ಕನ್ನಡ, ತೆಲುಗು, ತಮಿಳು, ಮಲಯಾಳಂ & ಹಿಂದಿಯ ಬಳಿಕ ಈ ಭಾಷೆಯಲ್ಲಿ ಕೂಡ ‘ಸಲಾರ್’ ರಿಲೀಸ್!
ನಟ ಪ್ರಭಾಸ್ ಅವರ ಸಿನಿಮಾ ಅಬ್ಬರಕ್ಕೆ ಅಡೆತಡೆ ಇಲ್ಲ ಎನ್ನುವಂತಾಗಿದೆ. ಇನ್ನೇನು ಈ ಸಿನಿಮಾ 700 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆಗಳು ದಟ್ಟವಾಗಿವೆ. ಹೀಗಿದ್ದಾಗಲೇ ವಿದೇಶಿ ಭಾಷೆಗಳಿಗೆ ಕೂಡ, ಸಲಾರ್ ಡಬ್ಬಿಂಗ್ ಆಗಿ ರಿಲೀಸ್ ಆಗಲು ಶುರುವಾಗಿದೆ. ಈಗಾಗಲೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತೆ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿರುವ ಸಲಾರ್ ಈಗ ಈ ವಿದೇಶಿ ಭಾಷೆಯಲ್ಲಿ ಕೂಡ ಬಿಡುಗಡೆ ಆಗುತ್ತಿದೆ. ಯಾವುದು ಆ ಭಾಷೆ ಗೊತ್ತಾ?
ಅಂದಹಾಗೆ ಸಲಾರ್ ಬಗ್ಗೆ ಫಸ್ಟ್ ಲುಕ್ ಮೂಲಕವೇ ಅಭಿಮಾನಿಗಳು ಡಿಸೈಡ್ ಆಗಿದ್ದರು. ಈ ಸಿನಿಮಾ ನೆಕ್ಸ್ಟ್ ಲೆವೆಲ್ ಹೋಗುತ್ತೆ ಸಿನಿಮಾ ಇಂಡಸ್ಟ್ರಿಯಲ್ಲಿ ಅಬ್ಬರಿಸಿ ಇತಿಹಾಸವನ್ನ ನಿರ್ಮಾಣ ಮಾಡುತ್ತೆ ಅಂತಾ. ಆ ಎಲ್ಲಾ ಆಸೆಗಳು ಈಗ ಈಡೇರಿವೆ. ಅದ್ರಲ್ಲೂ ಪ್ರಭಾಸ್ ಅವರ ಅಭಿಮಾನಿಗಳಿಗೆ 'ಸಲಾರ್' ಒಂದು ಜಾಕ್‌ಪಾಟ್ ಇದ್ದಂತೆ, ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಯಾಕಂದ್ರೆ ನಟ ಪ್ರಭಾಸ್ ಅವರಿಗೆ, ಬಾಹುಬಲಿ ಬಳಿಕ ದೊಡ್ಡ ಬ್ರೇಕ್‌ನ ಕೊಟ್ಟಿದೆ 'ಸಲಾರ್' ಸಿನಿಮಾ. ಹೀಗಿದ್ದಾಗಲೇ, ಯುರೋಪ್‌ನ ಈ ಭಾಷೆಗೆ ಸಲಾರ್ ಚಿತ್ರ ಡಬ್ ಆಗಿ ರಿಲೀಸ್ ಆಗುತ್ತಿದೆ.

ಸಲಾರ್ ಯುರೋಪ್ ಅಬ್ಬರ ಶುರು!
ತಾಂತ್ರಿಕವಾಗಿ ಜಗತ್ತು ಬೆಳೆದಂತೆಲ್ಲಾ ಪ್ರಪಂಚ ಒಂದು ಹಳ್ಳಿಯಂತೆ ಆಗುತ್ತಿದೆ. ಯಾಕಂದ್ರೆ, ಯಾರು ಯಾವಾಗ ಬೇಕಾದ್ರೂ ಯಾರನ್ನಾದರೂ ಸಂಪರ್ಕ ಮಾಡಬಹುದು. ಹೀಗಿದ್ದಾಗಲೇ ಸಿನಿಮಾ ಜಗತ್ತು ಕೂಡ ಒಂದಾಗುತ್ತಿದ್ದು, ಜಾಗತಿಕ ಸಿನಿಮಾ ರಂಗ ಎಲ್ಲಾ ಭಾಷೆಗಳಲ್ಲೂ ರಿಲೀಸ್ ಆಗಲು ಸಿದ್ಧವಾಗುತ್ತಿದೆ. ಅದೇ ರೀತಿ 'ಸಲಾರ್' ಸಿನಿಮಾ ಕೂಡ ಹಲವು ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ಇದೀಗ ವಿದೇಶಿ ಭಾಷೆಯಲ್ಲಿ ಕೂಡ ಈ ಸಿನಿಮಾ ಅಬ್ಬರಿಸಲು ಮುಂದಾಗಿದೆ. ಸ್ಪ್ಯಾನಿಷ್ ಭಾಷೆಗೆ ಡಬ್ ಆಗಿರುವ 'ಸಲಾರ್' 2024ರ ಮಾರ್ಚ್ 7ಕ್ಕೆ ಭಾರಿ ಅಬ್ಬರದೊಂದಿಗೆ ರಿಲೀಸ್ ಆಗಲಿದೆ.
ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ ಕಲೆಕ್ಷನ್
ಈವರೆಗೂ ಸಲಾರ್ ಸುಮಾರು 650 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಇದೀಗ 700 ಕೋಟಿ ಕ್ಲಬ್ ಸೇರಲು ಮುನ್ನುಗ್ಗುತ್ತಿದೆ. ಹೀಗಾಗಿ ಕ್ರೇಜ್ ಇನ್ನೂ ಕಮ್ಮಿ ಆಗಿಲ್ಲ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ 15ನೇ ದಿನದ ಸಲಾರ್ ಕಲೆಕ್ಷನ್ ಗಮನ ಸೆಳೆದಿದೆ. ಯಾಕಂದ್ರೆ ಸಲಾರ್ ಸಿನಿಮಾ ತನ್ನ 15ನೇ ದಿನ ಕೂಡ 7.90 ಕೋಟಿ ರೂ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಹೀಗೆ ಹೊಸ ದಾಖಲೆ ಸೃಷ್ಟಿ ಮಾಡುತ್ತಿದೆ ಸಲಾರ್. ಮತ್ತೊಂದು ಕಡೆ ಭಾರತದ ನೆಲದಲ್ಲಿಯೇ ಸಿನಿಮಾ ಕಲೆಕ್ಷನ್ ಸುಮಾರು 400 ಕೋಟಿಗೆ ಹತ್ತಿರ ಇದೆ ಎಂಬ ಮಾಹಿತಿ ಹೊರಬೀಳುತ್ತಿದೆ.

