Pushpa-2: ‘ಪುಷ್ಪ-2’ಗೆ ಹೀನಾಯ ಸೋಲು: ಕನ್ನಡಿಗರು ಬುದ್ಧಿ ಕಲಿಸಲು...

'ಪುಷ್ಪ-2' ಸಿನಿಮಾಗೆ ಕನ್ನಡಿಗರು ಆಘಾತದ ಮೇಲೆ ಆಘಾತ ನೀಡುತ್ತಿದ್ದಾರೆ. 'ಪುಷ್ಪ-2' ಸಿನಿಮಾ ಮೂಲಕ ಅದು ಮಾಡ್ತೀನಿ, ಇದು ಮಾಡಿಬಿಡ್ತೀನಿ ಅಂತಾ ಹೇಳುತ್ತಿದ್ದ ನಿರ್ದೇಶಕ ಸುಕುಮಾರ್‌ಗೆ ಸೋಲಿನ ಆಘಾತ ಎದುರಾಗಿದೆ.

ಕನ್ನಡ & ಕನ್ನಡ ಸಿನಿಮಾಗಳ ಬಗ್ಗೆ ಕೂಡ 'ಪುಷ್ಪ-2' ಸಿನಿಮಾ ಡೈರೆಕ್ಟರ್ ಸುಕುಮಾರ್ ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ 'ಪುಷ್ಪ-2' ಸಿನಿಮಾದ ಹೀರೋ ಅಲ್ಲು ಅರ್ಜುನ್ ಈ ವಿಚಾರದಲ್ಲಿ ಕಡಿಮೆ ಉರಿದಿಲ್ಲ ಎಂಬ ಆರೋಪ ಕನ್ನಡಿಗರದ್ದು, ಹೀಗಿದ್ದಾಗಲೇ 'ಪುಷ್ಪ-2'ಗೆ ಹೀನಾಯ ಸೋಲು....

Pushpa-2 Release Date And This Is What Happened In Karnataka

'ಪುಷ್ಪ-2'ಗೆ ಹೀನಾಯ ಸೋಲು....

ಕನ್ನಡಿಗರನ್ನ ಎದುರು ಹಾಕಿಕೊಂಡು ಯಾರು ತಾನೆ ಉಳಿಯಲು ಸಾಧ್ಯ ಹೇಳಿ? ಅದ್ರಲ್ಲೂ ಪರಭಾಷೆ ಸಿನಿಮಾಗಳ ಹಾವಳಿ ಕರ್ನಾಟಕ ರಾಜ್ಯದಲ್ಲಿ ಹೆಚ್ಚಾಗಿರುವ ಸಮಯದಲ್ಲೇ, ಈಗ ಕನ್ನಡಿಗರು ಸರಿಯಾಗೇ ಬುದ್ಧಿ ಕಲಿಸುತ್ತಾ & ಒಗ್ಗಟ್ಟಿನಿಂದ ಎಲ್ಲವನ್ನೂ ಎದುರಿಸುತ್ತಿದ್ದಾರೆ. ಇದೀಗ 'ಪುಷ್ಪ-2' ಸಿನಿಮಾ ಕೂಡ ಕನ್ನಡಿಗರ ಕೋಪದ ಕೆಂಗಣ್ಣಿನ ಮುಂದೆ ಸುಟ್ಟು ಭಸ್ಮ ಆಗಿ ಹೋಗಿದೆ ಅಂತಾ....

1000 ಕೋಟಿ ರೂಪಾಯಿ ಠುಸ್ ಪಟಾಕಿ!

ಕೂಸು ಹುಟ್ಟೋದಕ್ಕೂ ಮೊದಲೇ ಕುಲಾವಿ ಹೊಲಿಸಿದರು ಅನ್ನೋ ರೀತಿಯಲ್ಲೇ 'ಪುಷ್ಪ-2'ಗೆ ಕೂಡ ಹೆಚ್ಚಾಗಿ ಬಿಲ್ಡಪ್ ನೀಡಿ, ಇದೀಗ ಪುಷ್ಪ-2 ಸಿನಿಮಾ ಮಕಾಡೆ ಮಲಗಿದೆ ಎನ್ನಲಾಗ್ತಿದೆ. 'ಪುಷ್ಪ-2' ಸಿನಿಮಾ ಬಗ್ಗೆ ಚರ್ಚೆ ಕೆಲವು ದಿನಗಳಿಂದ ಬಲು ಜೋರಾಗಿ ನಡೆದಿತ್ತು. 'ಪುಷ್ಪ-2' ಸಿನಿಮಾ ಅಷ್ಟು ಕಾಸು ಮಾಡುತ್ತೆ... ಇಷ್ಟು ಸಾವಿರ ಕೋಟಿ ರೂಪಾಯಿ ಗಳಿಸುತ್ತೆ ಅಂತೆಲ್ಲಾ ಚರ್ಚೆ ನಡೆದವು.

