ನಟಿ ಪೂಜಾ ಹೆಗ್ಡೆಗೆ ಎದುರಾಯ್ತು ಬಿಗ್ ಶಾಕ್: ರಶ್ಮಿಕಾಗೆ ಅದೃಷ್ಟ ಮಳೆ!
ಕನ್ನಡತಿ ಹಾಗೂ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರಿಗೆ ಬ್ಯಾಡ್ ಲಕ್ ಶುರುವಾಗಿದೆ ಎನ್ನುವ ಮಾತು ಶುರುವಾಗಿದೆ. ಇದಕ್ಕೆ ಕಾರಣ ಪೂಜಾ ಅವರ ಸಾಲು ಸಾಲು ಸಿನಿಮಾಗಳು ಸೋಲುತ್ತಿರುವುದು. ಈ ಹಿಂದೆ ಪೂಜಾ ಹೆಗ್ಡೆ ಅವರ ಹ್ಯಾಟ್ರಿಕ್ ಸಿನಿಮಾಗಳು ಸೋತಿದ್ದವು. ಕೆಲವೇ ವರ್ಷಗಳ ಮುಂಚೆ ಪೂಜಾ ಹೆಗ್ಡೆ ಅವರು ಮುಟ್ಟಿದ್ದೆಲ್ಲವೂ ಚಿನ್ನ ಎನ್ನುವ ಪರಿಸ್ಥಿತಿ ಇತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಅವರ ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ. ಮೊದಲೆಲ್ಲಾ ಪೂಜಾ ಸಿನಿಮಾದಲ್ಲಿ ಇದ್ದರೆ ಸಾಕು ಸಿನಿಮಾ ಗೆಲ್ಲುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿತ್ತು. ಆದರೆ ಈಗ ಆಫರ್‌ಗಳು ಸಹ ಕಡಿಮೆಯಾಗುತ್ತಿವೆ ಅಂತಾ ಹೇಳಲಾಗುತ್ತಿದೆ.
ತುಳು ಮನೆತನದ ಪೂಜಾ ಹೆಗ್ಡೆ ಅವರು ತಮಿಳು ಮತ್ತು ತೆಲುಗು ಭಾಷೆಯ ಸಿನಿಮಾಗಳಲ್ಲಿ ಸೂಪರ್ ಹಿಟ್ ಮೂವಿಗಳನ್ನು ಕೊಟ್ಟಿದ್ದಾರೆ. ಅವರು ಯಾವಾಗಲೂ ಸ್ಟಾರ್ ನಟರು ಹಾಗೂ ಒಳ್ಳೆಯ ಕಥೆ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲದೇ ಅವರಿಗೆ ಇರುವ ಗ್ಲಾಮರ್ ಮತ್ತು ಅಭಿನಯ ಚತುರತೆ ಅವರ ಕೈಹಿಡಿಯುತ್ತಿದೆ ಎಂದು ಸಿನಿಮಾ ಅಭಿಮಾನಿಗಳು ನಂಬಿದ್ದರು. ಆದರೆ ಇದೀಗ ಪೂಜಾ ಅವರ ಇತ್ತೀಚಿನ ಯಾವ ಸಿನಿಮಾವೂ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಸಿನಿಮಾಗಳ ಬದಲಿಗೆ ಅವರ ಡ್ಯಾನ್ಸ್‌ಗಳಿಗೆ ಸೀಮಿತರಾಗಿದ್ದಾರೆ. ಹೀಗಾಗಿ ಇವರಿಗೆ ಲಕ್ ಕೈಕೊಟ್ಟಿದೆಯೇ ಎನ್ನುವ ಮಾತು ಸಿನಿಮಾರಂಗದಲ್ಲಿ ಜೋರಾಗಿದೆ.

ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ ಅವರು ಇತ್ತೀಚಿನ ದಿನಗಳಲ್ಲಿ ನಟಿಸಿರುವ ಪ್ರಮುಖ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಹೊಸ ಸಿನಿಮಾಗಳ ಆಫರ್ ಕಡಿಮೆ ಆಗುತ್ತಿವೆ ಎಂದು ಹೇಳಲಾಗುತ್ತಿದೆ. ಪೂಜಾ ಹೆಗ್ಡೆ 2012ರಲ್ಲೇ ಸಿನಿಮಾರಂಗಕ್ಕೆ ಬಂದರು. ಅವರು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇದಾದ ಮೇಲೆ ಹಿಂದಿಯಲ್ಲೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ಅವರಂತೆ ಪೂಜಾ ಹೆಗ್ಡೆ ಅವರಂತೆ ಬಲವಾಗಿ ಸಿನಿಮಾರಂಗದಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗುತ್ತಿಲ್ಲ.
ಕನ್ನಡದಿಂದ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಮಿಂಚಿ ಇದೀಗ ಬಾಲಿವುಡ್‌ನಲ್ಲಿಯೂ ಸದ್ದು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಅವರು ಮಾಡುತ್ತಿರುವ ಸಿನಿಮಾಗಳು ಕೋಟಿ..ಕೋಟಿ ಕ್ಲಬ್‌ಗಳಿಗೆ ಸೇರ್ಪಡೆ ಆಗಿ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಿವೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ಪೂಜಾ ಹೆಗ್ಡೆ ಅವರಿಗೆ ಅವಕಾಶಗಳು ಸಿಗುತ್ತಿಲ್ಲ, ಸಿಕ್ಕ ಸಿನಿಮಾಗಳು ಫ್ಲಾಪ್ ಆಗುತ್ತಿವೆ ಎಂದು ಅವರ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
ಪೂಜಾ ಅವರು ನಟ ಅಲ್ಲು ಅರ್ಜುನ್ ಅವರೊಂದಿಗೆ ನಟಿಸಿದ್ದ ಅಲಾ ವೈಕುಂಟಪುರಮುಲೋ ಸೂಪರ್ ಹಿಟ್ ಆಗಿತ್ತು. ಆದರೆ ಇದಾದ ಮೇಲೆ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿನಿಮಾರಂಗದಲ್ಲಿ ಸಿಗಲಿಲ್ಲ. 2021ರಿಂದ ಅವರ ಸಿನಿಮಾಗಳು ಹಿಟ್ ಕಡೆ ಮುಖ ಮಾಡುತ್ತಿಲ್ಲ. ಸ್ಟಾರ್ ನಟರೊಂದಿಗೆ ಅಭಿನಯಿಸಿರುವ ಸಿನಿಮಾಗಳೇ ಮಕಾಡೆ ಮಲಗುತ್ತಿವೆ ಎನ್ನುವ ಟಾಕ್ ಶುರುವಾಗಿದೆ. ಈಚೆಗೆ ಅವರು ಕೂಲಿ ಸಿನಿಮಾದ ಮೋನಿಕಾ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವೂ ಪೂರ್ಣ ಪ್ರಮಾಣದಲ್ಲಿ ಹಿಟ್ ಆಗುವಂತೆ ಕಾಣುತ್ತಿಲ್ಲ. ಪೂಜಾ ಅವರಿಗೆ ಮತ್ತೆ ಹಿಟ್ ಸಿಗಲಿ ಎಂದು ಅವರು ಅಭಿಮಾನಿಗಳು ಕಾಯುತ್ತಿದ್ದಾರೆ.












Click it and Unblock the Notifications