ಕಮಲ್ ಹಾಸನ್ ಬೆನ್ನಲ್ಲೇ ತಮಿಳಿಗರಿಗೆ ರಶ್ಮಿಕಾ ಮಂದಣ್ಣ ಬಕೆಟ್!
ನಟಿ ರಶ್ಮಿಕಾ ಮಂದಣ್ಣ ಅವರು ಮತ್ತೊಮ್ಮೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಅಂತ ನಟ ಕಮಲ್ ಹಾಸನ್ ಅವರು ಹೇಳಿದ್ದು. ಈ ವಿವಾದಾತ್ಮಕ ಹೇಳಿಕೆಗೆ ನಟ ಕಮಲ್ ಹಾಸನ್ ಅವರು ಇನ್ನೂ ಕ್ಷಮೆ ಕೇಳಿಲ್ಲ. ಈ ಬಗ್ಗೆ ಕನ್ನಡಿಗರಿಗೆ ಇನ್ನೂ ಕೋಪವಿದೆ. ಈ ರೀತಿ ಇರುವಾಗ ನಮ್ಮ ಮನೆಯ ಹುಡುಗಿ ಅಂತಲೇ ಗುರುತಿಸುವ ನಟಿ ರಶ್ಮಿಕಾ ಮಂದಣ್ಣ ಅವರು ಪಕ್ಕದ ಮನೆಯವರನ್ನು ಮೆಚ್ಚಿಸುವುದಕ್ಕೆ ಹೋಗಿ ಮತ್ತೆ ಕನ್ನಡಿಗರ ಕೋಪಕ್ಕೆ ಕಾರಣರಾಗಿದ್ದಾರೆ. ಈಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರು ನಾನು ಹೈದರಾಬಾದ್‌ನವಳು ಅಂತ ಹೇಳಿಕೊಳ್ಳುವ ಮೂಲಕ ಟ್ರೋಲ್‌ಗೆ ಗುರಿಯಾಗಿದ್ದರು. ಇದೀಗ ಮತ್ತೊಮ್ಮೆ ನಾನು ಕಲಿತದ್ದು ಇದೇ ಭಾಷೆ ಅಂತ ಹೇಳುವ ಮೂಲಕ ಕನ್ನಡ - ತಮಿಳು ಭಾಷಾ ವಿವಾದದ ಸಂದರ್ಭದಲ್ಲಿಯೇ ಕನ್ನಡಿಗರಿಗೆ ಮುಜುಗರವನ್ನು ತಂದಿದ್ದಾರೆ.
ನಟ ಕಮಲ್ ಹಾಸನ್ ಅವರು ಇಲ್ಲಿಯ ವರೆಗೆ ತಮಿಳು - ಕನ್ನಡ ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಕ್ಷಮೆ ಕೇಳಿಲ್ಲ. ಈಗಾಗಲೇ ಈ ಪ್ರಕರಣ ನಡೆದು ಎರಡು ವಾರಗಳೇ ಆಗುತ್ತಿವೆ. ಎರಡು ವಾರಗಳಾದರೂ ಕಮಲ್ ಹಾಸನ್ ಇನ್ನೂ ಕ್ಷಮೆ ಕೇಳಿಲ್ಲ. ಈಗ ಅವರು ಕ್ಷಮೆ ಕೇಳಿದರೂ ಅದನ್ನು ಸ್ವೀಕರಿಸುವ ಹಂತದಲ್ಲಿ ಕನ್ನಡಿಗರು ಇಲ್ಲ. ಕಾಡಿಬೇಡಿ ಕ್ಷಮೆ ಕೇಳಿಸಿಕೊಳ್ಳುವಂತೆ ಆಗಬಾರದು ಅವರೇ ಘನತೆಯಿಂದ ಕ್ಷಮೆ ಕೇಳಬೇಕಿತ್ತು. ಅವರು ಅದನ್ನು ಬಿಟ್ಟು ಅನ್ಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ಕನ್ನಡಿಗರು ಕೋಪಗೊಂಡಿದ್ದಾರೆ. ಈ ರೀತಿ ಇರುವಾಗಲೇ ನಟಿ ರಶ್ಮಿಕಾ ಮಂದಣ್ಣ ಅವರು ತಮಿಳುನಾಡಿನಲ್ಲಿ ಹೋಗಿ ಮಾತನಾಡಿರುವುದು ಟ್ರೋಲ್‌ಗೆ ಕಾರಣವಾಗಿದೆ.

