Darshan Thoogudeepa: ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟ ರಕ್ಷಿತಾ ಪ್ರೇಮ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ನಟ ದರ್ಶನ್ ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕಾಟೇರ ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ದರ್ಶನ್‌ಗೆ ಸಾಲು ಸಾಲು ಸಿನಿಮಾ ಆಫರ್ ಬಂದಿದ್ದವು. ಮುಂದಿನ 5-6 ವರ್ಷ ಅವರ ಕಾಲ್‌ಶೀಟ್ ಸಿಗದ ಮಟ್ಟಕ್ಕೆ ಸಿನಿಮಾ ಬುಕ್ ಆಗಿದ್ದವು.

ಆದರೆ ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್‌ ಜಾಮೀನಿನ ಮೇರೆ ಹೊರಗಡೆ ಬಂದ ಬಳಿಕ ಚಿಕಿತ್ಸೆ ಪಡೆಯುತ್ತಿದ್ದು, ಸಂಪೂರ್ಣ ಗುಣಮುಖರಾದ ಬಳಿಕ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಡೆವಿಲ್‌ ಸಿನಿಮಾ ಶೂಟಿಂಗ್ ಸಂದರ್ಭದಲ್ಲೇ ಅವರನ್ನು ಬಂಧಿಸಿದ್ದರಿಂದ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಂತಿದ್ದು, ಮೊದಲು ಡೆವಿಲ್ ಸಿನಿಮಾ ಮುಗಿಸಲಿದ್ದಾರೆ.

Rakshitha prem said this about darshan thoogudeep movies

ಈ ಬೆನ್ನಲ್ಲೇ ನಟ ದರ್ಶನ್ ಎರಡು ದೊಡ್ಡ ಸಿನಿಮಾಗಳನ್ನು ಕೈಬಿಟ್ಟಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಅದರಲ್ಲೂ ಪ್ರೇಮ್‌ ಜೊತೆಗಿನ ಸಿನಿಮಾ ಮಾಡದಿರಲು ದರ್ಶನ್ ನಿರ್ಧರಿಸಿದ್ದು ನಿರ್ಮಾಪಕರಿಗೆ ಅಡ್ವಾನ್ಸ್ ಹಣ ವಾಪಸ್ ಮಾಡಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿತ್ತು.

ಕೆವಿಎನ್ ಪ್ರೊಡಕ್ಷನ್ ಜೊತೆಗಿನ ಸಿನಿಮಾ ಮಾತ್ರವಲ್ಲದೆ, ಸೂರಪ್ಪ ಬಾಬು ಜೊತೆಗಿನ ಸಿನಿಮಾವನ್ನು ದರ್ಶನ್‌ ಕೈಬಿಟ್ಟಿದ್ದಾರೆ ಎಂದು ಸುದ್ದಿಯಾಗಿತ್ತು. ಸೂರಪ್ಪ ಬಾಬು ಜೊತೆಗಿನ ಸಿನಿಮಾ ಬಗ್ಗೆ ಅಭಿಮಾನಿಗಳು ಹೆಚ್ಚು ತಲೆ ಕೆಡಿಸಿಕೊಳ್ಳದೇ ಇದ್ದರೂ, ಪ್ರೇಮ್ ಜೊತೆಗಿನ ಸಿನಿಮಾ ಮಾಡಲೇಬೇಕು ಎಂದು ಅಭಿಮಾನಿಗಳು ಕೇಳಿಕೊಂಡಿದ್ದರು.

ಖುಷಿ ಸುದ್ದಿ ಕೊಟ್ಟ ರಕ್ಷಿತಾ

ದರ್ಶನ್‌ನ ಆಪ್ತ ಗೆಳಗಿ, ಪ್ರೇಮ್‌ ಪತ್ನಿ ರಕ್ಷಿತಾ ಇದೀಗ ದರ್ಶನ್‌ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ. ಪ್ರೇಮ್‌ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ನಟಿಸೋದು ಪಕ್ಕಾ ಎಂದು ಹೇಳಿದ್ದಾರೆ. ಅಡ್ವಾನ್ಸ್ ವಾಪಸ್ ಕೊಡುವ ವಿಚಾರ ದರ್ಶನ್ ಮಾತನಾಡಿಲ್ಲ, ಕೆವಿಎನ್ ಪ್ರೊಡಕ್ಷನ್ಸ್‌ ಬಳಿ ಕೂಡ ಅವರು ಈ ಬಗ್ಗೆ ಚರ್ಚೆ ಮಾಡಿಲ್ಲ, ಪ್ರೇಮ್ ಜೊತೆಗಿನ ಸಿನಿಮಾ ನಿಲ್ಲಲ್ಲ ಅವರು ಸಿನಿಮಾ ಮಾಡೋದು ಖಚಿತ ಎಂದಿದ್ದಾರೆ.

ಎರಡು ದಿನದ ಹಿಂದಷ್ಟೇ ನಾನು ದರ್ಶನ್ ಜೊತೆ ಮಾತನಾಡಿದ್ದೇನೆ, ದುಡ್ಡು ವಾಪಸ್ ಕೊಡುವಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ದರ್ಶನ್ - ಪ್ರೇಮ್‌ ಸಿನಿಮಾ ಮಾಡೋದು ಖಚಿತ. ಅಡ್ವಾನ್ಸ್ ವಾಪಸ್ ವಿಚಾರ ಕೆವಿಎನ್ ಪ್ರೊಡಕ್ಸನ್ ಕೂಡ ಯಾವುದೇ ಮಾಹಿತಿ ಕೊಟ್ಟಿಲ್ಲ. ನಮ್ಮ ಸಿನಿಮಾ ಬಗ್ಗೆ ಇಂತಹ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+