ಎರಡು ಕುಟುಂಬಗಳನ್ನು ಮತ್ತೆ ಸರಿ ಪಡಿಸಲು ರಾಯನ್‌ ಬರಬೇಕಾಯಿತು- ಮೇಘನಾ ರಾಜ್‌

ಕನ್ನಡ ಚಿತ್ರರಂಗದ ಯುವ ಸಾಮ್ರಾಟ್‌ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಪುತ್ರ ರಾಯನ್ ರಾಜ್‌ ಸರ್ಜಾ ಅಂದರೆ ಇಡೀ ಕರ್ನಾಟಕಕ್ಕೆ ಒಂದು ರೀತಿಯಾದ ಸೆಲೆಬ್ರೆಷನ್‌. ಚಿರು ಅಗಲಿದ ನಂತರ ದುಃಖ ಸಾಗರದಲ್ಲಿ ಮುಳುಗಿದ್ದ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಹೊಸ ಬೆಳಕಾಗಿ ಬಂದವನೇ ರಾಯನ್ ರಾಜ್‌ ಸರ್ಜಾ. ಹೆಸರಿಗೆ ತಕ್ಕಂತೆ ಯುವ ರಾಜ.

ರಾಯನ್ ರಾಜ್‌ ಸರ್ಜಾ ಬಂದ ಮೇಲೆ ಬದುಕು ಹೇಗೆ ಬದಲಾಯಿತು ಎನ್ನುವುದರ ಬಗ್ಗೆ ನಟಿ ಮೇಘನಾ ರಾಜ್‌ ಅನೇಕ ಬಾರಿ ಮಾತನಾಡಿದ್ದಾರೆ. ಇದೀಗ ಮೊದಲ ಬಾರಿಗೆ ರಾಯನ್‌ ಬಂದ ಮೇಲೆ ಎರಡೂ ಕುಟುಂಬಗಳು ಮತ್ತೆ ಒಂದಾದ ಬಗ್ಗೆ ಮೇಘನಾ ರಾಜ್‌ ಮಾತನಾಡಿದ್ದಾರೆ.

Rayan Raj Sarja Unites Both Meghana Raj And Chiranjeevi Sarja Families in After Tragedy

ಗೋಲ್ಡ್‌ ಕ್ಲಾಸ್‌ ವಿತ್‌ ಮಯೂರ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ನನ್ನ ಪ್ರಕಾರ ರಾಯನ್ ನಮ್ಮ ಫ್ಯಾಮಿಲಿಯಲ್ಲಿ glue ಇದ್ದ ಹಾಗೆ. ರಾಯನ್‌ ಬಂದ ಮೇಲೆ ತುಂಬಾ ಬದಲಾವಣೆ ಆಯ್ತು ಕುಟುಂಬದಲ್ಲಿ. ನಾವು ಮೊದಲಿದ್ದಕ್ಕಿಂತ ಇನ್ನಷ್ಟು ಹೆಚ್ಚು ಕ್ಲೋಸ್‌ ಆದೆವು. ಅಲ್ಲಿಯವರೆಗೂ ತುಂಬಾ ಗೊಂದಲ ಇತ್ತು. ಚಿರು ಅಗಲಿದ ಮೇಲೆ ರಾಯನ್ ಬರುವ ತನಕ ಎಲ್ಲರೂ ಸಂಬಂಧಗಳನ್ನು ಹೊಂದಾಣಿಕೆ ಮಾಡಿಕೊಳ್ಳಲು ಸೆಣಸಾಡುತ್ತಿದ್ದೇವು. ಪರಿಸ್ಥಿತಿ ಸಹ ಹಾಗಿತ್ತು. ಇಲ್ಲಿ ಯಾರನ್ನೂ ದೂರುವುದಿಲ್ಲ. ಅಂತಹ ಸಮಯದಲ್ಲಿ ಅಂತಹ ಪರಿಸ್ಥಿತಿ ಸಾಮಾನ್ಯ. ರಾಯನ್‌ ಬಂದ ಅಂದ ತಕ್ಷಣ ನಾವೆಲ್ಲರೂ ಒಂದಾದೆವು. ರಾಯನ್ ಎಂಟ್ರಿ ಆಗಿದ ತಕ್ಷಣ ಫ್ಯಾಮಿಲಿಯಲ್ಲಿ ಸೆಲೆಬ್ರೆಷನ್ ಶುರುವಾಯಿತು' ಎಂದರು.

ಇನ್ನು 'ರಾಯನ್ ಸೇಮ್ ಚಿರು ತರನೇ. ಚಿರು ರೀತಿ ರಾಯನ್ ಝೋನ್ ಔಟ್ ಆಗುತ್ತಾನೆ. ನಾನು ಮಾತನಾಡುತ್ತಿರುತ್ತೀನಿ.. ಮಾತನಾಡುತ್ತಿರುತ್ತೀನಿ.. ಆದರೆ ಅವನ ಗಮನ ಅವನು ಮಾಡುವ ಕೆಲಸದ ಮೇಲೆಯೇ ಇರುತ್ತದೆ. ಅದು ನನಗೆ ಚಿರು ಅವರನ್ನು ನೆನಪಿಸುತ್ತದೆ. ಯಾಕೆಂದರೆ ಚಿರು ಅವರ ಹತ್ತಿರ ಕೂಡ ನಾನು ಮಾತನಾಡುತ್ತಲೇ ಇರುತ್ತದೆ, ಅಲ್ಲಿ ಹೋಗಬೇಕು, ಇಲ್ಲಿ ಹೋಗಬೇಕು ಅಂತಾನೇ ಇರುತ್ತಿದೆ. ಆಗ ಚಿರು ಟಿವಿ ನೋಡುತ್ತಿದ್ದರೇ ಅದರಲ್ಲೇ ಮುಳುಗಿರುತ್ತಿದ್ದರು. ನನ್ನ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಇವನು ಕೂಡ ಹಾಗೆ ಇದ್ದಾನೆ' ಎಂದರು.

Rayan Raj Sarja Unites Both Meghana Raj And Chiranjeevi Sarja Families in After Tragedy

'ಮತ್ತೊಂದು ವಿಚಾರ ಅಂದರೆ ರೆಡಿಯಾಗಲು ತುಂಬಾ ಸಮಯ ತೆಗೆದುಕೊಳ್ಳುವುದು. ರಾಯನ್ ರೆಡಿ ಆಗು ಸ್ನಾನ ಮಾಡಿಸುತ್ತೀನಿ ಬಾ ಅಂದರೆ ಇರು ಐದು ನಿಮಿಷ ಅಂತಾನೆ. ಆ ಐದು ನಿಮಿಷ ಎನ್ನುವುದು ಚಿರುದು. ಚಿರು ಕೂಡ ಯಾವುದೇ ಕೆಲಸ ಕೇಳಿದರು 5 ನಿಮಿಷ ಕುಟ್ಟಿಮಾ ಎನ್ನುತ್ತಿದ್ದರು. 5 ನಿಮಿಷ ಹೊಗುತ್ತೇನೆ, 5 ನಿಮಿಷ ಬರುತ್ತೇನೆ, ಎನ್ನುತ್ತಿದ್ದರು. ಇವನು ಕೂಡ ಹಾಗೆ' ಎಂದು ರಾಯನ್ ಹಾಗೂ ಚಿರು ನಡುವೆ ಇರುವ ಸಾಮ್ಯತೆ ಬಗ್ಗೆ ಮಾತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+