ತಮಿಳುನಾಡಿನ ರಾಜಧಾನಿ ಚೆನ್ನೈನ ಮೇಲೆ ಇರುವ ಅಭಿಮಾನವನ್ನು ರಶ್ಮಿಕಾ ಮಂದಣ್ಣ ಅವರು ತೋರಿಸಿಕೊಂಡಿದ್ದು ಇದು ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ರಶ್ಮಿಕಾ ಈ ರೀತಿ ಬೇರೆ ರಾಜ್ಯ ಹಾಗೂ ಸಿಟಿಗಳ ಬಗ್ಗೆ ಮಾತನಾಡಿರುವುದು ಇದೇ ಮೊದಲೇನು ಅಲ್ಲ. ಕೆಲವೇ ತಿಂಗಳುಗಳ ಹಿಂದೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಬಗ್ಗೆ ಅವರು ಕೊಟ್ಟಿದ್ದ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ನಾನು ಹೈದರಾಬಾದ್‌ನವಳು ಅಂತ ಅವರು ಹೇಳಿದ್ದರು. ಇದೀಗ ರಶ್ಮಿಕಾ ಮಂದಣ್ಣ ಅವರು ತಮಿಳಿನ ನಟ ಧನುಷ್ ಅವರೊಂದಿಗೆ ಕುಬೇರ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇದೇ ಜೂನ್ 20ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರ ಜೋರಾಗಿ ನಡೆದಿದ್ದು, ರಶ್ಮಿಕಾ ಅವರು ಚೆನ್ನೈ ಪ್ರೇಮವನ್ನು ಮೆರೆದಿದ್ದಾರೆ. ಅಲ್ಲದೇ ನಾನು ಮೊದಲು ಕಲಿತ ಭಾಷೆ ತಮಿಳು ಅಂತ ಹೇಳಿದ್ದಾರೆ!
ಚಿತ್ರದ ಪ್ರಚಾರದ ಭಾಗವಾಗಿ ಕೆಲವು ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು. ತಮಿಳುನಾಡಿನ ಬಗ್ಗೆ ಪ್ರೀತಿ ತೋರಿಸಿದ್ದಾರೆ. ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್‌ನಲ್ಲಿ ಕುಬೇರ ಚಿತ್ರದ ಪ್ರಚಾರವನ್ನು ಚೆನ್ನೈನಲ್ಲಿ ಆರಂಭಿಸಿದ್ದೇವೆ. ನನ್ನ ಬಾಲ್ಯವನ್ನು ನಾನು ಇಲ್ಲಿಯೇ ಕಳೆದಿದ್ದೆ. ಹೀಗಾಗಿ ನನ್ನ ಹೃದಯದಲ್ಲಿ ಚೆನ್ನೈಗೆ ವಿಶೇಷವಾದ ಸ್ಥಾನವಿದೆ. ನನಗೆ ಈ ಬಗ್ಗೆ ಖುಷಿ ಇದೆ. ನಾನು ಕಾರ್ಯಕ್ರಮದ ದಿನ ತುಂಬಾನೇ ನಕ್ಕಿದ್ದೇನೆ ಅಂತ ಬರೆದುಕೊಂಡಿದ್ದಾರೆ.
ಡಿಯರ್ ಕಾಮ್ರೇಡ್ ಸಿನಿಮಾದ ಸಮಯದಲ್ಲಿ ಡೆಕ್ಕನ್ ಕ್ರಾನಿಕಲ್‌ಗೆ ಕೊಟ್ಟಿದ್ದ ಸಂದರ್ಶನದಲ್ಲಿ ನನ್ನ ಬಾಲ್ಯವನ್ನು ಚೆನ್ನೈನಲ್ಲಿಯೇ ಕಳೆದಿದ್ದೇನೆ. ನಮ್ಮ ತಂದೆ ಇಲ್ಲಿ ಕೆಲಸ ಮಾಡುತ್ತಿದ್ದರು. ಚೆನ್ನೈನಲ್ಲಿನ ಡಿಫೆನ್ಸ್ ಕಾಲೋನಿಯಲ್ಲಿ ನಮ್ಮ ಕುಟುಂಬ ನೆಲೆಸಿತ್ತು. ರಸ್ಕಿನ್ ಎನ್ನುವ ಶಾಲೆಯಲ್ಲಿ ಓದುತ್ತಿದ್ದೆ. ನಾನು ಕಲಿತ ಮೊದಲ ಭಾಷೆ ತಮಿಳು ಎಂದಿದ್ದರು.












Click it and Unblock the Notifications