ ಈ ರೀತಿಯಾಗಿ ಕನ್ನಡ ಸಿನಿಮಾ ರಂಗದಲ್ಲಿ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಇದೆಲ್ಲವನ್ನು ಮೀರಿ ಇದೀಗ ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾ ಬಹು ನಿರೀಕ್ಷಿತ ರಿಚರ್ಡ್ ಆಂಟನಿ ನೋಡಲು ಕೋಟ್ಯಂತರ ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಮತ್ತೊಂದು ಕಡೆ ರಿಷಬ್ ಶೆಟ್ಟಿ ಅವರು ಕೂಡ ಕಾಂತಾರ ಮುಂದಿನ ಭಾಗಕ್ಕೆ ಸಿದ್ಧವಾಗುತ್ತಿದ್ದು, ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿದ್ದಾಗ ಸುಖಾಸುಮ್ಮನೆ ಸೋಷಿಯಲ್ ಮೀಡಿಯಾಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ












Click it and Unblock the Notifications