'ಸಲಾರ್-2' ಯಾವಾಗ ಬರುತ್ತೆ?
ಈಗಿರುವ ಮಾಹಿತಿಗಳ ಪ್ರಕಾರ 'ಸಲಾರ್-2'ಗೆ ಬೇಕಾದ ಕಥೆ ಜೊತೆಗೆ ಸ್ಕ್ರಿಪ್ಟ್ ಕೂಡ ಸಿದ್ಧ ಆಗಿದೆ ಅಂತಾ ಹೇಳಲಾಗುತ್ತಿದೆ. ಕೆಜಿಎಫ್ ಖ್ಯಾತಿ ಡೈರೆಕ್ಟರ್ ಪ್ರಶಾಂತ್ ನೀಲ್, ಸಲಾರ್-2 ಸಿನಿಮಾ ಶೂಟಿಂಗ್ ಆರಂಭಿಸಲು ಬೇಕಾದ ತಯಾರಿ ನಡೆಸಲಿದ್ದಾರಂತೆ. ನಟ ಪ್ರಭಾಸ್ ಕೂಡ ಸಿನಿಮಾ ತಂಡಕ್ಕೆ ಆದಷ್ಟು ಬೇಗ ಸಾಥ್ ನೀಡಲಿದ್ದಾರೆ. ಈ ಮೂಲಕ 2025ಕ್ಕೆ 'ಸಲಾರ್-2' ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲು ಶುರು ಮಾಡುತ್ತೆ ಎಂಬ ಸುದ್ದಿ ಫ್ಯಾನ್ಸ್‌ಗೆ ಖುಷಿ ಕೊಡುತ್ತಿದೆ.
#SalaarCeaseFire se estrenará en América Latina el 7 de marzo de 2024, en español, lanzado por @Cinepolis.
— Salaar (@SalaarTheSaga) January 5, 2024
¡Prepárate para la acción épica! 💥#SalaarCeaseFire is releasing in Latin America on 7th March 2024, in 𝐒𝐩𝐚𝐧𝐢𝐬𝐡.@IndiaCinepolis#Salaar #Prabhas #PrashanthNeel… pic.twitter.com/YizTapcFWF
ಒಟ್ನಲ್ಲಿ ಕನ್ನಡಿಗರ ತೆಲುಗು ಸಿನಿಮಾ ಅಂತಲೇ ಐಕಾನ್ ಆಗಿರುವ ಸಲಾರ್, ಇದೀಗ ತನ್ನ ಅಬ್ಬರವನ್ನು ಯುರೋಪ್‌ಗೆ ಕೂಡ ವಿಸ್ತರಣೆ ಮಾಡಿದೆ. ಈ ಮೂಲಕ ಅಭಿಮಾನಿಗಳು ಈ ಸಿನಿಮಾವನ್ನು ತಮ್ಮ ಇಷ್ಟದ ಭಾಷೆಯಲ್ಲಿ ಕೂಡ ಕಣ್ತುಂಬಿಕೊಳ್ಳಬಹುದು. ಆದ್ರೆ ಅವರ ಆಸೆ ಈಡೇರಲು ಒಂದಷ್ಟು ದಿನ ಕಾಯಬೇಕಿದೆ. ಸ್ಪ್ಯಾನಿಷ್ ಭಾಷೆಯಲ್ಲಿ ಕೂಡ ಸಲಾರ್, ಅಬ್ಬರಿಸುವ ಮುನ್ಸೂಚನೆ ಸಿಗುತ್ತಿದೆ.












Click it and Unblock the Notifications