Rachita Ram: ದರ್ಶನ್ ಫೇಕ್ ಅಲ್ಲ ರಿಯಲ್ ಎಂಬರ್ಥದಲ್ಲಿ ರಚಿತಾ ರಾಮ್ ಪೋಸ್ಟ್..!
ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದವರ ಪೈಕಿ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಕೂಡ ಒಬ್ಬರು. ನಟಿ ರಚಿತಾ ರಾಮ್ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಆ ಪೋಸ್ಟ್ ಯಾರಿಗಾಗಿ ಮಾಡಿದ್ದಾರೆನ್ನುವುದು ಗೊಂದಲ ಸೃಷ್ಟಿ ಮಾಡಿದೆ. ಸಾಲು ಸಾಲು ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿ ಆಗಿದ್ದ ಡಿಂಪಲ್ ಕ್ವೀನ್ ರಚ್ಚು ಸೋಷಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದರು. ಆದರೀಗ ಅವರು ಮಾಡಿದ ಪೋಸ್ಟ್ ಅಭಿಮಾನಿಗಳಿಗೆ ಕನ್ಫ್ಯೂಸ್ ಆಗಿದೆ.
ಹೌದು... ರಚಿತಾ ರಾಮ್ ತಮ್ಮ ಪೋಸ್ಟ್‌ನಲ್ಲಿ ನಖಲಿ ಮುಖ ಇದ್ದವರು ಮಾತ್ರ ಬಣ್ಣ ಬಯಲಾಗದಂತೆ ನೋಡಿಕೊಳ್ಳಬೇಕು. ಆದರೆ ಅಸಲಿ ಮುಖ ಹೊತ್ತು ಜೀವನ ಮಾಡುತ್ತಿರುವವರು ಯಾವುದಕ್ಕೂ ಕೇರ್ ಮಾಡುವುದಿಲ್ಲ ಎಂದಿದ್ದಾರೆ. ಈ ಪೋಸ್ಟ್ ಅರ್ಥ ನೋಡಿದರೆ ರಚಿತಾ ರಾಮ್ ಇದನ್ನು ಯಾರಿಗೋ ಹೇಳಿದಂತಿದೆ. ಆದರೆ ಅದು ಯಾರು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.

ಆದರೆ ಇತ್ತೀಚೆಗೆ ಅವರಿಗೆ ಬಂದಿರುವ ಕಾಮೆಂಟ್‌ಗಳಿಗೆ ರಚಿತಾ ರಾಮ್ ಈ ಪೋಸ್ಟ್ ಮಾಡಿರಬಹುದು ಎಂದು ಊಹಿಸಲಾಗಿದೆ. ಹೌದು... ರಚಿತಾ ರಾಮ್ ದರ್ಶನ್ ಜೇಲಿಗೆ ಹೋದ ಬಳಿಕ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಬಂದಿದ್ದರು. ಅಲ್ಲದೆ ಅವರು ನಟ ದರ್ಶನ್ ಹಾಗೂ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಕೂಡ ಪೋಸ್ಟ್ ಹಾಕಿದ್ದರು. ಇದಾದ ಬಳಿಕ ಇದೀಗ ಅವರು ಮತ್ತೊಂದು ಪೋಸ್ಟ್ ಹಾಕಿದ್ದಾರೆ.
ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ದರ್ಶನ್ ಅವರ ಪರಿಸ್ಥಿತಿ ಹೀಗಿದ್ದರೂ ರಚಿತಾ ರಾಮ್ ಹೊಸ ಚಿತ್ರದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಜಮೀರ್ ಪುತ್ರ ಝೈದ್ ಖಾನ್ ಜೊತೆ ದೊಡ್ಡ ಬಜೆಟ್ ಸಿನಿಮಾವನ್ನು ಅವರು ಶುರು ಮಾಡುತ್ತಿದ್ದಾರೆ. ಈ ಸಮಯದಲ್ಲಿ ಸಾಕಷ್ಟು ಜನ ದರ್ಶನ್ ಕಷ್ಟದಲ್ಲಿ ಇದ್ದರೆ ನಿಮ್ಮ ದುಡಿಮೆ ನೋಡಿಕೊಳ್ಳುತ್ತಿದ್ದೀರಾ ಎಂದು ನೆಗೆಟಿವ್ ಕಾಮೆಂಟ್ ಅನ್ನು ಮಾಡುತ್ತಿದ್ದಾರೆ. ಇದಕ್ಕೆ ರಚಿತಾ ರಾಮ್ ಉತ್ತರ ಕೊಟ್ಟಿದ್ದಾರೆ ಎನ್ನಬಹುದು.

