Pushpa 2: ಮತ್ತೆ 'ಪುಷ್ಪ 2' ರಿಲೀಸ್ ಡೇಟ್ ಚೇಂಜ್: ಇದೇ ದಿನ ಅಲ್ಲು ಅರ್ಜುನ್ ಸಿನಿಮಾ ರಿಲೀಸ್
ಹೈದರಾಬಾದ್ ಅಕ್ಟೋಬರ್ 24: 2024ರ ಬಹು ನಿರೀಕ್ಷಿತ ಚಿತ್ರ 'ಪುಷ್ಪ 2 ದಿ ರೂಲ್'ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಂದಿದೆ. ಪುಷ್ಪ 2 ಮುಂದೂಡಲ್ಪಟ್ಟಿಲ್ಲ ಆದರೆ ಪ್ರೀಪೋನ್ ಮಾಡಲಾಗಿದೆ. ಪುಷ್ಪ 2 ಸಿನಿಮಾ 6 ಡಿಸೆಂಬರ್ 2024 ರಂದು ಬಿಡುಗಡೆಯಾಗಬೇಕಿತ್ತು, ಆದರೆ ಈಗ ಚಿತ್ರ ಡಿಸೆಂಬರ್ 6ಕ್ಕೂ ಮೊದಲು ಬಿಡುಗಡೆಯಾಗಲಿದೆ.
ಇಂದು ಹೈದರಾಬಾದ್‌ನಲ್ಲಿ ನಡೆದ ಪುಷ್ಪ 2 ನಿರ್ಮಾಪಕರ ಗ್ರ್ಯಾಂಡ್ ನ್ಯಾಷನಲ್ ಪ್ರೆಸ್ ಮೀಟ್‌ನಲ್ಲಿ ಪುಷ್ಪ 2 ಬಿಡುಗಡೆ ದಿನಾಂಕದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹಾಗಾದರೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ?

ಪುಷ್ಪ 2 ಯಾವಾಗ ಬಿಡುಗಡೆಯಾಗುತ್ತದೆ?
ಇಂದು ಪತ್ರಿಕಾಗೋಷ್ಠಿಯಲ್ಲಿ 'ಪುಷ್ಪ 2' ತಯಾರಕರಾದ ಮೈತ್ರಿ ಮೂವೀಸ್ ಮೇಕರ್ಸ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ಹ್ಯಾಂಡಲ್‌ನಲ್ಲಿ 'ಪುಷ್ಪ 2' ನ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. 'ಪುಷ್ಪ 2' ಬಿಡುಗಡೆ ದಿನಾಂಕ ಘೋಷಣೆಯಾದ ಕೂಡಲೇ ಅಲ್ಲು ಅರ್ಜುನ್ ಅಭಿಮಾನಿಗಳ ಮುಖದಲ್ಲಿ ಸಂತಸದ ಭಾವ ಮೂಡಿದೆ. 'ಪುಷ್ಪ 2' ಈ ಹಿಂದೆ 6 ಡಿಸೆಂಬರ್ 2024 ರಂದು ಬಿಡುಗಡೆಯಾಗಬೇಕಿತ್ತು. ಈಗ 'ಪುಷ್ಪ 2' ಒಂದು ದಿನ ಮುಂಚಿತವಾಗಿ ಅಂದರೆ 5 ಡಿಸೆಂಬರ್ 2024 ರಂದು ಬಿಡುಗಡೆಯಾಗಲಿದೆ.
'ಪುಷ್ಪ 2' ಅಭಿಮಾನಿಗಳಿಗೆ ಈ ಗುಡ್ ನ್ಯೂಸ್ ನೀಡುತ್ತಿರುವಾಗಲೇ 'ಪುಷ್ಪ 2' ನಿರ್ಮಾಪಕರು ಹೀಗೆ ಬರೆದಿದ್ದಾರೆ- ಈಗ ಒಂದು ದಿನ ಮುಂಚಿತವಾಗಿ ಸಂಭ್ರಮಾಚರಣೆ ಶುರುವಾಗಲಿದೆ ಎಂದಿದ್ದಾರೆ. ಹೀಗಾಗಿ ಒಂದು ದಿನ ಮುಂಚಿತವಾಗಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಲಿದೆ ಪುಷ್ಪ 2 ಸಿನಿಮಾ. ಪುಷ್ಪರಾಜ್ ಒಂದು ದಿನ ಮುಂಚಿತವಾಗಿ ಯುದ್ಧಕ್ಕೆ ಬರುತ್ತಿದ್ದಾರೆ. ಅಭಿಮಾನಿಗಳು ಪುಷ್ಪ 2 ಡಿಸೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗುವ ಸಮಯವನ್ನು ಎದುರು ನೋಡುತ್ತಿದ್ದಾರೆ.
ಇತ್ತೀಚೆಗಷ್ಟೇ ಪುಷ್ಪ 2 ಚಿತ್ರೀಕರಣ
ಪುಷ್ಪ 2 ನಿರ್ದೇಶಕ ಸುಕುಮಾರ್ ಇತ್ತೀಚೆಗೆ ಅನಿಮಲ್ ಖ್ಯಾತಿಯ ನಟರಾದ ಸೌರಭ್ ಸಚ್‌ದೇವ, ಫಹದ್ ಫಾಸಿಲ್ ಮತ್ತು ಬ್ರಹ್ಮ ಅವರೊಂದಿಗೆ ಪುಷ್ಪ 2 ಚಿತ್ರದ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದರು. ಅನಿಮಲ್ ಖ್ಯಾತಿಯ ನಟ ಸೌರಭ್ ಸಚ್‌ದೇವ ಪುಷ್ಪ 2 ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂಬುದು ಈ ವೇಳಾಪಟ್ಟಿಯಿಂದ ದೃಢಪಟ್ಟಿದೆ. ಅದೇ ಹೊತ್ತಿಗೆ ಪುಷ್ಪ 2 ಚಿತ್ರದ ಬಾಕಿ ಉಳಿದಿರುವ ಚಿತ್ರೀಕರಣವನ್ನು ನವೆಂಬರ್ ವೇಳೆಗೆ ಮುಗಿಸುವ ಯೋಜನೆ ಇದೆ.

ಒಂದೇ ದಿನಾಂಕದಂದು ಎರಡು ಸಿನಿಮಾ ರಿಲೀಸ್?
ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಚಿತ್ರವು ಡಿಸೆಂಬರ್ 6 ರಂದು ಬಿಡುಗಡೆಯಾಗಲಿದೆ. ಹೀಗಿರುವಾಗ ಪುಷ್ಟಾ 2 ಸಿನಿಮಾ ಕೂಡ ಅದೇ ದಿನಾಂಕದಂದು ಬಿಡುಗಡೆಯಾಗುತ್ತಿತ್ತು. ಆದರೀಗ ಪುಷ್ಪ 2 ಮತ್ತು ಛಾವಾ ಚಿತ್ರಗಳ ಬಾಕ್ಸ್ ಆಫೀಸ್ ಸಂಘರ್ಷವೂ ಅಂತ್ಯಗೊಂಡಂತಾಗಿದೆ.












Click it and Unblock the Notifications