'ಸತ್ತು ಬದುಕಿದ' ನಟಿ ಪೂನಂ ಪಾಂಡೆ ವಿರುದ್ಧ ದೂರುಗಳ ಸರಮಾಲೆ: ಕ್ರಮ ತೆಗೆದುಕೊಳ್ತಾರಾ ಪೊಲೀಸರು?
ಮುಂಬೈ, ಫೆಬ್ರವರಿ. 04: ಕಳೆದೆರಡು ದಿನಗಳಿಂದ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ತನ್ನ ಸಾವಿನ ವಿಷಯದಲ್ಲಿ ಆಡಿದ ಆಟಕ್ಕೆ ಜಗತ್ತೆ ಶಾಕ್ ಆಗಿದೆ. ಇದಕ್ಕೆ ಹಲವು ಮಂದಿ ಕಿಡಿಕಾರಿದ್ದು, ಆಕೆಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಮುಂಬೈ ಪೊಲೀಸರಿಗೆ ದೂರು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಸಾವಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದ್ದಕ್ಕಾಗಿ ಹಲವು ಸೆಲೆಬ್ರಿಟಿಗಳು, ವೈದ್ಯರು ಮತ್ತು ರಾಜಕಾರಣಿಗಳು ಅವರನ್ನು ಟೀಕಿಸಿದ್ದಾರೆ. ಸಾಮಾನ್ಯ ಜನರು ಕೂಡ ಅವರ ಭಾವನೆಗಳ ಜೊತೆಗೆ ಆಟವಾಡಿದ್ದಕ್ಕೆ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೆ, ಮಹಾರಾಷ್ಟ್ರ ಶಾಸಕ ಸತ್ಯಜೀತ್ ತಾಂಬೆ ಮುಂಬೈ ಪೊಲೀಸರನ್ನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸಾವಿನ ಬಗ್ಗೆ ಸುಳ್ಳು ಹಬ್ಬಿಸಿ ತೊಂದರೆಗೆ ಸಿಲುಕಿದ ಪೂನಂ!
ಶನಿವಾರ (ಫೆಬ್ರವರಿ 03) ರಂದು ಮಹಾರಾಷ್ಟ್ರ ಶಾಸಕ ಸತ್ಯಜೀತ್ ತಾಂಬೆ, ಪೂನಂ ಪಾಂಡೆ ತಮ್ಮ ಸಾವಿನ ಸುಳ್ಳು ಸುದ್ದಿಯನ್ನು ಹರಡಿದ್ದಕ್ಕಾಗಿ ಮುಂಬೈ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸ್ವತಂತ್ರ ಸದಸ್ಯರಾದ ಸತ್ಯಜೀತ್ ತಾಂಬೆ, ತಮ್ಮನ್ನು ತಾವು ಪ್ರಚಾರ ಮಾಡಿಕೊಳ್ಳಲು ಇಂತಹ ಸ್ಟಂಟ್‌ಗಳನ್ನು ಮಾಡುವವರಿಗೆ ಇವರು ಉದಾಹರಣೆ ನೀಡಿದ್ದಾರೆ. ಹೀಗಾಗಿ ಪೂನಂ ಪಾಂಡೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.
ಗರ್ಭಕಂಠದ ಕ್ಯಾನ್ಸರ್‌ನಿಂದ 32 ವರ್ಷದ ಬಾಲಿವುಡ್ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂಬುದು ತೀವ್ರ ಚರ್ಚೆಗೆ ಒಳಗಾಗಿತ್ತು. ಜೊತೆಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿತ್ತು. ಇದಾದ ಒಂದು ದಿನದ ನಂತರ ತಾನು ಜೀವಂತವಾಗಿದ್ದೇನೆ ಎಂದು ಆಕೆ ಘೋಷಿಸಿದರು. ಜೊತೆಗೆ ಗರ್ಭಕಂಠದ ಕ್ಯಾನ್ಸರ್ ರೋಗದ ಬಗ್ಗೆ "ವಿಮರ್ಶಾತ್ಮಕ ಜಾಗೃತಿ" ಹರಡಲು ತಮ್ಮ ಸಾವಿನ ಸುದ್ದಿಯನ್ನು ಪ್ರಕಟಿಸಲಾಯಿತು ಎಂದು ತಿಳಿಸಿದ್ದರು. ಇದು ಜನರನ್ನು ಶಾಕ್‌ಗೆ ನೂಕಿತ್ತು.