ಮತ್ತೊಂದು ಅರ್ಥದಲ್ಲಿ ದರ್ಶನ್ ಫೇಕ್ ಅಲ್ಲ ರಿಯಲ್ ಎಂಬರ್ಥದಲ್ಲಿ ರಚಿತಾ ರಾಮ್ ಪೋಸ್ಟ್ ಮಾಡಿರಬಹುದು ಎಂದು ನೆಟ್ಟಿಗರು ಊಹಿಸಿದ್ದಾರೆ. ಯಾಕೆಂದರೆ ನಾಲ್ಕು ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ, ಚಾರ್ಜ್‌ಶೀಟ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೆಚ್ಚು ಪಾತ್ರ ಇರುವುದು ಪವನ್ ಎಂಬಾತನದ್ದು ಎಂಬಂತಿದೆ. ದರ್ಶನ್ ಹಾಗೂ ಪವಿತ್ರಾ ಗೌಡಾಗೆ ಕೊಲೆ ಮಾಡಲು ಪ್ರಚೋದನೆ ನೀಡಿದ್ದು ಪವನ್ ಎಂಬಂತೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ದರ್ಶನ್ ಫೇಕ್ ಅಲ್ಲ ರಿಯಲ್ ಎಂಬರ್ಥದಲ್ಲಿ ಪೋಸ್ಟ್ ಹಾಕಿರಬಹುದು ಎಂದು ನೆಟ್ಟಿಗರು ಗೆಸ್ ಮಾಡಿದ್ದಾರೆ.
ದರ್ಶನ್ ಮೊದಲ ಭೇಟಿ ವೇಳೆ ರಚಿತಾ ರಾಮ್ ಹೇಳಿದ್ದೇನು?
ಹೌದು... ರಚಿತಾ "ಸಿನಿಮಾರಂಗಕ್ಕೆ ನನ್ನನ್ನು ಪರಿಚಯಿಸಿದ ದರ್ಶನ್ ಅವರು ನನಗೆ ಗುರು ಸಮಾನರು. ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದ ಅವರು ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಂಬಲು ಸ್ವಲ್ಪ ಕಷ್ಟ ಆಗುತ್ತಿದೆ"- ಇದು ನಟ ದರ್ಶನ್ ತೂಗುದೀಪ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದ ಬಳಿಕ ನಟಿ ರಚಿತಾ ರಾಮ್ ನೀಡಿದ ಮೊದಲ ಹೇಳಿಕೆಯಾಗಿದೆ.
"ನಾನು ಅವರ ಬ್ಯಾನರ್‌ನಿಂದ ಬಂದವಳು. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ದರ್ಶನ್ ಸರ್. ಇವತ್ತು ನಾನು ಏನೇ ಆಗಿದ್ದರೂ, ಅದು ಅವರಿಂದ. ಅವತ್ತು ಅವರು ಒಂದೇ ಒಂದು ಮಾತು 'ನೋ' ಎಂದು ಹೇಳಿಬಿಟ್ಟಿದ್ದರೆ. ಬಿಂದಿಯಾ ರಾಮ್, ರಚಿತಾ ರಾಮ್ ಆಗೋಕೆ ಸಾಧ್ಯವಾಗುತ್ತಿರಲಿಲ್ಲ. ಅವರ ಋಣ ನನ್ನ ಇಡೀ ಫ್ಯಾಮಿಲಿಗೆ ಇದೆ. ನಾನು ಭಾವುಕಳಾಗಿದ್ದೆ. ಅವರೇ, 'ಹೇ, ನೀನು ಆರಾಮಾಗಿರು' ಎಂದು ಧೈರ್ಯ ತುಂಬಿದರು. ಬಾಸ್, ನಾವೆಲ್ಲರೂ ನಿಮಗಾಗಿ ಕಾಯುತ್ತಿದ್ದೇವೆ. ಆದಷ್ಟು ಬೇಗ ನಮಗೆ ಒಳ್ಳೇ ಸುದ್ದಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಅಂತ ರಚಿತಾ ರಾಮ್ ಹೇಳಿದ್ದರು.
ಹೀಗಾಗಿ ದರ್ಶನ್ ಜೈಲಿಗೆ ಹೋದ ಸುದ್ದಿ ಕೇಳಿದ ಬಳಿಕ ಅವರು ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಆದರೆ ದರ್ಶನ್ ಜೈಲಿನಲ್ಲಿ ಇರುವಾಗ ರಚಿತಾ ರಾಮ್ ಹೊಸ ಚಿತ್ರದ ಮುಹೂರ್ತದಲ್ಲಿ ಕಾಣಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಕೆಂಡಮಂಡಲರಾಗಿದ್ದಾರೆ. ಹೀಗಾಗಿ ನಿಮಗಿದು ಬೇಕಾ ಎಂದು ಕಾಮೆಂಟ್ ಮಾಡುತ್ತಿದ್ದು, ಇದಕ್ಕೆ ರಚಿತಾ ರಾಮ್ ಉತ್ತರ ಕೊಟ್ಟಿರಬಹುದು ಎಂದು ಊಹಿಸಲಾಗುತ್ತಿದೆ.












Click it and Unblock the Notifications