ಆದರೆ ಇಂದು ರಿಲೀಸ್ ಆಗಿರುವ 'ಪುಷ್ಪ-2' ಹೀನಾಯವಾಗಿದೆ ಅಂತಾನೇ ಇದೀಗ ಪ್ರತಿಕ್ರಿಯೆ ನೀಡುತ್ತಿದ್ದಾರೆ ಕನ್ನಡ ಪ್ರೇಕ್ಷಕರು. ರಶ್ಮಿಕಾ ಮಂದಣ್ಣ & ಅಲ್ಲು ಅರ್ಜುನ್ ಜೋಡಿಯ, ಬಹು ನಿರೀಕ್ಷಿತ ಈ ಸಿನಿಮಾ ಅಟ್ಟರ್ ಫ್ಲಾಪ್ ಅಂತಾ ಪ್ರೇಕ್ಷಕರು ರಿಯಾಕ್ಷನ್ ಕೊಟ್ಟಿರುವ ವಿಡಿಯೋಸ್ ವೈರಲ್ ಆಗುತ್ತಿವೆ. ಅಲ್ಲದೆ ಕನ್ನಡಿಗರು ಇದನ್ನ ನೋಡಿ ಒಳ ಒಳಗೆ ಮುಗುಳು ನಕ್ಕಿದ್ದಾರೆ! ಯಾಕಂದ್ರೆ ಕನ್ನಡ ಪ್ರೇಕ್ಷಕರು & ಪುಷ್ಪ-2 ಸಿನಿಮಾ ಟೀಂ ನಡುವೆ ರಿಲೀಸ್‌ಗೆ ಮೊದಲೇ ಭಾರಿ ದೊಡ್ಡ ಕಾಳಗ ಶುರುವಾಗಿತ್ತು.

'ಪುಷ್ಪ-2' ಅಭಿಮಾನಿಗಳಿಗೆ ಭಾರಿ ನಿರಾಸೆ!

ಮತ್ತೊಂದು ಕಡೆ 'ಪುಷ್ಪ-2' ಟಿಕೆಟ್ ಬುಕಿಂಗ್ ಕೂಡ ಗೊಂದಲ ಸೃಷ್ಟಿ ಮಾಡಿತ್ತು ಎನ್ನುವ ಭಾರಿ ಗಂಭೀರ ಆರೋಪ ಕೇಳಿ ಬಂದಿತ್ತು. 'ಪುಷ್ಪ-2' ಸಿನಿಮಾದ 2ಡಿ ವರ್ಷನ್‌ಗೆ ಮಾತ್ರ ಬುಕ್ಕಿಂಗ್ ಮಾಡಲು ಸಾಧ್ಯ ಆಗಿದ್ದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಆದರೆ 'ಪುಷ್ಪ-2' ಸಿನಿಮಾದ 3ಡಿ ವರ್ಷನ್ ಕೂಡ ಬಿಡುಗಡೆ ಮಾಡುತ್ತೀವಿ ಅಂತಾ ಇದಕ್ಕೂ ಮೊದಲು ಇದೇ ಸಿನಿಮಾ ತಂಡ ಮಾತು ನೀಡಿತ್ತು. ಹೀಗಿದ್ದರೂ ಕೇವಲ 2ಡಿ ವರ್ಷನ್‌ ರಿಲೀಸ್ ಮಾಡಿರುವುದು ಭಾರಿ ದೊಡ್ಡ ಬೇಸರಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಅಲ್ಲು ಅರ್ಜುನ್ ನಿವೃತ್ತಿ ಗ್ಯಾರಂಟಿ?

'ಪುಷ್ಪ-2' ಹಂಗಿರುತ್ತೆ... 'ಪುಷ್ಪ-2' ಹಿಂಗಿರುತ್ತೆ... ಅಂತಾ ಬರೀ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ಆದರೆ 'ಪುಷ್ಪ-2' ಸಿನಿಮಾ ಮಾತ್ರ ಹೆಂಗೆಂಗೋ ಇದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. 'ಪುಷ್ಪ-2' ಸಿನಿಮಾ ಮಕಾಡೆ ಮಲಗಿ ಒದ್ದಾಡುತ್ತಿದೆ, ಬರೀ ಬಿಲ್ಡಪ್ ತೋರಿಸಿ ಈ ಸಿನಿಮಾ ಮಾಡಲಾಗಿದೆ ಅಂತಾ ಪ್ರೇಕ್ಷಕರು ಆರೋಪ ಮಾಡುತ್ತಿದ್ದಾರೆ. ಹೀಗೆ ಹೀನಾಯ ಸೋಲು ಕಂಡ ನಂತರ ಅಲ್ಲು ಅರ್ಜುನ್ ಒದ್ದಾಡಿ ಹೋಗಿದ್ದು, ಭವಿಷ್ಯದ ಬಗ್ಗೆ ಕೂಡ ನಟ ಅಲ್ಲು ಅರ್ಜುನ್‌ಗೆ ಚಿಂತೆ ಶುರುವಾಗಿದೆ. ಈ ಸಮಯದಲ್ಲೇ, ಅಲ್ಲು ಅರ್ಜುನ್ ತೆಲುಗು ಸಿನಿಮಾ ರಂಗದಿಂದ ನಿವೃತ್ತಿಗಾಗಿ ಮಹತ್ವದ ಒತ್ತಾಯ ಕೂಡ ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+