ಪೂನಂ ಪಾಂಡೆ ಅವರು "ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯನ್ನು ನೀಡಿದ್ದಾರೆ ಅಥವಾ ಪ್ರಕಟಿಸಿದ್ದಾರೆ" ಎಂದು ಶಾಸಕ ಸತ್ಯಜೀತ್ ತಾಂಬೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಗರ್ಭಕಂಠದ ಕ್ಯಾನ್ಸರ್‌ಗೆ ಒಳಗಾದವರು ಸಾಯುತ್ತಾರೆ ಎಂಬ ಸುದ್ದಿಯು ರೋಗದ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಿಲ್ಲ. ಇಡೀ ಸಂಚಿಕೆಯು ಗರ್ಭಕಂಠದ ಕ್ಯಾನ್ಸರ್‌ನ ಗಂಭೀರ ಸ್ವರೂಪವನ್ನು ತೆಗೆದುಹಾಕಿ, ಗಮನವನ್ನು ಸಂಪೂರ್ಣವಾಗಿ ಸೆಲಬ್ರಿಟಿಗಳತ್ತ ತಿರುಗಿಸುತ್ತದೆ. ಅರಿವು ಮೂಡಿಸುವ ಬದಲು ನಟಿ ಕ್ಯಾನ್ಸರ್‌್ನಿಂದ ಬದುಕುಳಿದವರನ್ನು ತಮಾಷೆ ಮಾಡಿದ್ದಾರೆ " ಎಂದು ಶಾಸಕ ಸತ್ಯಜೀತ್ ತಾಂಬೆ ಆರೋಪಿಸಿದ್ದಾರೆ.

ಪೂನಂ ಪಾಂಡೆ ವಿರುದ್ಧ ಸಿನಿ ಕಾರ್ಮಿಕರ ಸಂಘ ವಾಗ್ದಾಳಿ
ಅಖಿಲ ಭಾರತೀಯ ಸಿನಿ ವರ್ಕರ್ಸ್ ಅಸೋಸಿಯೇಷನ್ ಕೂಡ ಪೂನಂ ಪಾಂಡೆ ವಿರುದ್ಧ ಎಫ್‌ಐಆರ್‌ಗೆ ಒತ್ತಾಯಿಸಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಶನಿವಾರ ಟ್ವಿಟ್ಟರ್‌ನಲ್ಲಿ AICWA "ಸ್ವಯಂ ಪ್ರಚಾರಕ್ಕಾಗಿ ಗರ್ಭಕಂಠದ ಕ್ಯಾನ್ಸರ್ ಅನ್ನು ಬಳಸುವುದು ಸ್ವೀಕಾರಾರ್ಹವಲ್ಲ. ಗರ್ಭಕಂಠದ ಕ್ಯಾನ್ಸರ್‌ನಿಂದ ರೂಪದರ್ಶಿ ಮತ್ತು ನಟಿ ಪೂನಂ ಪಾಂಡೆ ಅವರ ನಿಧನದ ಸುಳ್ಳು ಸುದ್ದಿ ಭಾರತೀಯ ಚಲನಚಿತ್ರೋದ್ಯಮದ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಈ ಸುಳ್ಳು ಸುದ್ದಿಯನ್ನು ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಅವರು ಪ್ರಚಾರಕ್ಕಾಗಿ ಮಾಡಿದ್ದಾರೆ ಎಂದು ಅವರ ಮ್ಯಾನೇಜರ್ ಖಚಿತಪಡಿಸಿದ್ದಾರೆ. ಈ ನಕಲಿ ಸುದ್ದಿಯು ಆಕೆಗೆ ಗೌರವ ಸಲ್ಲಿಸಿದ ಎಲ್ಲ ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
"ಕೇವಲ ತಮ್ಮ PR ಪ್ರಚಾರಕ್ಕಾಗಿ ನಕಲಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ದಯವಿಟ್ಟು ಪೂನಂ ಪಾಂಡೆ ಮತ್ತು ಅವರ ಮ್ಯಾನೇಜರ್ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಾವು ಮನವಿ ಮಾಡಿಕೊಳ್ಳುತ್ತೇವೆ. ಅಂತಹ ಸುಳ್ಳು ಸುದ್ದಿಗಳನ್ನು ಯಾರಿಂದಲೂ ಪ್ರಸಾರ ಮಾಡದಂತೆ ಅವರ ವಿರುದ್ಧ ಕಠಿಣ ಕ್ರಮ ಅಗತ್ಯ. ಹೆಚ್ಚಿನ ಭಾವನಾತ್ಮಕ ಮೌಲ್ಯಗಳನ್ನು ಹೊಂದಿರುವ ನಮ್ಮ ಭಾರತೀಯ ಚಲನಚಿತ್ರೋದ್ಯಮದಲ್ಲಿ ಇಂತಹ ಅಗ್ಗದ ಪ್ರಚಾರವನ್ನು ಸ್ವೀಕರಿಸಲಾಗದು "ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications