ಅಮಿತಾಬ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ರಾಜ್‌ಕುಮಾರ್ ದೊಡ್ಡ ಸ್ಟಾರ್ ಆದ್ರು: ಖ್ಯಾತ ನಿರ್ದೇಶಕ
ಕನ್ನಡ ಚಿತ್ರರಂಗದ ವರನಟ, ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರು ತಮ್ಮ ನಟನೆಯ ಮೂಲಕ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಸ್ಥಾನ ಪಡೆದವರು. ಕನ್ನಡಿಗರ ಪಾಲಿಗೆ ರಾಜ್‌ಕುಮಾರ್ ಅಂದರೆ ಒಂದು ರೀತಿ ಮನೆ ದೇವರು. ಅಷ್ಟರ ಮಟ್ಟಿಗೆ ರಾಜ್‌ಕುಮಾರ್ ಅವರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸಿದ್ದಾರೆ ಕನ್ನಡ ಪ್ರೇಕ್ಷಕರು. ಇಂತಹ ರಾಜ್‌ಕುಮಾರ್ ಅವರ ಬಗ್ಗೆ ಖ್ಯಾತ ನಿರ್ದೇಶಕರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಟಾಲಿವುಡ್ ಸ್ಟಾರ್ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮ (Ram Gopal Varma) ಅವರು ರಾಜ್‌ಕುಮಾರ್ ಮತ್ತೊಬ್ಬ ಖ್ಯಾತ ನಟನ ಸಿನಿಮಾಗಳನ್ನು ರಿಮೇಕ್ ಮಾಡಿದ್ದರಿಂದ ಯಶಸ್ಸು ಕಂಡಿದ್ದರು ಎಂದು ಹೇಳಿದ್ದಾರೆ. ಕಮಲ್ ಹಾಸನ್ ಕನ್ನಡ ವಿವಾದದ ಬೆನ್ನಲ್ಲೇ ರಾಮ್‌ಗೋಪಾಲ್ ವರ್ಮ ಹೇಳಿಕೆ ಕೂಡ ವಿವಾದಕ್ಕೆ ಕಾರಣವಾಗಿದೆ.
ಹೌದು, ಸದಾ ವಿವಾದಾತ್ಮಕ ಹಾಗೂ ನೇರ ಮಾತುಗಳಿಂದ ಆಗಾಗ ಸುದ್ದಿಯಾಗುವ ರಾಮ್ ಗೋಪಾಲ್ ವರ್ಮ ಅವರು ಇದೀಗ ರಾಜ್‌ಕುಮಾರ್ ವಿಷಯವನ್ನು ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು 'ರಾಜ್‌ಕುಮಾರ್ ಅವರು ಬಾಲಿವುಡ್‌ನ ಖ್ಯಾತ ನಟನ ಸಿನಿಮಾಗಳನ್ನು ರಿಮೇಕ್ ಮಾಡಿ ಸಕ್ಸಸ್ ಕಂಡರು' ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಸಂದರ್ಶನದಲ್ಲಿ ಮಾತನಾಡಿರುವ ಆರ್‌ಜಿವಿ, 'ಬಾಲಿವುಡ್ ನಟ ಬಿಗ್‌ಬಿ ಅಮಿತಾಬ್ ಬಚ್ಚನ್ (Amitabh Bachchan) ಅವರ ಸಿನಿಮಾಗಳನ್ನು ರಿಮೇಕ್ ಮಾಡಿ ರಾಜ್‌ಕುಮಾರ್ ಯಶಸ್ಸು ಕಂಡಿದ್ದರು, ದೊಡ್ಡ ಸ್ಟಾರ್ ಆದರು' ಎಂದು ಹೇಳಿದ್ದಾರೆ.

'ಇಡೀ ದಕ್ಷಿಣ ಭಾರತ ಚಿತ್ರರಂಗವೇ ಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡಿತ್ತು. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಅಮಿತಾಬ್ ಸಿನಿಮಾಗಳು ರಿಮೇಕ್ ಆಗ್ತಿತ್ತು. ರಜನಿಕಾಂತ್, ಚಿರಂಜೀವಿ, ಎನ್.ಟಿ.ರಾಮರಾವ್, ರಾಜ್‌ಕುಮಾರ್ ಸೇರಿದಂತೆ ಎಲ್ಲರೂ ಅಮಿತಾಬ್ ಬಚ್ಚನ್ ಅವರ 80-90ರ ದಶಕದ ಸಿನಿಮಾಗಳನ್ನು ರಿಮೇಕ್ ಮಾಡಿದ್ದರು' ಎಂದು ಹೇಳಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
'90ರ ದಶಕದಲ್ಲಿ ಬಚ್ಚನ್ ಐದು ವರ್ಷಗಳ ದೀರ್ಘ ವಿರಾಮ ತೆಗೆದುಕೊಂಡರು. ಅದೇ ಸಮಯದಲ್ಲಿ ಮ್ಯೂಸಿಕ್ ಕಂಪನಿಗಳು ಪ್ರವೇಶಿಸಿದವು. ಅವರು ತಮ್ಮ ಸಂಗೀತವನ್ನು ಮಾರಾಟ ಮಾಡಲು ಮಾತ್ರ ಸಿನಿಮಾಗಳನ್ನು ಮಾಡಿದರು. ಆಗ ಮೈನೆ ಪ್ಯಾರ್ ಕಿಯಾ ಅಂತಹ ಚಲನಚಿತ್ರಗಳು ಬಂದವು. ಆದರೆ ದಕ್ಷಿಣದವರು ಮಸಾಲಾ ಚಲನಚಿತ್ರಗಳನ್ನು ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ, ಅದನ್ನು ಕೂಡ ಅವರು ಅಮಿತಾಬ್ ಬಚ್ಚನ್ ಅವರಿಂದಲೇ ಪಡೆದರು. ಇದರಿಂದ ಆ ನಟರು ದೊಡ್ಡಮಟ್ಟಕ್ಕೆ ಬೆಳೆದರು, ಅದು ಇಂದಿಗೂ ಮುಂದುವರೆದಿದೆ' ಎಂದಿದ್ದಾರೆ.

'ಸರಿಯಾಗಿ ಗಮನಿಸಿದರೆ ದಕ್ಷಿಣ ಚಿತ್ರರಂಗದ ಹೆಚ್ಚಿನ ನಿರ್ದೇಶಕರು ಸಿನಿಮಾಗೆ ಹೆಚ್ಚು ಒಡ್ಡಿಕೊಳ್ಳುವುದಿಲ್ಲ. ಅವರು ನಮ್ಮಂತೆ ಸಿನಿಮಾ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಅವರು ತಳಮಟ್ಟಕ್ಕೆ ತುಂಬಾ ಹತ್ತಿರವಾಗಿದ್ದಾರೆ' ಎಂದೂ ರಾಮ್‌ಗೋಪಾಲ್ ವರ್ಮ ಹೇಳಿದ್ದಾರೆ. ಇನ್ನು ಆರ್‌ಜಿವಿ ಹೇಳಿಕೆಗೆ ಕನ್ನಡಿಗರಿಂದಲೂ ವಿರೋಧ ವ್ಯಕ್ತವಾಗುತ್ತಿದೆ. ರಾಜ್‌ಕುಮಾರ್ ಬಗ್ಗೆ ಸರಿಯಾಗಿ ತಿಳಿಯದೆ ರಾಮ್‌ಗೋಪಾಲ್ ವರ್ಮ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications